ಆಗ ಕೊಹ್ಲಿಯನ್ನ ಬದ್ನಾಂ ಮಾಡಿ ಈಗ ಯಾಕ್ ಸುಮ್ಮನ್ನಿದ್ದೀರಾ..?

ಕೊರೊನಾ ಸೋಂಕು ಕಾರಣದಿಂದಾಗಿ ರೀ ಶೆಡ್ಯೂಲ್ಡ್ ಆಗಿದ್ದ ಇಂಡಿಯಾ ವರ್ಸಸ್ ಇಂಗ್ಲೆಂಡ್ ನಡುವಿನ ಟೆಸ್ಟ್ ಮ್ಯಾಚ್ ಶುಕ್ರವಾರ ಆರಂಭವಾಗಿದೆ.

ವಿಕೆಟ್ ಕೀಪರ್ ರಿಷಬ್ ಪಂತ್ ಸೆಂಚೂರಿ, ಆಲ್ ರೌಂಡರ್ ರವೀಂದ್ರ ಜಡೇಜಾ ಅರ್ಧಶತಕದ ನೆರವನಿಂದ ಟೀಂ ಇಂಡಿಯಾ ಮೊದಲ ದಿನದ ಗೌರವ ಪಡೆದುಕೊಂಡಿದೆ.

ಅಂದಹಾಗೆ ರೋಹಿತ್ ಶರ್ಮ ಕೋವಿಡ್ ಕಾರಣದಿಂದಾಗಿ ತಂಡಕ್ಕೆ ದೂರವಾದ ಹಿನ್ನೆಲೆಯಲ್ಲಿ ವೇಗಿ ಜಸ್ಪ್ರೀತ್ ಬೂಮ್ರಾ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಇದು ಹೀಗಿದ್ದರೇ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ನಲ್ಲಿ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಅವಕಾಶ ನೀಡದಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

ಮುಖ್ಯವಾಗಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಟ್ರೋಲರ್ಸ್ ಮೇಲೆ ಮುಗಿಬೀಳುತ್ತಿದ್ದಾರೆ.

ಜೊತೆಗೆ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿದ್ದಾಗ ವಿದೇಶಿ ಪಿಚ್ ಗಳಲ್ಲಿ ಅಶ್ವಿನ್ ಅವರಿಗೆ ಅವಕಾಶಗಳು ಸಿಗದೇ ಇದ್ದದ್ದಕ್ಕೆ ಕೊಹ್ಲಿಯೇ ಕಾರಣ ಎಂದು ಹಾಗೇ ಆಗಿನ ಹೆಡ್ ಕೋಚ್ ರವಿಶಾಸ್ತ್ರಿ ಕೈವಾಡ ಕೂಡ ಇದರಲ್ಲಿ ಇತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಟ್ರೋಲ್ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರಸ್ತುತ ರೀ ಶೆಡ್ಯೂಲ್ಡ್ ಆಗಿರುವ ಮ್ಯಾಚ್ ನಲ್ಲಿ ಕೂಡ ಅಶ್ವಿನ್ ಗೆ ಅವಕಾಶ ಸಿಗದೇ ಇರೋದನ್ನ ಪ್ರಸ್ತಾಪಿಸುತ್ತಾ ಈಗ ಯಾರನ್ನ ಬ್ಲೇಮ್ ಮಾಡುತ್ತೀರಾ ಅಂತಾ ಕೊಹ್ಲಿ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಆಗ ಆಗಿದ್ದರೇ ವಿರಾಟ್ ಕೊಹ್ಲಿ, ರವಿಶಾಸ್ತ್ರಿ ಅವರನ್ನ ಟ್ರೋಲ್ ಮಾಡುತ್ತಾ ಹೀಯಾಳಿಸುತ್ತಿದ್ರಿ.. ಈಗ ಯಾಕ್ ಸುಮ್ಮನ್ನಿದ್ದೀರೀ ಅಂತ ಕೇಳುತ್ತಿದ್ದಾರೆ.

ತಂಡದ ಅವಶ್ಯಕತೆ, ಪಿಚ್ ವಾತಾವರಣ ಸೇರಿದಂತೆ ಹಲವು ಅಂಶಗಳನ್ನು ಆಧಾರವಾಗಿಟ್ಟುಕೊಂಡೇ ತಂಡವನ್ನು ಸೆಲೆಕ್ಟ್ ಮಾಡಲಾಗುತ್ತದೆ. ಈಗಲಾದ್ರೂ ಈ ವಿಷಯವನ್ನು ಅರ್ಥ ಮಾಡಿಕೊಳ್ಳಿ ಎಂದು ಸಲಹೆ ನೀಡುತ್ತಿದ್ದಾರೆ.

ನಿಜ ಹೇಳಬೇಕೆಂದರೇ ಪ್ರಸ್ತುತ ಮ್ಯಾಚ್ ನಡೆಯುತ್ತಿರುವ ಎಡ್ಜ್ ಬಾಸ್ಟನ್ ಪಿಚ್ ಸ್ಪಿನ್ನರ್ ಗಳಿಗೆ ಅನುಕೂಲಕರವಾಗಿದೆ.

ನಾಲ್ಕು ವರ್ಷಗಳ ಹಿಂದೆ ಅಶೂ ಇಲ್ಲಿ ಏಳು ವಿಕೆಟ್ ಗಳನ್ನು ಪಡೆದುಕೊಂಡಿದ್ದರು. ಆದ್ರೆ ರೀ ಶೆಡ್ಯೂಲ್ಡ್ ಟೆಸ್ಟ್ ಗೆ ವರುಣನ ಆತಂಕ ಇದೆ. ಹೀಗಾಗಿ ಎಕ್ಸ್ಟ್ರಾ ವೇಗಿ ಶರ್ದೂಲ್ ಠಾಕೂರ್ ಗೆ ಅವಕಾಶ ನೀಡಲಾಗಿದೆ.

ಅದಕ್ಕಾಗಿಯೇ ಅಶ್ವಿನ್ ಅವರನ್ನು ಬೆಂಚ್ ಗೆ ಸೀಮಿತ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಟೀಂ ಇಂಡಿಯಾ ಮೊದಲ ದಿನದ ಆಟದ ಅಂತ್ಯಕ್ಕೆ ಏಳು ವಿಕೆಟ್ ಕಳೆದುಕೊಂಡು 338 ರನ್ ಗಳಿಸಿದೆ.

83 ರನ್ ಗಳಿಸಿರುವ ರವೀಂದ್ರ ಜಡೇಜಾ ಹಾಗೂ ವೇಗಿ ಮೊಹ್ಮದ್ ಶಮಿ ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ಎಫ್‌ಐಆರ್ ರದ್ದು ಕೋರಿ ಕೋರ್ಟ್ ಮೊರೆ‌ಹೋದ ನರೇಶ್,

Sat Jul 2 , 2022
  ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಎಫ್‌ಐಆರ್ ರದ್ದುಗೊಳಿಸಲು ಕೋರಿ ಹೈಕೋರ್ಟ್ ಮೊರೆ ಹೋಗಲಾಗಿದೆ. ನರೇಶ್ ಗೌಡ ಮತ್ತು ಶ್ರವಣ್ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸದಾಶಿವನಗರದಲ್ಲಿ ಜಾರಕಿಹೊಳಿ ನೀಡಿದ್ದ ದೂರಿನ ಎಫ್‌ಐಆರ್ ರದ್ದು ಮಾಡುವಂತೆ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಎಫ್‌ಐಆರ್‌ನಲ್ಲಿ ನಮ್ಮ ಹೆಸರಿಲ್ಲ. ಬ್ಲ್ಯಾಕ್ ಮೇಲ್, ಮತ್ತು ವಸೂಲಿಯಲ್ಲಿ ಭಾಗಿಯಾಗಿಲ್ಲ. ಎಫ್‌ಐಆರ್ ದಾಖಲಾಗಿ ವರ್ಷ ಕಳೆದಿದೆ. ಹೀಗಾಗಿ ಎಫ್‌ಐಆರ್ ರದ್ದು ಮಾಡುವಂತೆ ಕೋರಿ ಸಿಆರ್‌ಪಿಸಿ […]

Advertisement

Wordpress Social Share Plugin powered by Ultimatelysocial