‘ಎ ಬಿಗ್..​ಬಿಗ್..ಬಿಗ್ ಥ್ಯಾಂಕ್ಯೂ ಮೋದಿ’ ಮೋದಿಗೆ ವೆಸ್ಟ್‌ ಇಂಡೀಸ್ ಕ್ರಿಕೆಟಿಗರು ಸಂದೇಶ

ಭಾರತದಲ್ಲಿ ಕೊವ್ಯಾಕ್ಸಿನ್‌ ಲಸಿಕೆ ವಿತರಣೆ ಆರಂಭವಾಗಿ ಇಂದಿಗೆ 2 ತಿಂಗಳು ತುಂಬಿದೆ.ಈ ನಡುವೆ ಭಾರತದ ನೆರೆಹೊರೆಯ ದೇಶಗಳು ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ಕೊವ್ಯಾಕ್ಸಿನ್‌ ಸಂಜೀವಿನಿಯನ್ನು ತರಿಸಿಕೊಂಡಿವೆ. ಭಾರತ ಈಗಾಗಲೇ ಕೆರಿಬಿಯನ್ ರಾಷ್ಟ್ರಕ್ಕೆ 1,75,000 ಡೋಸ್‌ ಲಸಿಕೆ  ವಿತರಣೆ ಮಾಡಿದ್ದು, ಈ ಕಾರ್ಯಕ್ಕೆ ವೆಸ್ಟ್‌ ಇಂಡೀಸ್ ಕ್ರಿಕೆಟ್‌ ತಂಡದ ಆಟಗಾರರಿಬ್ಬರು ಮೋದಿಗೆ ಅಭಿನಂದನೆ ಸೂಚಿಸಿದ್ದಾರೆ. ಆ ಇಬ್ಬರು ಕ್ರಿಕೆಟಿಗರು ಯಾರು.? ಅಂತ ಯೋಚನೆ ಮಾಡತ್ತಾ ಇದ್ದೀರಾ ಈ ಸ್ಟೋರಿ ನೋಡಿ..!

ಎ ಬಿಗ್..ಬಿಗ್..ಬಿಗ್ ಥ್ಯಾಂಕ್ಯೂ ಮೋದಿ

ಮೋದಿಗೆ ವೆಸ್ಟ್‌ ಇಂಡೀಸ್ ಕ್ರಿಕೆಟಿಗರು ಸಂದೇಶ

 

 ಈತ ಬ್ಯಾಟ್ ಹಿಡಿದು ಫಿಲ್ಡ್‌ ಗೆ ಇಳಿದರೆ ಬೌಲರ್ಸ್ ಎದೆಯಲ್ಲಿ ನಡುಕ, ಬಾಲ್‌ ಹಿಡಿದು ಈತ ದಾಳಿಗೆ ಬಂದರೆ ಬ್ಯಾಟ್ಸ್‌ ಮ್ಯಾನ್‌ ಗಳಿಗೆ ಢವಢವ…

YES. ನಾವು ಮಾತನಾಡುತ್ತಿರುವುದು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟ್ಸ್‌ ಮ್ಯಾನ್‌ ಆಂಡ್ರೆ ರಸೆಲ್‌ ಬಗ್ಗೆ.. ಸದಾ ಚುಟುಕು ಮಾದರಿಯ ಕ್ರಿಕೆಟ್‌ ನಲ್ಲಿ ಮಿಂಚುವ ರೆಸಲ್‌ ಇದೀಗ ತಮ್ಮ ಒಂದು ಟ್ವೀಟ್‌ ನಿಂದ ಭಾರತದ ಅಭಿಮಾನಿಗಳ ಮನ ಗೆದ್ದಿದ್ದಾರೆ.

ವೆಸ್ಟ್ ಇಂಡೀಸ್ ಆಲ್ರೌಂಡರ್ ಕ್ರಿಕೆಟಿಗ ಆಂಡ್ರೆ ರಸೆಲ್ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ಸಂದೇಶವೊಂದನ್ನು ಕಳುಹಿಸಿದ್ದಾರೆ. ಇದು ಮುಂಬರುವ ಐಪಿಎಲ್​ 2021 ಕ್ರಿಕೆಟ್ ಬಗ್ಗೆ ಅಲ್ಲ, ಬದಲಿಗೆ ‘ವಾಕ್ಸಿನ್​ಮೈತ್ರಿ’ಯ ಅಡಿಯಲ್ಲಿ ಭಾರತವು ಜಮೈಕಾ ದೇಶಕ್ಕೆ ಕಳುಹಿಸಿರುವ ಕೊರೊನಾ ಲಸಿಕೆಗಳ ಬಗ್ಗೆ…..! ಕೆಕೆಆರ್ ತಂಡದ ಸ್ಟಾರ್ ಪ್ಲೇಯರ್​ ಆದ ರಸೆಲ್ ಅವರು ಭಾರತವು ಲಸಿಕೆಗಳನ್ನು ಕಳುಹಿಸಿರುವುದಕ್ಕೆ ಹೃದಯಪೂರ್ವಕ ‘ಎ ಬಿಗ್​ ಬಿಗ್ ಬಿಗ್ ಥ್ಯಾಂಕ್ಯೂ’ ಎಂದು ಅಭಿನಂದನೆ ತಿಳಿಸಿದ್ದಾರೆ.

ಕೊರೊನಾ ಆಕ್ರಮಣಕ್ಕೆ ತುತ್ತಾಗಿರುವ ವಿಶ್ವ ಸಾಮಾನ್ಯ ಪರಿಸ್ಥಿತಿಗೆ ಮರಳಬೇಕೆಂದರೆ ಲಸಿಕೆಗಳ ಪಾತ್ರ ಮಹತ್ವದ್ದು. ಈ ದೃಷ್ಟಿಯಿಂದ ಕೊರೊನಾ ಲಸಿಕೆ ಭಾರತದಿಂದ ಜಮೈಕಾ ತಲುಪಿರುವ ಬಗ್ಗೆ ನಾವು ಪುಳಕಿತಗೊಂಡಿದ್ದೇವೆ. ಇದನ್ನು ಜಮೈಕಾದ ಜನರು ತುಂಬ ಪ್ರಶಂಸಿಸುತ್ತಾರೆ. ಜಮೈಕಾ ಮತ್ತು ಭಾರತ ಈಗ ಸಹೋದರರಾಗಿದ್ದೇವೆ ಎಂದು ಭಾವುಕರಾಗಿ ರಸೆಲ್​ ಮಾತನಾಡಿದ್ದಾರೆ.

 ರೆಸಲ್‌ ಮಾತ್ರವಲ್ಲದೇ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ದಿಗ್ಗಜ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಮತ್ತು ಕ್ರಿಸ್‌ ಗೇಲ್ ಕೂಡ ಭಾರತದ ಪ್ರಧಾನಿ ಮೋದಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ವಿಡಿಯೋ ಸಂದೇಶದಲ್ಲಿ ಮಾತನಾಡಿದ ಕ್ರಿಸ್‌ ಗೇಲ್ ಭಾರತದ ಈ ಸಹಾಯ ದಯಾಳು ಮನೋಭಾವ ನಿಜಕ್ಕೂ ಪ್ರಶಂಸನಾರ್ಹ ಎಂದಿದ್ದಾರೆ. ಇದರ ಜೊತೆಗೆ ಕೆರಿಬಿಯನ್ ದ್ವೀಪ ಸಮೂಹ ಭಾರತದೊಂದಿಗಿನ ಈ ಸಂಬಂಧವನ್ನು ಮತ್ತಷ್ಟು ಮುಂದುವರಿಸಲು ಬಯಸುತ್ತದೆ ಎಂದಿದ್ದಾರ. ಸದ್ಯ ಭಾರತ ದೇಶವು 35ಕ್ಕೂ ಹೆಚ್ಚು ದೇಶಗಳಿಗೆ ಕೊರೊನಾ ಲಸಿಕೆ ಮೂಲಕ ತನ್ನ ಸಹಾಯ ಹಸ್ತವನ್ನು ಚಾಚಿ ವಿಶ್ವಕ್ಕೆ ಮಾದರಿಯಾಗಿದೆ.

 

ರವಿಕುಮಾರ್.ಜೆ ಸ್ಪೀಡ್‌ ನ್ಯೂಸ್‌ ಕನ್ನಡ

 

 

Please follow and like us:

Leave a Reply

Your email address will not be published. Required fields are marked *

Next Post

ಸಾರಾಯಿ,ಸಿಗರೇಟ್ ಅಮಲಿನಲ್ಲಿ ನರ್ಸ್ ಚಿಕಿತ್ಸೆ

Fri Mar 19 , 2021
  ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಾರಾಯಿ ಕುಡಿದು ಅಮಲಿನಲ್ಲಿ ಚಿಕಿತ್ಸೆ ಮಾಡಿರುವ ಘಟನೆ ಗೋಕಾಕ್ ತಾಲೂಕಿನ ಶಿಂದಿಕುರಬೇಟದ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಈಕೆ ಸಾರಾಯಿ ಕುಡಿದು ಉಚಿತ ಇಂಜೆಕ್ಷನ್ ನೀಡಿ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.ನರ್ಸ್ ಅನ್ನು ಕೂಡಲೇ ಅಮಾನತು ಮಾಡಬೇಕೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನರ್ಸ್ ಅಮಲಿಗೆ ಯಾವುದೇ ಜೀವ ಬಲಿಯಾಗುವುದಕ್ಕೂ ಮೊದಲು  ಜಿಲ್ಲಾ ಆರೋಗ್ಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಅಗ್ರಹಿಸಿದ್ದಾರೆ. […]

Advertisement

Wordpress Social Share Plugin powered by Ultimatelysocial