”ವೀಲ್ ಚೇರ್ ರೋಮಿಯೋ”ಗೆ ಸಿಕ್ಕ ರೆಸ್ಪಾನ್ಸ್ ಕಂಡು ಕಿಚ್ಚ ಸುದೀಪ್ ಹೇಳಿದ್ದೇನು

 

ಕನ್ನಡ ಬೆಳ್ಳಿತೆರೆಯಲ್ಲೀಗ ಸಿನಿಮಾಗಳ ಟ್ರಾಫಿಕ್ ಶುರುವಾಗಿದೆ. ವಾರಕ್ಕೆ ಏನಿಲ್ಲ ಅಂದ್ರೂ ಏಳರಿಂದ ಎಂಟು ಸಿನಿಮಾಗಳು ರಿಲೀಸ್ ಆಗ್ತಿವೆ. ಇಷ್ಟು ಸಿನಿಮಾಗಳಲ್ಲಿ ಎಲ್ಲವೂ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತವೆ ಅಂತನೂ ಏನು ಇಲ್ಲ. ಕಂಟೆಂಟ್ ಹಾಗೂ ಕ್ವಾಲಿಟಿ ಸಿನಿಮಾಗಳನ್ನ ಮಾತ್ರ ಸಿನಿಪ್ರೇಮಿಗಳು ಬಾಚಿತಬ್ಬಿಕೊಳ್ಳುತ್ತಾರೆ ಎಂಬುವುದಕ್ಕೆ ಈ ವಾರ ತೆರೆಗೆ ಬಂದ ವೀಲ್‍ಚೇರ್ ರೋಮಿಯೋ ತಾಜಾ ಉದಾಹರಣೆ.

ಇದೇ ಶುಕ್ರವಾರ ಒಂದಷ್ಟು ಕಾಂಪಿಟೇಷನ್ ನಡುವೆ ಥಿಯೇಟರ್‌ಗೆ ಲಗ್ಗೆ ಇಟ್ಟ ‘ವೀಲ್‍ಚೇರ್ ರೋಮಿಯೋ’ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಗಟ್ಟಿತನ ಹಾಗೂ ಅಪರೂಪದ ಕಥಾನಕದ ಮೂಲಕ ಆಕರ್ಷಿಸುತ್ತಿರುವ ಈ ಸಿನಿಮಾಗೆ ಪೈಲ್ವಾನ್ ಬಲ ಸಿಕ್ಕಿದೆ. ಅಂದರೆ ಕಿಚ್ಚ ಸುದೀಪ್ ‘ವೀಲ್‍ಚೇರ್ ರೋಮಿಯೋ’ ಸಿನಿಮಾಗೆ ಶುಭ ಹಾರೈಸಿದ್ದಾರೆ. ಚಿತ್ರದ ಬಗ್ಗೆ ಒಳ್ಳೆ ರಿವ್ಯೂ ರಿಪೋರ್ಟ್ ಬರ್ತಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಟ್ವೀಟ್ ಮೂಲಕ ಶುಭ ಕೋರಿದ್ದಾರೆ.

ಅಗಸ್ತ್ಯ ಬ್ಯಾನರ್ ನಡಿಯಲ್ಲಿ ಎಂ.ವೆಂಕಟಾಚಲಯ್ಯ ನಿರ್ಮಾಣ ಮಾಡಿರುವ ವೀಲ್‍ಚೇರ್ ರೋಮಿಯೋ ಚಿತ್ರಕ್ಕೆ ನಟರಾಜ್ ಓಂಕಾರ ಹಾಕಿದ್ದು, ಅಂಧ ನಾಯಕಿಯಾಗಿ ಮಯೂರಿ, ಕಾಲಿಲ್ಲದ ನಾಯಕನಾಗಿ ರಾಮ್ ಚೇತನ್, ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲನಾಣಿ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಪೋಷಣೆ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊನೆಗೂ ಜಂಟಿಯಾಗಲು ತೀರ್ಮಾನಿಸಿದ ನಟ ಜೆಕೆ: ಹುಡುಗಿ ಯಾರು ಗೊತ್ತೇ?

Tue May 31 , 2022
  ಬೆಂಗಳೂರು: ಕಿರುತೆರೆ, ಸ್ಯಾಂಡಲ್ ವುಡ್ ನಲ್ಲಿ ನಟಿಸಿ, ಫ್ಯಾಶನ್ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಈಗ ಮದುವೆಯಾಗಲು ಹೊರಟಿದ್ದಾರೆ. ಇಷ್ಟು ದಿನ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ಎಂದು ಜೆಕೆಗೆ ಪ್ರಶ್ನೆ ಮಾಡುತ್ತಲೇ ಇದ್ದರು. ಇದೀಗ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಜೆಕೆ ಮದುವೆಯಾಗಲು ಹೊರಟಿದ್ದು, ಅವರು ಮದುವೆಯಾಗುತ್ತಿರುವ ಹುಡುಗಿಯೂ ಫ್ಯಾಶನ್ ಲೋಕದ ಪ್ರತಿಭಾವಂತೆಯೇ ಎನ್ನುವುದು ತಿಳಿದುಬಂದಿದೆ. ಖ್ಯಾತ ಫ್ಯಾಶನ್ ಡಿಸೈನರ್ ಅಪರ್ಣಾ […]

Advertisement

Wordpress Social Share Plugin powered by Ultimatelysocial