ವ್ಯಾಕ್ಸಿಂಗ್ ಮಾದಕತೆಯನ್ನು ಹೆಚ್ಚಿಸುತ್ತದೆ.

ಸುಂದರ ಹಾಗೂ ಸೆಕ್ಸಿ ಲುಕ್ ಗಾಗಿ ಅನೇಕರು ವ್ಯಾಕ್ಸಿಂಗ್ ಮಾಡಿಸಿಕೊಳ್ತಾರೆ. ವ್ಯಾಕ್ಸಿಂಗ್ ಮಾದಕತೆಯನ್ನು ಹೆಚ್ಚಿಸುತ್ತದೆ. ಸ್ಲಿವ್ಲೆಸ್ ಟಾಪ್ ಹಾಗೂ ಸ್ಕರ್ಟ್ ಧರಿಸುವ ಮೊದಲು ವ್ಯಾಕ್ಸಿಂಗ್ ಮಾಡಿದ್ರೆ ಬೆಸ್ಟ್ ಎಂದು ಸೌಂದರ್ಯ ತಜ್ಞರು ಕೂಡ ಸಲಹೆ ನೀಡ್ತಾರೆ.

ಬ್ಯೂಟಿ ಪಾರ್ಲರ್ ಗೆ ಹೋಗಿ ಅನೇಕರು ವ್ಯಾಕ್ಸಿಂಗ್ ಮಾಡಿಸಿಕೊಂಡು ಬರ್ತಾರೆ. ಆದ್ರೆ ಗೊತ್ತಿಲ್ಲದೆ ವ್ಯಾಕ್ಸಿಂಗ್ ನಂತ್ರ ಸೌಂದರ್ಯ ವರ್ಧನೆಗೆ ಮಾಡುವ ಕೆಲಸ ನಿಮ್ಮ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ವ್ಯಾಕ್ಸಿಂಗ್ ಮಾಡಿದ ನಂತ್ರ ನಿಮ್ಮ ಚರ್ಮದಲ್ಲಿರುವ ತೇವಾಂಶ ಕಡಿಮೆಯಾಗುತ್ತದೆ. ಹಾಗಾಗಿ ವ್ಯಾಕ್ಸಿಂಗ್ ಮಾಡಿದ ನಂತ್ರ ಪ್ರತಿ ದಿನ ನೀವು ತೇವಾಂಶ ಹೆಚ್ಚಿಸುವ ಕ್ರೀಂ ಬಳಸಬೇಕಾಗುತ್ತದೆ.

ವ್ಯಾಕ್ಸಿಂಗ್ ಮಾಡಿದ ಮೊದಲ 2 ದಿನ ವ್ಯಾಯಾಮ ಮಾಡಬೇಡಿ. ವ್ಯಾಕ್ಸಿಂಗ್ ನಂತ್ರ ಚರ್ಮದ ರಂಧ್ರಗಳು ತೆರೆದಿರುತ್ತವೆ. ವ್ಯಾಯಾಮದ ವೇಳೆ ಬೆವರಿನ ಮೂಲಕ ಬರುವ ದೇಹದ ಕೊಳಕು ರಂಧ್ರಗಳ ಮೂಲಕ ಮತ್ತೆ ಒಳ ಸೇರುವ ಸಾಧ್ಯತೆಗಳಿರುತ್ತವೆ.

ವ್ಯಾಕ್ಸಿಂಗ್ ನಂತ್ರ ಸ್ನಾನ ಮಾಡಲು ಬಯಸಿದ್ರೆ ಶವರ್ ಬಳಸಿ. ವ್ಯಾಕ್ಸಿಂಗ್ ನಂತ್ರ ಹೆಚ್ಚು ನೀರಿನ ಬಳಕೆ ನಿಮ್ಮ ಚರ್ಮಕ್ಕೆ ಹಾನಿಯುಂಟು ಮಾಡಬಹುದು.

ವ್ಯಾಕ್ಸಿಂಗ್ ನಂತ್ರ ಬಿಸಿ ನೀರಿನ ಬಳಕೆ ಮಾಡಬೇಡಿ. ಬಿಸಿ ನೀರು ಮೊಡವೆ ಅಥವಾ ಗುಳ್ಳೆಗೆ ಕಾರಣವಾಗುತ್ತದೆ.

ವ್ಯಾಕ್ಸಿಂಗ್ ನಂತ್ರ ತಕ್ಷಣ ಸ್ಕ್ರಬ್ ಬಳಸಬೇಡಿ. ಇದು ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಹಣ್ಣು ಹಲಸಿನ ಹಣ್ಣು.

Tue Apr 19 , 2022
ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಹಣ್ಣು ಹಲಸಿನ ಹಣ್ಣು. ಚಳಿಗಾಲದ ಅಂತ್ಯ ಹಾಗೂ ಬೇಸಿಗೆಯ ಆರಂಭದಲ್ಲಿ ಶುರುವಾಗುವ ಈ ಹಣ್ಣಿನ ಗಾತ್ರ ಬಹು ದೊಡ್ಡದು. ಈ ಹಣ್ಣು ಗಾತ್ರದಲ್ಲಿ ಹೇಗೆ ದೊಡ್ಡ ಸ್ಥಾನ ಪಡೆದುಕೊಂಡಿದೆಯೋ ಹಾಗೆ ಆರೋಗ್ಯದ ವಿಷಯದಲ್ಲೂ ಮಹತ್ತರ ಪ್ರಯೋಜನಗಳನ್ನು ಪಡೆದುಕೊಂಡಿದೆ. * ಮುಖದ ಮೇಲಿನ ಚರ್ಮ ಸುಕ್ಕುಗಟ್ಟುತ್ತಿದ್ದರೆ, ಹಲಸಿನ ಬೀಜವನ್ನು ತಣ್ಣಗಿರುವ ಹಸುವಿನ ಹಾಲಿನಲ್ಲಿ ನೆನೆಸಿ ಪೇಸ್ಟ್‌ ಮಾಡಿ ಮುಖಕ್ಕೆ ಲೇಪಿಸಿದರೆ ಚರ್ಮದ ಸುಕ್ಕು ಕಡಿಮೆಯಾಗುತ್ತದೆ. * ದೇಹದಲ್ಲಿ […]

Advertisement

Wordpress Social Share Plugin powered by Ultimatelysocial