ಏಕದಿನ ಕ್ರಿಕೆಟ್: ಮಹತ್ವದ ಮೈಲುಗಲ್ಲು ತಲುಪಲು ವಿರಾಟ್ ಕೊಹ್ಲಿಗೆ ಆರು ರನ್ ಅಗತ್ಯ

 

ಹೊಸದಿಲ್ಲಿ: ಭಾರತದ ಆತಿಥ್ಯದಲ್ಲಿ ರವಿವಾರದಿಂದ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಸರಣಿಯ ವೇಳೆ ಮಾಜಿ ನಾಯಕ ವಿರಾಟ್ ಕೊಹ್ಲಿಯವರ ಬ್ಯಾಟಿಂಗ್‌ನ ಮೇಲೆ ಎಲ್ಲರ ಚಿತ್ತ ಹರಿದಿದೆ.ವಿಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಸಮಯದಲ್ಲಿ ಕೊಹ್ಲಿ ತಮ್ಮ ಅಂತರರಾಷ್ಟ್ರೀಯ ಶತಕದ ಬರವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದ್ದಾರೆ.ಯಾವುದೇ ಸ್ವರೂಪದಲ್ಲಿ ಎರಡು ವರ್ಷಗಳಲ್ಲಿ ಮೂರಂಕ ಅಂಕಿಗಳನ್ನು ತಲುಪಲು ವಿಫಲರಾಗಿದ್ದಾರೆ. 33 ರ ಹರೆಯದ ಕೊಹ್ಲಿ ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಮತ್ತೊಂದು ವೈಯಕ್ತಿಕ ಮೈಲಿಗಲ್ಲಿನ ಮೇಲೆ ಕಣ್ಣಿಟ್ಟಿದ್ದಾರೆ.ತವರು ನೆಲದಲ್ಲಿ 5,000 ಏಕದಿನ ರನ್‌ಗಳ ಮೈಲುಗಲ್ಲನ್ನು ತಲುಪಿದ ಭಾರತದ 2ನೇ ಬ್ಯಾಟರ್ ಆಗಲು ಕೊಹ್ಲಿ ಕೇವಲ 6 ರನ್‌ಗಳ ಅಂತರದಲ್ಲಿದ್ದಾರೆ. ಸಚಿನ್ ತೆಂಡುಲ್ಕರ್ ಭಾರತದಲ್ಲಿ 5,000 ಅಥವಾ ಅದಕ್ಕಿಂತ ಹೆಚ್ಚು ಏಕದಿನ ರನ್ ಗಳಿಸಿದ ಏಕೈಕ ಬ್ಯಾಟರ್.ಕುತೂಹಲಕಾರಿ ಅಂಶವೆಂದರೆ ಸಚಿನ್ ತನ್ನ 121ನೇ ಇನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತದಲ್ಲಿ 5,000 ಏಕದಿನ ರನ್‌ಗಳ ಹೆಗ್ಗುರುತನ್ನು ತಲುಪಿದ್ದರು.ಮತ್ತೊಂದೆಡೆ ರವಿವಾರದ ಮೊದಲ ಏಕದಿನ ಪಂದ್ಯದಲ್ಲಿ 6 ರನ್ ಗಳಿಸಲು ಯಶಸ್ವಿಯಾದರೆ, ಕೊಹ್ಲಿ ಭಾರತದಲ್ಲಿ ತಮ್ಮ 96 ನೇ ಏಕದಿನ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದ ಚಲನಚಿತ್ರ ಮಂದಿರಗಳ 100% ಸೀಟು ಭರ್ತಿಗೆ ರಾಜ್ಯ ಸರ್ಕಾರದಿಂದ ಗ್ರೀನ್‌ ಸಿಗ್ನಲ್‌ ನೀಡಲಾಗಿದೆ.

Fri Feb 4 , 2022
ಬೆಂಗಳೂರು: ರಾಜ್ಯದ ಚಲನಚಿತ್ರ ಮಂದಿರಗಳ 100% ಸೀಟು ಭರ್ತಿಗೆ ರಾಜ್ಯ ಸರ್ಕಾರದಿಂದ ಗ್ರೀನ್‌ ಸಿಗ್ನಲ್‌ ನೀಡಲಾಗಿದೆ. ಸಿನಿಮಾ ರಂಗದ ಅನೇಕ ಮಂದಿ ಸಿಎಂ ಬಳಿ ಮನವಿ ಸಲ್ಲಿಸಿದ್ದರು, ಇದೇ ವೇಳೆ 50-50 ರಿಂದ ಆಗುತ್ತಿರುವ ತೊಂದ್ರೆ ಬಗ್ಗೆ ಮನದಟ್ಟು ಮಾಡಿದ್ದರು.ಇದೇ ವೇಲೆ ಸಿನಿಮಾ ಮಂದಿರಕ್ಕೆ ಬರೋರಿಗೆ ಕಡ್ಡಾಯವಾಗಿ ಎರಡು ಡೋಸ್‌ ಲಸಿಕೆ ತೆಗೆದುಕೊಂಡಿರುವುದು ಅವಶ್ಯಕಾಗಿದೆ. ಇನ್ನೂ ಸಿನಿಮಾ ಮಂದಿರಲ್ಲಿ ತಿಂಡಿ ತಿನಿಸುಗಳನ್ನು ತಿನ್ನುವುದಕ್ಕೆ ಅವಕಾಶ ಇರೋದಿಲ್ಲಇದೇ ವೇಳೆ ಜಿಮ್‌, ಈಜುಕೋಳಕ್ಕೂ […]

Advertisement

Wordpress Social Share Plugin powered by Ultimatelysocial