ವಾರದಲ್ಲಿ 3 ದಿನ ರಜೆ.. ಸಂಬಳದಲ್ಲಿ ಬದಲಾವಣೆ.. ಯಾವಾಗಿನಿಂದ ಗೊತ್ತಾ?

ವಾರದಲ್ಲಿ 3 ದಿನ ರಜೆ.. ಸಂಬಳದಲ್ಲಿ ಬದಲಾವಣೆ..  ಯಾವಾಗಿನಿಂದ ಗೊತ್ತಾ?

ನವದೆಹಲಿ: ವಾರದಲ್ಲಿ ಕೇವಲ ನಾಲ್ಕು ದಿನ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೇ ನಿಮಗಾಗಿ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಲು ಮುಂದಾಗಿದೆ. ಕೆಲಸದ ಅವಧಿ ಹಾಗೂ ಸ್ಯಾಲರಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದು, ಇವುಗಳು ಚಾಲನೆಗೆ ಬಂದರೆ..

ಆಗ ವಾರಕ್ಕೆ ನಾಲ್ಕು ದಿನ ಕೆಲಸ ದಿನಗಳು ಮಾತ್ರ ಇರುತ್ತವೆ. ಅಂದರೆ ಮೂರು ದಿನಗಳ ರಜೆಗಳು ದೊರೆಯುತ್ತವೆ.

ವೇತನಗಳು, ಸಾಮಾಜಿಕ ಭದ್ರತೆ, ಕೈಗಾರಿಕಾ ಸಂಬಂಧಗಳು, ವೃತ್ತಿಪರ ರಕ್ಷಣೆ ಎಂಬ ನಾಲ್ಕು ಹೊಸ ಲೇಬರ್ ಕೋಡ್‌ಗಳು ಜಾರಿಯಾಗಲಿವೆ. ಬರುವ ಆರ್ಥಿಕ ವರ್ಷದಿಂದ ಈ ನಾಲ್ಕು ಹೊಸ ಕೋಡ್‌ಗಳು ಜಾರಿಯಾಗುತ್ತವೆ ಎನ್ನಲಾಗಿದೆ. . ಈ ಹೊಸ ಕೋಡ್‌ಗಳು ಜಾರಿಗೆ ಬಂದ್ರೆ, ಉದ್ಯೋಗ, ಕೆಲಸ ವೇಳೆಗಳು ಮುಂತಾದ ಅಂಶಗಳ ಸಂಬಂಧಿ ಹಲವು ಬದಲಾವಣೆಗಳನ್ನು ಕಾಣಬಹುದಾಗಿದೆಯಂತೆ. ಹೊಸ ಲೇಬರ್ ಕೋಡ್‌ಗಳು ಜಾರಿಗೆ ಬಂದರೆ.. ವಾರಕ್ಕೆ ನಾಲ್ಕು ದಿನಗಳ ಕೆಲಸ ದಿನಗಳು ಲಭ್ಯವಿರುತ್ತವೆ.ಹೀಗಿದ್ದರೂ ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು. ವಾರಕ್ಕೆ 48 ಗಂಟೆಗಳ ಕೆಲಸ ಮಾಡಬೇಕು. ಜೊತೆಗೆ ಹೊಸ ಕೋಡ್‌ಗಳು ಜಾರಿಗೆ ಬಂದರೆ. ಟೇಕ್‌ ಹೋಮ್‌ ಸ್ಯಾಲರಿ ಕಡಿಮೆ ಇರಲಿದೆಯಂತೆ.

ಅದೇಸಮಯದಲ್ಲಿ ಕಂಪನಿಗಳ ಮೇಲೆ ಹೆಚ್ಚಿನ ಪಿಎಫ್ ಕಂಟ್ರಿಬ್ಯೂಷನ್ ಬಾರ ಬೀಳಬಹುದು. ನೌಕರರ ವೇತನ ಕಡಿಮೆಯಾದರೂ ಪಿಎಫ್ ಕಂಟ್ರಿಬ್ಯೂಷನ್ ಹೆಚ್ಚಳದಿಂದ ಪ್ರಯೋಜನ ಪಡೆಯಬಹುದಾಗಿದೆ. ಹೊಸ ಲೇಬರ್ ಕೋಡ್‌ಗಳು ಚಾಲನೆಯಲ್ಲಿ ಬರುವುದರಿಂದ ನೌಕರರ ಬೇಸಿಕ್ ಸ್ಯಾಲರಿಹೆಚ್ಚಾಗಲಿದೆಯಂತೆ, ಇದರಿಂದ ಪಿಎಫ್ ಕಂಟ್ರಿಬ್ಯೂಷನ್ ಹೆಚ್ಚಾಗಲಿದೆಯಂತೆ. ಹೊಸ ಕೋಡ್‌ಗಳ ಪ್ರಕಾರ ನೌಕರರ ಪ್ಯಾಕೇಜ್‌ನಲ್ಲಿ 50 ಶೇಕಡಾ ಬೇಸಿಕ್ ಪೇ ಇರಬೇಕು ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಡಿಮೆ ಹೂಡಿಕೆ ಮಾಡಿ 4 ಲಕ್ಷ ರೂ. ಲಾಭ ಗಳಿಸಲು ಇಲ್ಲಿದೆ ಅವಕಾಶ

Mon Dec 20 , 2021
ಸ್ವಂತ ಬ್ಯುಸಿನೆಸ್ ಶುರು ಮಾಡಬೇಕೆಂದು ಅನೇಕರು ಕನಸು ಕಾಣುತ್ತಾರೆ. ಆದ್ರೆ ಆರ್ಥಿಕ ಸಮಸ್ಯೆಯಿಂದಾಗಿ ಬ್ಯುಸಿನೆಸ್ ಆಸೆ ಕೈಬಿಡ್ತಾರೆ. ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ನೀಡುವ ಅನೇಕ ಬ್ಯುಸಿನೆಸ್ ಇದೆ. ಅದ್ರಲ್ಲಿ ಬೋನ್ಸಾಯ್ ಸಸ್ಯದ ಬ್ಯುಸಿನೆಸ್ ಕೂಡ ಒಂದು. ಬೋನ್ಸಾಯ್ ಸಸ್ಯ ಅದೃಷ್ಟವೆಂದು ಪರಿಗಣಿಸಲಾಗಿದೆ. ಹಾಗಾಗಿ ಮನೆ, ಕಚೇರಿ ಸೇರಿದಂತೆ ಎಲ್ಲ ಕಡೆ ಈ ಗಿಡವನ್ನು ಜನರು ಇಡುತ್ತಾರೆ. ಅಲಂಕಾರಿಕವಾಗಿಯೂ ಇದನ್ನು ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಈ ಗಿಡಗಳ ಬೆಲೆ 200 ರೂಪಾಯಿಯಿಂದ […]

Advertisement

Wordpress Social Share Plugin powered by Ultimatelysocial