ರಾಹುಲ್ ಹೊಸ ನೋಟ ಜಾಲತಾಣದಲ್ಲಿ ವೈರಲ್.

 

ಕಾಂಗ್ರೆಸ್ ಮಾಜಿ ಆಧ್ಯಕ್ಷ ಹಾಗು ಸಂಸದ ರಾಹುಲ್ ಗಾಂಧಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಾಣಿಸಿಕೊಂಡ ಅವರ ಹೊಸ ನೋಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಲು ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಲಂಡನ್‌ಗೆ ಆಗಮಿಸಿದ್ದು ಅವರ ಟ್ರಿಮ್ ಮಾಡಿಕೊಂಡ ಗಡ್ಡ ಮತ್ತು ತಲೆ ಕೂದಲಿನ ಹೊಸ ಲುಕ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಭಾರತ್ ಜೋಡೋ ಪಾದಯಾತ್ರೆ ನಡೆಸಿದ ರಾಹುಲ್ ಗಾಂಧಿ, ಗಡ್ಡ ಬಿಟ್ಟಿದ್ದರು.ಇದೀಗ ಅವರು ಗಡ್ಡ ಮತ್ತು ತಲೆ ಕೂದಲು ಟ್ರಿಮ್ ಮಾಡಿಕೊಂಡು ಕೇಂಬ್ರಿಜ್ಡ್ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ೨೧ನೇ ಶತಮಾನದಲ್ಲಿ ಕೇಳುವುದು ಮತ್ತು ಕಲಿಯುವುದು ಎಂಬ ವಿಷಯದ ಕುರಿತು ಮಾತನಾಡಿದ ರಾಹುಲ್ ಗಾಂಧಿ ಅವರು ಬಿಳಿ ಟೀ ಶರ್ಟ್ ಬದಲಿಗೆ ಸೂಟ್ ಧರಿಸಿರುವುದು ಕಂಡುಬಂದಿದೆ.ರಾಹುಲ್ ಭಾರತ್ ಜೋಡೋ ಯಾತ್ರೆಯ ಕುರಿತು ವಿಶ್ವಾದ್ಯಂತ ಸಂವಾದದ ಮಾಡುವ ಅಗತ್ಯತೆಯ ಮೇಲೆ ಕೇಂದ್ರೀಕರಿಸಿದ್ದಾರೆ.ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅವರ ೧೪೫ ದಿನಗಳ ಪಾದಯಾತ್ರೆಯ ಮುಕ್ತಾಯದ ನಂತರ, ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ.ರಾಹುಲ್ ಗಾಂಧಿ ಅವರ ಹೊಸ ಲುಕ್‌ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಅಭಿಪ್ರಾಯ ಹಂಚಿಕೊಂಡಿದ್ದಯ ಬಹುತೇಕ ಮಂದಿ ರಾಹುಲ್ ಅವರ ಹೊಸ ಲುಕ್ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ.ಇನ್ನೂಕೆಲವು ಮಂದಿ ಹೊಸ ಲುಕ್ ಅಂದರೇನು ರಾಹುಲ್ ಗಾಂಧಿ ರೂಪದರ್ಶಿಯೇ ಅಥವಾ ರಾಜಕಾರಣಿಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ಲುಕ್ ಪರ ವಿರೋಧಕ್ಕೂ ಕಾರಣವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ :

Wed Mar 1 , 2023
ಹುಬ್ಬಳ್ಳಿ : ರೈಲು ಪ್ರಯಾಣಿಕರಿಗೆ ಸಿಹಿಸುದ್ದಿಯಾಗಿದ್ದು,ಟ್ರೇನ್ ಆನ್ ಡಿಮ್ಯಾಂಡ್ ಆಧಾರದ ಮೆರೆಗೆ ಮಾ.6 ರಿಂದ ಮತ್ತೆ ಧಾರವಾಡ-ಬೆಳಗಾವಿ ರೈಲು ಆರಂಭವಾಗಲಿದೆ. ಈ ಕುರಿತ ಕಂಪ್ಲೀಟ್‌ ಮಾಹಿತಿ ಇಲ್ಲಿದೆ ಓದಿ.ನೈಋತ್ಯ ರೈಲ್ವೆ ಧಾರವಾಡ ಬೆಳಗಾವಿ ಧಾರವಾಡ ಕಾಯ್ದಿರಿಸದ ವಿಶೇಷ ರೈಲನ್ನು ಮಾ.6 ರಿಂದ ಆರಂಭವಾಗಲಿದ್ದು, ರೈಲು ಸಂಖ್ಯೆ 07357 ಧಾರವಾಡ ಬೆಳಗಾವಿ ರೈಲು ಧಾರವಾಡದಿಂದ ಬೆಳಗ್ಗೆ 8:15 ಕ್ಕೆ ಹೊರಟು 10:45 ಕ್ಕೆ ಬೆಳಗಾವಿ ತಲುಪುತ್ತದೆ. ಸದ್ಯದ ಮಾಹಿತಿ ಪ್ರಕಾರ ಮಾರ್ಚ್ […]

Advertisement

Wordpress Social Share Plugin powered by Ultimatelysocial