ತಾಳಿ ಕಟ್ಟಿದ ಗಂಡನನ್ನೇ ಕೊಂದ ಪಾಪಿ ಪತ್ನಿ

ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ…!

ಹೀಗೆ ಖಾಕಿ ಕೈಯಲ್ಲಿ ಲಾಕ್ ಆಗಿ ವಿಡಿಯೋಗೆ ಫೋಸ್ ಕೊಡುತ್ತಿರುವ ಈ ಆಸಾಮಿಗಳು ಮಾಡಿದ್ದು ಮಾತ್ರ ಕ್ಯಾಕರಿಸಿ ಉಗಿಯುವಂತೆ ಕೆಲ್ಸ. ಇಬ್ಬರು ಖತರ್ನಾಕ್ ಗಳ ಜೊತೆ ಇಲ್ಲೊಬ್ಳು ಕುಟುಂಬಕ್ಕೆ ಮಾರಿ ಆದ ನಾರಿ ಕೂಡ ಇದ್ದಾಳೆ ನೋಡಿ. ಇವರ ಹೆಸ್ರು ಶಿವಮಲ್ಲ ಅಲಿಯಾಸ್ ಕರಿಯ ಮತ್ತು ಮಲ್ಲೇಶ್ , ಪ್ರೇಮಾ. ಈ ತ್ರಿಮರ‍್ತಿಗಳು ಒಟ್ಟಾಗಿ ಎಸಗಿರುವ ಘನಂದಾರಿ ಕೆಲ್ಸದ ಬಗ್ಗೆ ಗೊತ್ತಾದ್ರೆ ನೀವು ಕೂಡ ಒಂದು ಕ್ಷಣ ದಂಗಾಗುವುದು ಗ್ಯಾರೆಂಟಿ. ಅಷ್ಟಕ್ಕೂ ಈ ಮಹಾನುಭಾವಿಗಳು ಮಾಡಿರುವ ಆ ನೀಚ ಕೆಲ್ಸ ಬೇರೇನು ಅಲ್ಲ..ಅದು ಮರ್ಡರ್..

 

ತಾಳಿ ಕಟ್ಟಿದ ಗಂಡನನ್ನೇ ಕೊಂದ ಪಾಪಿ ಪತ್ನಿ

ಪ್ರಿಯ ವೀಕ್ಷಕರೇ, ಫೋಟೋಗೆ ಫೋಸ್ ಕೊಡುತ್ತಿರುವ ಈ ಚಂದುಳ್ಳಿ ಚೆಲುವೆಯ ಹೆಸರು ಪ್ರೇಮ. ಪ್ರೇಮ ತನ್ನ ಕಾಮದಾಟಕ್ಕಾಗಿ ತಾಳಿ ಕಟ್ಟಿದ ಗಂಡನನ್ನೆ ಚಟ್ಟಕ್ಕೇರಿಸಿದವಳು. ಪರ ಪುರುಷರ ಸಂಗ ಬೆಳೆಸಿದ ಈಕೆ ತನ್ನ ಗಂಡನಿಗೆ ಸಾವಿನ ಮನೆಯ ದಾರಿ ತೋರಿಸಿದವಳು. ತನ್ನ ಚಪಲ ತೀರಿಸಲು ಪರಪುರುಷನ ಜೊತೆ ಕೈ ಜೋಡಿಸಿ ಗಂಡನ ಹತ್ಯೆಗೆ ನಕ್ಷೆ ಬರೆದವಳು.

೨ ಮಕ್ಕಳ ತಾಯಿಗೆ ಮತ್ತೆ ಶುರುವಾಗಿತ್ತು ಲವ್, ಖತರ್ನಾಕ್ ಕರಿಯನ ಕೈ ಹಿಡಿದ ‘ಪ್ರೇಮಾ’

ಈ ಘಟನೆ ನಡೆದಿದ್ದು ಬೆಂಗಳೂರು ಗ್ರಾಮಾಂತರದ ಆನೇಕಲ್ ತಾಲ್ಲೂಕಿನ ಜಿಗಣಿ ಬಳಿಯ ಹಾರಗದ್ದೆಯಲ್ಲಿ. ಪ್ರೇಮ ಮತ್ತು ಮಾದೇಶ್ ಪ್ರೀತಿಸಿ ಮದುವೆಯಾದವರು. ಆರಂಭದಲ್ಲಿ ಇವರ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು. ತಮಿಳುನಾಡು ಮೂಲದ ಈ ದಂಪತಿ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ರು. ಬೆಂಗಳೂರಿನ ಜಿಗಣಿಯಲ್ಲಿ ವಾಸವಿದ್ರು. ಲಾಕ್ ಡೌನ್ ವೇಳೆ ಕೆಲ್ಸ ಇಲ್ಲದ ಕಾರಣ ಪ್ರೇಮ ಮತ್ತೆ ತಮಿಳುನಾಡಿಗೆ ಹೋಗಿದ್ದಾರೆ. ಅವಾಗ್ಲೇ ಎಡವಟ್ಟಾಗಿದ್ದು ನೋಡಿ.. ಲಾಕ್ ಡೌನ್ ವೇಳೆ ತಮಿಳುನಾಡಿಗೆ ಹೋಗಿದ್ದ ಪ್ರೇಮಾಗೆ ಆರೋಪಿ ಕರಿಯನ ಪರಿಚಯವಾಗಿದೆ. ಪರಿಚಯ ಪ್ರೇಮದ ರೂಪ ಪಡೆದುಕೊಂಡಿದೆ. ಮದುವೆಯಾಗಿ ಇಬ್ರು ಮಕ್ಕಳಿದ್ರು ಸಹ ಪ್ರೇಮಾ ಅವೆಲ್ಲವನ್ನು ಮರೆತು ಕರಿಯನೇ ಜೊತೆ ಪ್ರೇಮ್ ಕಹಾನಿಯಲ್ಲಿ ತೊಡಗಿದ್ದಾಳೆ. ಹೀಗಾಗಿ ಪ್ರೇಮಾ ಮತ್ತು ಕರಿಯಾ ಜೊತೆಯಾಗಿ ಬಾಳುವುದಕ್ಕೆ ನರ‍್ಧಾರ ಮಾಡಿದ್ದಾರೆ. ತಮ್ಮ ಅಕ್ರಮ ಸಂಬಂಧಕ್ಕೆ ತನ್ನ ಗಂಡ ಅಡ್ಡ ಬರುತ್ತಾನೆಂದು ಮನಗಂಡ ಪ್ರೇಮ ಮಾಸ್ಟರ್ ಪ್ಲಾನ್ ಮಾಡಿದ್ದಾಳೆ. ತನ್ನ ಗಂಡನನ್ನು ಕೊಲೆ ಮಾಡಿ ಅಕ್ರಮ ಸಂಬಂಧವನ್ನು ಸುಗಮ ಗೊಳಿಸುವ ಖತರ್ನಾಕ್ ತಂತ್ರ ರೂಪಿಸಿದ್ದಾಳೆ.

ಪ್ರೇಮಾ ಮಸಲತ್ತು:ಗಂಡನ ಜೀವಕ್ಕೆ ಕುತ್ತು

ತನ್ನ ಗಂಡನಿಗೆ ಸಾವಿನ ನಕ್ಷೆ ಸಿದ್ದ ಪಡಿಸಿದ ಈ ಪಾಪಿ ಪತ್ನಿ ಹಸೆಮಣೆ ಏರಿದವನನ್ನೆ ಮಸಣ ಸೇರಿಸಿದ್ದಾಳೆ. ಪ್ರೇಮ ತನ್ನ ಹೊಸ ಬಾಯ್ ಫ್ರೆಂಡ್ ಖರ‍್ನಾಕ್ ಕರಿಯಾ ಜೊತೆ ಕೃತ್ಯ ಎಸಗಿದ್ದಾಳೆ. ಕರಿಯನಿಗೆ ಆತನ ಸ್ನೇಹಿತ ಮಲ್ಲೇಶ್ ಕೂಡ ಸಾಥ್ ನೀಡಿದ್ದಾನೆ. ಈ ಖತರ್ನಾಕ್ ಗಳು ಪ್ರೇಮಾಳ ಗಂಡ ಮಾದೇಶ್ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಜಿಗಣಿ ಪೊಲೀಸರು ಯಶಸ್ವಿಯಾಗಿದ್ದು, ಎಲ್ಲರನ್ನು ಜೈಲಿಗಟ್ಟಿದ್ದಾರೆ.

ಪ್ರೇಮಾಳ ಪರಸಂಗದ ಆಟಕ್ಕೆ ಮಕ್ಕಳು ತಬ್ಬಲಿಯಾಗಿದ್ದಾರೆ. ತಂದೆ ಮಾದೇಶ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ತಾಯಿ ಪ್ರೇಮ ಮಾಡಿದ ತಪ್ಪಿಗೆ ಜೈಲು ಸೇರಿದ್ದಾರೆ. ತಂದೆಯೂ ಇಲ್ಲದೆ ತಾಯಿಯು ಇಲ್ಲದೇ ಮಕ್ಕಳು ಅನಾಥರಾಗಿದ್ದಾರೆ.ಪ್ರೇಮಾಳಿಗೆ ತನ್ನ ಗಂಡ ಬೇಡವಾಗಿದ್ದರೆ ಆತನಿಂದ ವಿಚ್ಚೇಧನ ಪಡೆದು ದೂರ ಇರಬಹುದಿತ್ತು. ಇಲ್ಲ ತನ್ನ ಗಂಡನನ್ನು ಆತನ ಪಾಡಿಗೆ ಬಿಡಬಹುದಿತ್ತು. ಆದರೆ ಆಕೆ ಮಾಡಿದ್ದು ಮಾತ್ರ ಹೇಯ ಕೆಲ್ಸ. ಇದೀಗ ಪ್ರೇಮಾಳ ಪಾಪದ ಕೊಡ ತುಂಬಿ ಹೋಗಿದೆ. ಮಾಡಿದ ತಪ್ಪಿಗೆ ತಕ್ಷ ಶಿಕ್ಷೆ ಅನುಭವಿಸಬೇಕಾಗಿದೆ. ತಾಯಿಯ ನೀಚ ಕೆಲ್ಸದಿಂದ ಮಕ್ಕಳು ತಬ್ಬಲಿಯಾಗುವಂತ್ತಾಗಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ.

 

 

Please follow and like us:

Leave a Reply

Your email address will not be published. Required fields are marked *

Next Post

ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ-ನಾಮಪತ್ರ ಸಲ್ಲಿಸಿದ ಆನಂದ ಮಾಮನಿ

Thu Oct 29 , 2020
ಸವದತ್ತಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ಬೆಳಗಾವಿ ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆನಡೆಯಲಿರುವ ಚುನಾವಣೆಗೆ ಸವದತ್ತಿ ಶಾಸಕ ಹಾಗೂ ವಿಧಾನ ಸಭಾ ಉಪಸಭಾಪತಿಗಳಾದ ಆನಂದ ಮಾಮನಿ ನಾಮಪತ್ರವನ್ನ ಸಲ್ಲಿಸಿದ್ದಾರೆ. ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ  ಆನಂದ ಮಾಮನಿ ನಾಮಪತ್ರ ಸಲ್ಲಿಸಿದ್ರು. Please follow and like us:

Advertisement

Wordpress Social Share Plugin powered by Ultimatelysocial