ವಿವೇಕಾನಂದ ಕಾಮತ್ ಕತೆಗಾರ.

ಆತ್ಮೀಯರಾದ ವಿವೇಕಾನಂದ ಕಾಮತ್ ಕತೆ ಕಾದಂಬರಿಗಳ ಲೋಕದಲ್ಲಿ ಅಗಾಧ ಕೆಲಸ ಮಾಡುತ್ತಾ ಬಂದಿದ್ದಾರೆ. ಇಂದು ಅವರ ಜನ್ಮದಿನ.
ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಕಾಮತ್ 1976ರ ಜನವರಿ 21ರಂದು ಜನಿಸಿದರು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮ ಪದವಿ ಪಡೆದ ಕಾಮತ್ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ.
1994ರಲ್ಲಿ ಬರವಣಿಗೆ ಆರಂಭಿಸಿದ ವಿವೇಕಾನಂದ ಕಾಮತ್ 100ಕ್ಕೂ ಹೆಚ್ಚು ಕತೆ, 40 ಕಾದಂಬರಿಗಳು ಹಾಗೂ 20 ಮಿನಿ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಪ್ರಕಟಿಸಿದ್ದಾರೆ. ‘ಸುಧಾ’ ವಾರಪತ್ರಿಕೆಯಲ್ಲಿ ’ಅತಿಕ್ರಮಣ’ ’ನೆಲಮುಗಿಲು’, ‘ಅಜ್ಞಾತ’, ಸ್ವೀಕಾರ’ ಕಾದಂಬರಿಗಳು ಪ್ರಕಟವಾಗಿವೆ. ಸುಧಾದಲ್ಲಿ ಅವರ ಎರಡು ಫೋಟೊ ಕಾಮಿಕ್ಸ್ ಮತ್ತು ಅನೇಕ ಕಥೆಗಳೂ ಪ್ರಕಟವಾಗಿವೆ. ಪ್ರಸಕ್ತದಲ್ಲಿ ಪ್ರಕಟವಾಗುತ್ತಿರುವ ‘ವ್ಯತಿರಿಕ್ತ’ ಸೇರಿದಂತೆ ತರಂಗ’ದಲ್ಲಿ ನಾಲ್ಕು, ‘ಕರ್ಮವೀರ’ದಲ್ಲಿ ನಾಲ್ಕು, ‘ಮಂಗಳ’ದಲ್ಲಿ ಎಂಟು ಧಾರಾವಾಹಿಗಳು ಪ್ರಕಟಗೊಂಡಿವೆ. ಇದಲ್ಲದೆ ಎಲ್ಲ ತರಹದ ಇನ್ಜಿತರ ಪ್ರಮುಖ ನಿಯತಕಾಲಿಕಗಳಲ್ಲೂ ಇವರ ಕತೆ, ಕಾದಂಬರಿಗಳು ಮೂಡಿಬಂದಿವೆ.
ವಿವೇಕಾನಂದ ಕಾಮತ್ ಅವರ ‘ಬೇಟೆ’ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಾರಿಗೆ ಸಂಸ್ಥೆ ನೀಡುವ ಅರಳು ಪ್ರಶಸ್ತಿ(2010), ‘ದೂರ ದಾರಿಯ ತೀರ’ ಕಾದಂಬರಿಗೆ ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆ ನೀಡುವ ‘ಲೇಖಿಕಾಶ್ರೀ’ ಪ್ರಶಸ್ತಿ (2011) ಮುಂತಾದ ಗೌರವಗಳು ಸಂದಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡ ಬಡವರಿಗೆ ಗುಡ್ ನ್ಯೂಸ್.

Sun Jan 22 , 2023
    ಬೆಂಗಳೂರು : ಸರ್ಕಾರಿ ಜಮೀನು ಹಾಗೂ ಅರಣ್ಯದ ಅಂಚಿನ ಜಾಗೆಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವ ಅರ್ಹ ಬಡ ಜನರನ್ನು ಅಲ್ಲಿಂದ ಎತ್ತಂಗಡಿ ಮಾಡಲು ಅವಕಾಶ ನೀಡುವುದಿಲ್ಲ.94 ಸಿ ಹಾಗೂ 94 ಸಿಸಿ ಅಡಿ ಅವರು ಅರ್ಜಿ ನೀಡಿದರೆ ಅವರಿಗೆ ನಿವೇಶನದ ಹಕ್ಕುಗಳನ್ನು ನೀಡಲಾಗುವುದು.ಬರುವ ತಿಂಗಳಿನಿಂದ ಪಡಿತರೆ ವಿತರಣೆ ಪ್ರಮಾಣವನ್ನು ಪುನಃ 10 ಕೆಜಿಗೆ ಹೆಚ್ಚಿಸಲಾಗುವುದು.ಹೊಸಕೋಟೆ ನಗರದವರೆಗೆ ಮೆಟ್ರೊ ಹಾಗೂ ಕಾವೇರಿ ನೀರು ಪೂರೈಕೆ ವಿಸ್ತರಿಸುವ ಕಾರ್ಯವನ್ನು ಸಚಿವಸಂಪುಟದಲ್ಲಿ ಚರ್ಚಿಸಿ […]

Advertisement

Wordpress Social Share Plugin powered by Ultimatelysocial