ಪ್ರತಿಯೊಬ್ಬರು ಧಾರ್ಮಿಕತೆಯನ್ನು ಬೆಳೆಸಿಕೊಂಡಾಗ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ.

ಪ್ರತಿಯೊಬ್ಬರು ಧಾರ್ಮಿಕತೆಯನ್ನು ಬೆಳೆಸಿಕೊಂಡಾಗ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಮುಂಡರಗಿಯ ಡಾಕ್ಟರ್ ಅನ್ನದಾನೇಶ್ವರ ಮಹಾ ಶಿವಯೋಗಿಗಳು ಹೇಳಿದರು

ಯಲಬುರ್ಗಾ ಪಟ್ಟಣದ ಶ್ರೀ ಮಗ್ಗಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀ ಬಸವಲಿಂಗೇಶ್ವರ ಸ್ವಾಮಿಗಳ 12ನೇ ವರ್ಷದ ಪಿಟೋ ರೋಣ ಸಮಾರಂಭದ ಪ್ರಯುಕ್ತ ಅಡ್ಡ ಪಲ್ಲಕ್ಕಿ ಮಹೋತ್ಸವ ದಲ್ಲಿ ಮಾತನಾಡಿದ ಅವರು ಇಲ್ಲಿಯೇ ಶ್ರೀಧರಮರುಡಿ ಹಿರೇಮಠವು ಚಿಕ್ಕದಿರಬಹುದು ಆದರೆ ಇಲ್ಲಿಯ ಭಕ್ತರ ಮನಸ್ಸು ಬಹಳ ದೊಡ್ಡದು ಆದ್ದರಿಂದಲೇ ಹಲವಾರು ದಶಕದಿಂದಲೂ ತನ್ನದೇ ಆದ ಧಾರ್ಮಿಕ ಕಾರ್ಯಕ್ರಮಗಳಿಂದ ಭಕ್ತರನ್ನು ಸೆಳೆಯುತ್ತದೆ ಎಂದರು

ಈ ಹಿಂದಿನ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ಇಂದಿನ ಶ್ರೀಗಳು ಸಾಗುತ್ತಿದ್ದಾರೆ ಶ್ರೀ ಮಠಕ್ಕೆ ಯಾವುದೇ ಜಾತಿ ಭೇದ ಬಡವ ಶ್ರೀಮಂತ ಎಂಬುದಿಲ್ಲ ಎಂದರು

ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ ದಾನ ಧರ್ಮ ಪರೋಪಕಾರಿಗಳಿಂದ ಪುಣ್ಯದ ಪ್ರಾಪ್ತಿಗೆ ಮುಕ್ತಿಯನ್ನು ಹೊಂದಲು ಸಾಧ್ಯವಿದೆ ಪಾಪ ಕರ್ಮಗಳನ್ನು ಮಾಡಿ ಪುಣ್ಯವನ್ನು ಬಯಸಿದರೆ ಸಾಧ್ಯವಿಲ್ಲ ಸುಖ ಸಮೃದ್ಧಿಗೆ ಸತ್ಕರ್ಮಗಳು ಮಾರ್ಗವೇ ದಾರಿ ಎಂದರು

ಇದೇ ಸಂದರ್ಭದಲ್ಲಿ ಶ್ರೀಧರ ಮುರುಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ನಾವು ಮಾಡುವ ಕಾರ್ಯಗಳು ಸದಾ ಸಮಾಜಮುಖಿಯಾಗಿರಬೇಕು ಅಂದಾಗ ಜೀವನದಲ್ಲಿ ಯಶಸ್ವಿ ಕಾಣಲು ಸಾಧ್ಯವಾಗುತ್ತದೆ ಎಂದರು

ಇದೇ ಸಂದರ್ಭದಲ್ಲಿ ಜಿಗೇರಿಯ ಶ್ರೀ ಗುರು ಸಿದ್ದೇಶ್ವರ ಸ್ವಾಮೀಜಿ ಶ್ರೀ ಗುರು ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಈರಣ್ಣ ಹುಬ್ಬಳ್ಳಿ ಈರಪ್ಪ ಕೊಡುಗುಂಟಿ ಬಸಲಿಂಗಪ್ಪ ಕೊತ್ತಲ್ ಶಿವಕುಮಾರ್ ಭೂತೆ ಇನ್ನು ಮುಂತಾದವರು ಭಾಗವಹಿಸಿದ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿಯಲ್ಲಿ ಸಿಎಮ್ ಬಸವರಾಜ್ ಬೊಮ್ಮಾಯಿ ಹೇಳಿಕೆ.

Tue Jan 31 , 2023
ಹುಬ್ಬಳ್ಳಿಯಲ್ಲಿ ಸಿಎಮ್ ಬಸವರಾಜ್ ಬೊಮ್ಮಾಯಿ ಹೇಳಿಕೆ. ಮಹದಾಯಿ ಯೋಜನೆ ಅನುಷ್ಠಾನ ವಿಚಾರ, ಗೋವಾ ಸರ್ಕಾರದ ನಡೆಯ ಬಗ್ಗೆ ನಮಗೆ ಗೋತ್ತಿಲ್ಲ. ಈಗಾಗಲೇ ಕಾನೂನು ಹೋರಾಟವಾಗಿ ಸುಪ್ರೀಂ ಕೋರ್ಟ್ ಆದೇಶದ ಮೇಲೆ ಟ್ರಿಮಿನಲ್ ರಚನೆಯಾಗಿದೆ. ಅದರ ಪರಿಶೀಲನೆ ಸಹ ಆಗಿ, ತೀರ್ಪು ನೀಡಿದೆ. ಮಹದಾಯಿ ಯೋಜನೆ ಅನುಷ್ಠಾನ ವನ್ನು ಕೇಂದ್ರ ಸರ್ಕಾರದ 2016 ರಲ್ಲಿ ಡಿಪಿಆರ್ ನೀಡಲಾಗಿತ್ತು. ಸದ್ಯ ಡಿಪಿಆರ್ ಸಹ ಅನುನತಿ ನೀಡಿದೆ. ಕಾನೂನು ಹೋರಾಟವಾಗಿಯೇ ಇದೆಲ್ಲ ಆಗಿದೆ. ಎಚ್.ವಿಶ್ವನಾಥ […]

Advertisement

Wordpress Social Share Plugin powered by Ultimatelysocial