ತೋಟದಲ್ಲಿ ಸಮತಟ್ಟು ಮಾಡುವಾಗ ಕೇಳಿ ಬಂತು ಭಾರಿ ಸದ್ದು.

12ನೇ ಶತಮಾನದ ಯಲಮಂಚಿಲಿ ಚಾಲುಕ್ಯರ ಕಾಲದ ಕಲ್ಲಿನ ಕುಂಡಗಳು, ಪಿರಮಿಡ್‌ಗಳು, ಶಿಲಾಶಾಸನಗಳು, ಕಲ್ಲು ಚಪ್ಪಡಿಗಳು ಪತ್ತೆಯಾಗಿವೆ. ಇವುಗಳಷ್ಟೇ ಅಲ್ಲ.. ಪುರಾತನವಾದ ಇಟ್ಟಿಗೆಗಳು, ದೇವಾಲಯದ ಅವಶೇಷಗಳು ಮತ್ತು ಶಿಲಾಶಾಸನಗಳೂ ಆ ಪ್ರದೇಶದಲ್ಲಿ ಕಂಡುಬಂದಿವೆ.

ಭೂಮಿ ಅಗೆಯುವಾಗ ಹೊಲ ಅಥವಾ ತೋಟಗಳಲ್ಲಿ ಆಗಾಗ ಐತಿಹಾಸಿಕ ಪಳೆಯುಳಿಕೆಗಳು, ವಸ್ತುಗಳು ಕಂಡುಬರುತ್ತಿರುತ್ತವೆ. ಇಂತಹ ಸುದ್ದಿಗಳು ಜಗತ್ತಿನ ನಾನಾನ ಭಾಗಗಳಲ್ಲಿ ಆಗಾಗ ಕೇಳುತ್ತಿರುತ್ತೇವೆ. ಅಂಥದ್ದೇ ಒಂದು ಅಪರೂಪದ ಘಟನೆ ಆಂಧ್ರ ಪ್ರದೇಶದಲ್ಲಿ   ನಡೆದಿದೆ. ರೈತರು ತಮ್ಮ ಹೊಲಗಳನ್ನು ಸಮತಟ್ಟುಗೊಳಿಸುವಾಗ, 12ನೇ ಶತಮಾನದಷ್ಟು ಹಿಂದಿನ ಪುರಾತನ ಹೆಗ್ಗುರುತುಗಳು ಕಂಡುಬಂದಿವೆ. ವಿವರಗಳಿಗೆ ಹೋಗುವುದಾದರೆ.. ಕಾಕಿನಾಡ  ಜಿಲ್ಲೆಯ ತುನಿ ಸಮೀಪದ ಗೊಂಪಕೊಂಡ ಪ್ರದೇಶದಲ್ಲಿ ರೈತರು ತಮ್ಮ ಹೊಲಗಳನ್ನು ಸಮತಟ್ಟು ಮಾಡುತ್ತಿದ್ದಾಗ.. 12ನೇ ಶತಮಾನದ ಯಲಮಂಚಿಲಿ ಚಾಲುಕ್ಯರ ಕಾಲದ ಕಲ್ಲಿನ ಕುಂಡಗಳು ಪಿರಮಿಡ್‌ಗಳು, ಶಿಲಾಶಾಸನಗಳು, ಕಲ್ಲು ಚಪ್ಪಡಿಗಳು ಪತ್ತೆಯಾಗಿವೆ. ಇವುಗಳಷ್ಟೇ ಅಲ್ಲ.. ಪುರಾತನವಾದ ಇಟ್ಟಿಗೆಗಳು, ದೇವಾಲಯದ ಅವಶೇಷಗಳು ಮತ್ತು ಶಿಲಾಶಾಸನಗಳೂ ಆ ಪ್ರದೇಶದಲ್ಲಿ ಕಂಡುಬಂದಿವೆ.

ಈ ಗೊಂಪಕೊಂಡ ಪ್ರದೇಶದ ಸಮೀಪದಲ್ಲಿ ಒಂದು ಊರು ಇತ್ತೆಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲಿನ ಜನ ಬೆಂಕಿ ಅವಘಡದಿಂದಲೋ ಅಥವಾ ಸಿಡುಬಿನಂತಹ ಭಯಾನಕ ಕಾಯಿಲೆಯಿಂದಲೋ ವಲಸೆ ಹೋಗಿರಬೇಕು. ಆದ್ದರಿಂದ ಕಾಲಾಂತರದಲ್ಲಿ ಅಲ್ಲಿನ ದೇವಾಲಯವು ಮಣ್ಣಿನಲ್ಲಿ ಹೂತು ಹೋಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಇಲ್ಲಿ ವಾಸಿಸುತ್ತಿರುವ ರೈತರು ತಮ್ಮ ಹೊಲದ ಕೆಲಸದಲ್ಲಿ ದೊರೆತಿರುವ ಈ ದೇವಾಲಯದ ಕಲ್ಲುಗಳನ್ನು ತೋಟಕ್ಕೆ ಗಡಿ ಬೇಲಿಯಾಗಿ, ಉತ್ಖನನದಲ್ಲಿ ದೊರೆತ ದೇವರ ವಿಗ್ರಹಗಳನ್ನು ದೇವಸ್ಥಾನಗಳಲ್ಲಿಟ್ಟು ಪೂಜಿಸುತ್ತಿದ್ದೇವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಪಠಾಣ್'​ ಯಶಸ್ಸಿನ ಬಳಿಕ 'ಜವಾನ್'​ ನೋಡಲು ಅಭಿಮಾನಿಗಳ ಕಾತರ.

Mon Jan 30 , 2023
ನಾಲ್ಕು ವರ್ಷಗಳ ಸಂಕ್ಷಿಪ್ತ ವಿರಾಮದ ನಂತರ, ಶಾರುಖ್ ಖಾನ್ ಅವರು ತಮ್ಮ ಇತ್ತೀಚಿಗೆ ಬಿಡುಗಡೆಯಾದ ಪಠಾಣ್​ನೊಂದಿಗೆ ಪುನಃ ಕಿಂಗ್ ಖಾನ್​ ಎಂದು ಕರೆಸಿಕೊಳ್ಳುತ್ತಿದ್ದಾರೆ. ಅವರು ಇದೀಗ ಬಾಲಿವುಡ್‌ನಲ್ಲಿ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು ಎಂದು ಎಲ್ಲರೂ ಹೇಳಿಕೊಳ್ಳುತ್ತಿದ್ದಾರೆ. ಶಾರುಖ್ ಖಾನ್ ಅವರ ʼಪಠಾಣ್​ʼ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಇದು ಸಾರ್ವಕಾಲಿಕ ಬಾಲಿವುಡ್ ಓಪನರ್ ಆಗಿದ್ದು ಮಾತ್ರವಲ್ಲದೆ, ಬಾಕ್ಸ್ ಆಫೀಸ್‌ನಲ್ಲಿ ಅನೇಕ ದಾಖಲೆಗಳನ್ನು ಸಹ ಮುರಿದಿದೆ. ನಟನ ಚಿತ್ರವನ್ನು ಕೇವಲ 4 […]

Advertisement

Wordpress Social Share Plugin powered by Ultimatelysocial