ವಿರಾಟ್ ಕೊಹ್ಲಿ ಹೇಳಿಕೆಗೆ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅಸಮಾಧಾನ

ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆಗಳ ಕುರಿತು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ದಕ್ಷಿಣ ಆಫ್ರಿಕಾದಂತಹ ತಂಡದ ಎದುರು ಆಡಲು ಪ್ರವಾಸಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಇಂತಹದೊಂದು ವಿವಾದಾತ್ಮಕ ಹೇಳಿಕೆ ನೀಡುವುದು ಸರಿಯಲ್ಲ.ವಿರಾಟ್‌ಗೆ ಮತ್ತು ಬಿಸಿಸಿಐ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಇದು ಸೂಕ್ತ ಸಮಯವಾಗಿರಲಿಲ್ಲ ಎಂದು ಕಪಿಲ್ ಅಭಿಪ್ರಾಯಪಟ್ಟಿದ್ದಾರೆ.ಮಂಡಳಿ ಅಧ್ಯಕ್ಷ ಸ್ಥಾನವೂ ದೊಡ್ಡದು ಮತ್ತು ತಂಡದ ನಾಯಕನ ಸ್ಥಾನವೂ ದೊಡ್ಡದು. ಆದ್ದರಿಂದ ಒಬ್ಬರಿನ್ನೊಬ್ಬರತ್ತ ಸಾರ್ವಜನಿಕವಾಗಿ ಬೆರಳು ತೋರಿಸುವುದು ಸರಿಯಲ್ಲ. ಇದು ಸೌರವ್ ಮತ್ತು ಕೊಹ್ಲಿ ಅವರಿಬ್ಬರಿಗೂ ಅನ್ವಯಿಸುತ್ತದೆ. ಮುಂಬರುವ ಸರಣಿಯಲ್ಲಿ ಆಡುವ ಕುರಿತು ಆದ್ಯತೆ ನೀಡುವುದು ಒಳ್ಳೆಯದು. ಪ್ರವಾಸದ ಹೊಸ್ತಿಲಲ್ಲಿ ವಿವಾದ ಮೈಮೇಲೆ ಎಳೆದುಕೊಂಡಿರುವುದು ಅಸೂಕ್ಷ್ಮ ನಡವಳಿಕೆ’ ಎಂದು ಕಪಿಲ್ ಹೇಳಿದ್ದಾರೆ.ದಯವಿಟ್ಟು ನೀವು ಪರಿಸ್ಥಿತಿಯನ್ನು ನಿಯಂತ್ರಿಸಿ. ಮೊದಲು ದೇಶದ ಬಗ್ಗೆ ಯೋಚಿಸಿ. ಯಾವುದು ತಪ್ಪಿದೆಯೋ ಅದು ಇಂದಲ್ಲಾ ನಾಳೆ ಹೊರಗೆ ಬಂದೇ ಬರುತ್ತದೆ. ಆಗ ಆ ಕುರಿತು ಮಾತನಾಡಬಹುದು’ ಎಂದು ಕಪಿಲ್ ಸಲಹೆ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಯುನೈಟೆಡ್ ಸ್ಟೇಟ್ಸ್ ನಲ್ಲಿ ಲಸಿಕೆ ಹಾಕದವರಿಗೆ ಓಮಿಕ್ರಾನ್  ಹರಡುವ ಸಧ್ಯತೆ ಹೆಚ್ಚು.!ಯುಎಸ್ ಅಧ್ಯಕ್ಷ ಜೋ ಬಿಡೆನ್ 

Fri Dec 17 , 2021
ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರವು ಯುನೈಟೆಡ್ ಸ್ಟೇಟ್ಸ್ನಲ್ಲಿ ಹೆಚ್ಚು ವೇಗವಾಗಿ ಹರಡಲಿದೆ ಮತ್ತು ತೀವ್ರ ಅನಾರೋಗ್ಯ ಮತ್ತು ಸಾವಿನ ಚಳಿಗಾಲವು ಲಸಿಕೆ ಹಾಕದವರಿಗೆ ಕಾಯುತ್ತಿದೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಗುರುವಾರ ಎಚ್ಚರಿಸಿದ್ದಾರೆ.ಲಸಿಕೆ ಹಾಕದವರಿಗೆ ನಾವು ತೀವ್ರ ಅನಾರೋಗ್ಯ ಮತ್ತು ಸಾವಿನ ಚಳಿಗಾಲವನ್ನು ನೋಡುತ್ತಿದ್ದೇವೆ ಎಂದು ಹೇಳಿದರು.ಕನಿಷ್ಠ 36 ರಾಜ್ಯಗಳು ಒಮಿಕ್ರಾನ್ ಪ್ರಕರಣಗಳನ್ನು ದೃಢಪಡಿಸಿವೆ ಎಂದು ರೋಗ ನಿಯಂತ್ರಣ ಕೇಂದ್ರದ ಅಧಿಕಾರಿಗಳು ಬುಧವಾರ ತಿಳಿಸಿದರು.ನೀವು ಲಸಿಕೆಯನ್ನು ಹೊಂದಿದ್ದರೆ ಮತ್ತು […]

Advertisement

Wordpress Social Share Plugin powered by Ultimatelysocial