ಯಾದಗಿರಿ ಕನಕ ನೌಕರರ ಸಭೆ

ಜಿಲ್ಲಾ ಕನಕ ನೌಕರರ ಸಬೆ ಸ್ವಾಮಿ ವಿವೇಕಾನಂದ ತರಬೇತಿ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ..

ಗೌರವಾಧ್ಯಕ್ಷರು-ಅಯ್ಯಣ್ಣ ಇನಾಮ್ದಾರ್..ಅಧ್ಯಕ್ಷರಾಗಿ-ಮಲ್ಲಿಕಾರ್ಜುನ ಸಂಗ್ವಾರ,ಪ್ರಧಾನ ಕಾರ್ಯದರ್ಶಿ-ಲಿಂಗಣ್ಣ ಗೋನಾಳ,ಖಜಾಂಚಿ-ಸಾಬಣ್ಣ ಜುಬೇರ್,ಉಪಾಧ್ಯಕ್ಷರಾಗಿ ತಾಯಪ್ಪ ಜುಬೇರ್ ಹನುಮಂತ್ರಾಯ ಬಾದ್ಯಾಪುರ ಶ್ರೀಶೈಲ ಬಿರಾದರ ಸೇರಿದಂತೆ ಆರು ಜನರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.ಸಮಾಜವನ್ನು ಒಂದುಗೂಡಿಸಲು ಸಂಘಟನೆ ಅತ್ಯಗತ್ಯವಾಗಿ ಬೇಕು.ಶಿಕ್ಷಣ ಸಂಘಟನೆಯಿಂದ ನಾವೆಲ್ಲರೂ ಒಂದುಗೂಡಲು ಸಾಧ್ಯ ಎಂದು ಕನಕ ನೌಕರರ ಕಲ್ಯಾಣ ಕರ್ನಾಟಕದ ಅಧ್ಯಕ್ಷರಾದ ಬಸವರಾಜ ಕೊಂಕಲ್ ರವರು ಹೇಳಿದರು.ರಾಜ್ಯದಲ್ಲಿ ಮೂರನೇ ಅತ್ಯಂತ ದೊಡ್ಡ ಸಮಾಜ ಕುರುಬ ಸಮಾಜ. ಆದರೆ ನಾವು ಶಿಕ್ಷಣ, ರಾಜಕೀಯ ಸಂಘಟನೆಯಲ್ಲಿ ಹಿಂದುಳಿದಿದ್ದೇವೆ. ಕನಕ ಗುರು ಪೀಠದ ಪೂಜ್ಯ ಶ್ರೀ ಸಿದ್ದರಾಮನಂದಪುರಿ ಮಹಾಸ್ವಾಮಿಗಳವರ ಆಶೀರ್ವಾದದಿಂದ ಇಂದು ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕನಕ ನೌಕರರನ್ನು ಸಂಘಟನೆ ಮಾಡುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ರಾಜ್ಯದಾದ್ಯಂತ ದೀಪಾವಳಿಯ ಹಬ್ಬದಂದು ಕನಕ ನೌಕರರ ಸದಸ್ಯತ್ವ ಅಭಿಯಾನವನ್ನು ತಿಂಥಣಿ ಕನಕಗುರು ಪೀಠದ ಸ್ವಾಮೀಜಿಯವರ ನೇತೃತ್ವದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ.ಕರ್ನಾಟಕ ನೌಕರರ ಸಂಘದಿಂದ ಇನ್ನು ಕೆಲವೇ ದಿನಗಳಲ್ಲಿ ವೆಬ್ಸೈಟನ್ನು ಆರಂಭ.ಕಾರ್ಯಕ್ರಮದಲ್ಲಿ ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಕನಕ ನೌಕರರು ಸುಮಾರು ಎರಡು ನೂರಕ್ಕೂ ಹೆಚ್ಚು ನೌಕರರು ಪಾಲ್ಗೊಂಡಿದ್ದರು.ಕಾರ್ಯಕ್ರಮದ ಮೊದಲಿಗೆ ಕನಕದಾಸರ ಭಾವಚಿತ್ರಕ್ಕೆ ಪೂಜೆ .

ದೇವಿಂದ್ರಪ್ಪ ಹಳಿಮನಿ ಉಪನ್ಯಾಸಕರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ,1992 ರಲ್ಲಿ ಹೈದರಾಬಾದ್ ಕರ್ನಾಟಕದಲ್ಲಿ ಕನಕ ನೌಕರರ ಸಂಘಕ್ಕೆ ಶಕ್ತಿ ನೀಡಲು ನಾವು ಮತ್ತು ಬಸವರಾಜ್ ಕೊಂಕಲ ಮತ್ತು ಇತರರು ಸೇರಿದಂತೆ ಹೆಚ್ಚು ಶ್ರಮವಹಿಸಿದೆವು. ನಮ್ಮ ಸಮುದಾಯದಲ್ಲಿ ಸಂಘಟನೆಯ ಕೊರತೆಯಿದೆ.

Please follow and like us:

Leave a Reply

Your email address will not be published. Required fields are marked *

Next Post

Adjusting for Errors Financial Accounting

Wed Nov 11 , 2020
For example, a company might overstate its current assets and understate its current liabilities. The cash account in your company may be off by $100, which may not concern you, except it is possible that someone stole $17,900 and someone else recorded a $13,000 deposit as $31,000 overstatement mistake on […]

Advertisement

Wordpress Social Share Plugin powered by Ultimatelysocial