ಜಿ ಎಸ್ ಟಿ, ರಾಜ್ಯ ಬಿಜೆಪಿ ಸರ್ಕಾರದ ಸಾಧನಾ ಸಮಾವೇಶದ ಬಗ್ಗೆ ವೀರಪ್ಪ ಮೊಯ್ಲಿ ವಾಗ್ದಾಳಿ

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದ್ರು.. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣ ಕಾಂಗ್ರೆಸ್ ಕಛೇರಿಯಲ್ಲಿ ಇದೇ ತಿಂಗಳ 21 ರಂದು ನಡೆಯಲಿರುವ ರಾಜಭವನ ಚಲೋ ಕಾರ್ಯಕ್ರಮದ ಪೂರ್ವ ಬಾವಿ ಸಭೆಯ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇದ್ದಂತಹ ಜೀರೋ ಪರ್ಸೆಂಟ್, ಈಗ ಐದು ಪರ್ಸೆಂಟ್ ಆಗ್ತಾ ಇದೆ. ಅಧಿಕಾರದ ನಿರಂಕುಶ ಪ್ರಭುತ್ವದ ಪರಮನು ಮೋದಿಯದ್ದು, ಅದರ ವಿರುದ್ದ ಪ್ರತಿಭಟನೆ ಮಾಡ್ತೆವೆ ಎಂದು ಕೇಂದ್ರ ಸರ್ಕಾರದ ವಿರುದ್ದ ಮೊಯ್ಲಿ ವಾಗ್ದಾಳಿ ನಡೆಸಿದ್ರು..

ಸಾಧನಾ ಸಮಾವೇಶದ ಕುರಿತು ಮಾಜಿ ಸಚಿವರ ಪ್ರತಿಕ್ರಿಯೆ

ರಾಜ್ಯ ಸರ್ಕಾರ ಮೂರು ವರ್ಷದ ಹಾಗೂ ಬಸವರಾಜ್ ಬೊಮ್ಮಯಿ ಅವರ ಒಂದು ವರ್ಷದ ಆಡಳಿತ ಸಾಧನಾ ಸಮಾವೇಶದ ಬಗ್ಗೆ ಪ್ರತಿಕ್ರಿಯೆ ನೀಡದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು, ಏನಂತಾ ಸಮಾವೇಶ ಮಾಡ್ತಾರೆ..? ಒಂದು ಕೈಗಾರಿಕೆ ತಂದಿದ್ದಾರಾ? ಶಾಂತಿ ಇದೇಯಾ..? ಕಾನೂನು ಸುವ್ಯವಸ್ಥೆ ಇದೇಯಾ..? ಏತಕಾಗಿ ಈ ಸಮಾವೇಶ..? ಕಾಂಗ್ರೆಸ್ ನವರು ಬಿಟ್ಟು ಹೋದ ತಿಳಿಯಾದ ನೀರನ್ನು ಜಲವನ್ನ ಕದಡಿದಂತಹ ಸಮಾವೇಶ ಇದು ಎಂದು ಟೀಕೆ ಮಾಡಿದ್ರು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಿತ್ತೋದ ಬಸ್ ನಿಲ್ದಾಣದ ಉದ್ಘಾಟನೆಗೆ MLA ಬದಲು ಎಮ್ಮೆ ಚೀಫ್ ಗೆಸ್ಟ್ ಮಾಡಿದ ಸ್ಥಳೀಯರು..!

Wed Jul 20 , 2022
ಗದಗ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರು ಗ್ರಾಮದಲ್ಲಿ ಬಿದ್ದುಹೋಗಿರುವ ಬಸ್ ನಿಲ್ದಾಣದ ಎದುರು ತೆಂಗಿನ ಗರಿಯ ಮೂಲಕ ಚಪ್ಪರ ಕಟ್ಟಿ, ಚಪ್ಪರದ ಬಸ್ ನಿಲ್ದಾಣವನ್ನ ಉದ್ಘಾಟನೆ ಮಾಡಲಾಯ್ತು. ಕಿತ್ತೋಗಿರೋ ಬಸ್ ನಿಲ್ದಾಣದ ಉದ್ಘಾಟನೆಗೆ ಎಮ್ ಎಲ್ ಎ ಬದಲು ಎಮ್ಮೆಯನ್ನ ಚೀಫ್ ಗೆಸ್ಟ್ ಮಾಡಲಾಗಿತ್ತು.. ದಶಕದ ಹಿಂದೆಯೇ ಬಾಲೇಹೊಸೂರು ಗ್ರಾಮದ ಬಸ್ ನಿಲ್ದಾಣ ಬಿದ್ದು ಹೋಗಿವೆ.. ಈ ಬಗ್ಗೆ ಸ್ಥಳೀಯ ಶಾಸಕ ರಾಮಪ್ಪ ಲಮಾಣಿ, ಸಂಸದ ಶಿವಕುಮಾರ್ […]

Advertisement

Wordpress Social Share Plugin powered by Ultimatelysocial