ಪ್ರತಿದಿನ ವಾಕಿಂಗ್‌ ಮಾಡಲು ಇಲ್ಲಿವೆ 10 ಉಪಯುಕ್ತ ಕಾರಣ

ಕೋವಿಡ್‌ ನಂತಹ ಮಾರಣಾಂತಿಕ ಕಾಯಿಲೆ ಎಲ್ಲಾ ಕಡೆ ಆವರಿಸಿಕೊಂಡಿರೋದ್ರಿಂದ ಪ್ರತಿಯೊಬ್ಬರೂ ಫಿಟ್ನೆಸ್‌ ಬಗ್ಗೆ ಗಮನಹರಿಸಲೇಬೇಕು. ಅದರರ್ಥ ಜಿಮ್‌ ಗೆ ಹೋಗಿ ಹೆವಿ ವರ್ಕೌಟ್‌ ಮಾಡಬೇಕೆಂದಲ್ಲ. ನಿಮ್ಮ ಜೀವನ ಶೈಲಿ ಹಾಗೂ ನಿತ್ಯ ಸೇವಿಸುವ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಿ.ಇದರ ಜೊತೆಗೆ ನಿತ್ಯ ತಪ್ಪದೇ ವಾಕಿಂಗ್‌ ಮಾಡುವುದು ಕೂಡ ಅತ್ಯಂತ ಅವಶ್ಯಕ. ನಿಮ್ಮ ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯವಾಗಿಟ್ಟುಕೊಳ್ಳಲು ವಾಕಿಂಗ್‌ ಸಹಕರಿಸುತ್ತದೆ. ಪ್ರತಿದಿನ ತಪ್ಪದೇ ಏಕೆ ವಾಕಿಂಗ್‌ ಮಾಡಬೇಕು ಎಂಬುದಕ್ಕೆ 10 ಕಾರಣಗಳು ಸಹ ಇವೆ.ವಾಕಿಂಗ್‌ ಮಾಡುವುದರಿಂದ ನಿಮ್ಮ ಮೆದುಳು ಚುರುಕಾಗುತ್ತದೆ. ಪ್ರತಿದಿನ ಸ್ವಲ್ಪ ಹೊತ್ತಾದರೂ ಸೂರ್ಯನ ಬೆಳಕು ದೇಹದ ಮೇಲೆ ಬೀಳುವುದರಿಂದ ವಿಟಮಿನ್‌ ಡಿ ಕೂಡ ಸಿಕ್ಕಂತಾಗುತ್ತದೆ. ನೀವು ಅತ್ಯಂತ ಚಟುವಟಿಕೆಯಿಂದಿರಲು ಇದು ಸಹಕಾರಿ.ವಾಕಿಂಗ್‌ ಮಾಡುವುದರಿಂದ ಸ್ನಾಯುಗಳು ಬಲಶಾಲಿಯಾಗುತ್ತವೆ. ರಕ್ತದಲ್ಲಿನ ಗ್ಲುಕೋಸ್‌ ಲೆವೆಲ್‌ ಕೂಡ ಸುಧಾರಿಸುತ್ತದೆ. ನಿತ್ಯವೂ ವಾಕಿಂಗ್‌ ಮಾಡುವುದರಿಂದ ಹೃದಯದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ವಾಕಿಂಗ್‌ ಒಂಥರಾ ಎನರ್ಜಿ ಬೂಸ್ಟರ್‌ ಕೂಡ.ನಿಮ್ಮ ಮನಸ್ಥಿತಿಯನ್ನು ಚೆನ್ನಾಗಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ಜೊತೆಗೆ ಪ್ರಕೃತಿಯ ಜೊತೆಗೆ ಬೆರೆಯಲು ಅವಕಾಶ ಸಿಕ್ಕಂತಾಗುತ್ತದೆ. ಉತ್ತಮ ಆರೋಗ್ಯ ನಿಮ್ಮದಾಗಬೇಕು ಎಂದರೆ ಪ್ರತಿದಿನ ಕನಿಷ್ಟ 20 ನಿಮಿಷ ವಾಕಿಂಗ್‌ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪುರುಷರಲ್ಲಿನ ಹೃದಯ ಸಮಸ್ಯೆಗೆ ಇದೂ ಒಂದು ಮುನ್ಸೂಚನೆ

Fri Feb 25 , 2022
ಬೇಗನೆ ತಲೆ ಬೋಳಾಗುವುದು, ಕೂದಲು ಬೆಳ್ಳಗಾಗುವುದು ಇವೆಲ್ಲ ಪುರುಷರಲ್ಲಿ ಹೃದಯದ ಸಮಸ್ಯೆಯ ಲಕ್ಷಣಗಳು. 40 ವರ್ಷದೊಳಗೆ ಈ ರೀತಿ ಸಮಸ್ಯೆಯ ಜೊತೆಗೆ ಬೊಜ್ಜು ಕೂಡ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಬೊಜ್ಜಿನಿಂದಾಗಿ ಪುರುಷರಲ್ಲಿ ನಾಲ್ಕು ಬಗೆಯ ಹೃದಯ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.ಅದರಲ್ಲೂ ಯುವಕರಲ್ಲಿ ಕೊರೊನರಿ ಆರ್ಟರಿ ಡಿಸೀಸ್ ಹೆಚ್ಚುತ್ತಲೇ ಇದೆ. ಅಕಾಲಿಕವಾಗಿ ಕೂದಲು ಉದುರುವುದು ಮತ್ತು ಬೂದು ಬಣ್ಣಕ್ಕೆ ತಿರುಗುವುದು ಕೂಡ ಈ ಖಾಯಿಲೆಯ ಲಕ್ಷಣಗಳಲ್ಲೊಂದು. ಭಾರತದಲ್ಲಿ 40 […]

Advertisement

Wordpress Social Share Plugin powered by Ultimatelysocial