ಕೋವಿಡ್-19 ನಿಂದ 5 ಲಕ್ಷ ಸಾವು: ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿ ಭಾರತ

ನವದೆಹಲಿ: ಭಾರತದಲ್ಲಿ ಶುಕ್ರವಾರ 5 ಲಕ್ಷಕ್ಕೂ ಅಧಿಕ ಕೋವಿಡ್-19 ಸೋಂಕಿತರು ಸಾವನ್ನಪ್ಪುವುದರೊಂದಿಗೆ ಅಮೆರಿಕ ಮತ್ತು ಬ್ರೆಜಿಲ್ ನಂತರ ವಿಶ್ವದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.ಕಳೆದ ವರ್ಷ ಜುಲೈ 1 ರಂದು ದೇಶದಲ್ಲಿ ಕೊರೋನಾದಿಂದ 4 ಲಕ್ಷ ಸಾವು ದಾಖಲಾಗಿತ್ತು.217 ದಿನಗಳಲ್ಲಿ ಐದು ಲಕ್ಷ ಜನರು ಸಾವನ್ನಪ್ಪಿದ್ದಾರೆ. 1 ಲಕ್ಷ ಜನರ ಸಾವಿಗೆ ಹೆಚ್ಚಿನ ದಿನ ತೆಗೆದುಕೊಳ್ಳಲಾಗಿದೆ.ಕಳೆದ ವರ್ಷ ಏಪ್ರಿಲ್- ಮೇ ನಲ್ಲಿ ಅಪಾಯಕಾರಿ ಎರಡನೇ ಅಲೆ ದೇಶದಲ್ಲಿ ಅಪ್ಪಳಿಸಿತ್ತು. ಏಪ್ರಿಲ್ 27 ರಲ್ಲಿ ಎರಡು ಲಕ್ಷ, ಮೇ 23ರಲ್ಲಿ ಮೂರು ಲಕ್ಷ ಸಾವಿನ ಸಂಖ್ಯೆ ವರದಿಯಾಗಿತ್ತು.ಅಕ್ಟೋಬರ್ 2, 2020ರ ವೇಳೆಗೆ ದೇಶದಲ್ಲಿ ಸಾವಿನ ಸಂಖ್ಯೆ 1 ಲಕ್ಷದಷ್ಟು ಹೆಚ್ಚಾಗಿತ್ತು. ಗುರುವಾರ 1,072 ಸಾವಿನ ಸಂಖ್ಯೆಯೊಂದಿಗೆ ಒಟ್ಟಾರೇ ಮೃತರ ಸಂಖ್ಯೆ 5,00,055ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.ವರ್ಲ್ಡ್ ಮೀಟರ್ಸ್ ಪ್ರಕಾರ ಸುಮಾರು 9.2 ಲಕ್ಷ ಸಾವಿನೊಂದಿಗೆ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, 6.3 ಲಕ್ಷ ಸಾವಿನೊಂದಿಗೆ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. 5 ಲಕ್ಷಕ್ಕೂ ಅಧಿಕ ಸಾವಿನೊಂದಿಗೆ ಭಾರತ ಮೂರನೇ ಸ್ಥಾನದಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೈರಲ್ ವಿಡಿಯೋ: ತಮಿಳುನಾಡಿನ ನೀಲಗಿರಿಯಲ್ಲಿ ಬ್ಯಾರಿಕೇಡ್‌ನಿಂದ ರೈಲು ಹಳಿ ದಾಟಲು ಹರಸಾಹಸ ಪಡುತ್ತಿರುವ ಆನೆ ಕುಟುಂಬ

Fri Feb 4 , 2022
ತಮಿಳುನಾಡಿನ ನೀಲಿಗಿರಿಯಲ್ಲಿ ರೈಲ್ವೇ ಇಲಾಖೆ ನಿರ್ಮಿಸಿದ ಗೋಡೆಯಿಂದಾಗಿ ಆನೆಯ ಕರುಗಳು ಸೇರಿದಂತೆ ಆನೆ ಕುಟುಂಬವು ಸಾಕಷ್ಟು ದೂರದವರೆಗೆ ರೈಲ್ವೆ ಹಳಿಯಲ್ಲಿ ನಡೆಯಲು ಒತ್ತಾಯಿಸಲ್ಪಟ್ಟಿರುವ ಸಂಕಟದ ವೀಡಿಯೊ. ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಹಂಚಿಕೊಂಡಿರುವ ವೀಡಿಯೊವು ರೈಲು ಸಮೀಪಿಸುತ್ತಿರುವ ಸಾಧ್ಯತೆಯಿಂದಾಗಿ ಅವರು ಎದುರಿಸುತ್ತಿರುವ ಪ್ರಸ್ತುತ ಅಪಾಯವನ್ನು ಎತ್ತಿ ತೋರಿಸಿದೆ. ಆದಾಗ್ಯೂ, ಐಎಎಸ್ ಅಧಿಕಾರಿ ಹಂಚಿಕೊಂಡ ಎರಡನೇ ವೀಡಿಯೊ ಗೋಡೆಯನ್ನು ಕೆಡವುತ್ತಿರುವುದನ್ನು ತೋರಿಸುವುದರಿಂದ ರೈಲ್ವೆ ತ್ವರಿತವಾಗಿ ಪ್ರತಿಕ್ರಿಯಿಸಿತು ಮತ್ತು […]

Advertisement

Wordpress Social Share Plugin powered by Ultimatelysocial