ಪತಿಯನ್ನು MLA ಮಾಡುವಂತೆ ದೇವರ ರಥಕ್ಕೆ ಬಾಳೆಹಣ್ಣು ಎಸೆದ ಪತ್ನಿ!

ಪತಿಯನ್ನು MLA ಮಾಡುವಂತೆ ದೇವರ ರಥಕ್ಕೆ ಬಾಳೆಹಣ್ಣು ಎಸೆದ ಪತ್ನಿ!
ಪತಿಗೆ ಮಾಲೂರು ತಾಲೂಕಿನ ಸೇವೆ ಮಾಡುವ ಅವಕಾಶ ಕಲ್ಪಿಸು ಎಂದು ಶಕ್ತಿ ದೇವತೆ ಮಾಲೂರು ಮಾರಿಕಾಂಬಾ ದೇವಿಗೆ ಹರಕೆ ಪತ್ರ!

ಆಂಕರ್: ಚುನಾವಣೆ ಸಮೀಪಿಸುತ್ತಿದಂತೆ ಕೆಲವರು ಈ ಬಾರಿ ಶತಾಯಗತಾಯ ಶಾಸಕರಾಗಲೇಬೇಕು ಎಂದು ಕಸರತ್ತು ಮಾಡುತ್ತಲೇ ಇದ್ದಾರೆ. ಮತದಾರರಿಗೆ ವಿವಿಧ ಭರವಸೆ ನೀಡುವ ಮೂಲಕ ಗಮನ ಸೆಳೆಯುತ್ತಿದ್ದರು, ಮತ್ತೆ ಕೆಲವರು ದೇವರ ಮೊರೆ ಹೋಗ್ತಿದ್ದಾರೆ. ಇದಕ್ಕೆ ಪೂರಕವಾಗಿ ಕೋಲಾರ ಜಿಲ್ಲೆಯ ಮಾಲೂರು ವಿಧಾನ ಕ್ಷೇತ್ರದಲ್ಲಿ ಒಂದು ಘಟನೆ ನಡೆದಿದೆ.
ಹೌದ.. ಪತಿಗೆ ಮಾಲೂರು ತಾಲೂಕಿನ ಸೇವೆ ಮಾಡುವ ಅವಕಾಶ ಕಲ್ಪಿಸಿ ಕೊಡು ತಾಯಿ ಎಂದು ಶಕ್ತಿ ದೇವತೆ ಮಾಲೂರಿನ ಮಾರಿಕಾಂಬಾ ದೇವಿಗೆ ಹರಕೆ ಪತ್ರ ಬರೆದರು ಹುಂಡಿಕೆ ಹಾಕಿದ್ದಾರೆ.
ಹೌದು! ಮಾಲೂರು ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಪ್ರಬಲ ಸಂಭಾವ್ಯ ಅಭ್ಯರ್ಥಿ ಆಗಿ ಗುರುತಿಸಿಕೊಂಡಿರುವ ಹೂಡಿ ವಿಜಯ್ ಕುಮಾರ್ ಅವರ ಪತ್ನಿ ಶ್ವೇತಾ ಅವರು ಶನಿವಾರ ಸೊಣಪನಹಟ್ಟಿಯಲ್ಲಿ ನಡೆದ ಬಸವಣ್ಣನ ಜಾತ್ರೆಗೆ ಭೇಟಿ ಕೊಟ್ಟು ದೇವರಿಗೆ ವಿಶೇಷವಾದ ಹರಕೆ ಕಟ್ಟಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಬಸವಣ್ಣನ ಜಾತ್ರಾ ಮಹೋತ್ಸವದಲ್ಲಿ ಒಂದು ವಿಶೇಷವಾದ ಪದ್ದತಿ ನಡೆದುಕೊಂಡು ಬಂದಿದೆ. ಯಾರಾದ್ರೂ ಭಕ್ತಿಯಿಂದ ತಮ್ಮ ಮನದ ಆಸೆಯನ್ನು ಬಾಳೆಹಣ್ಣಿನ ಮೇಲೆ ಬರೆದು ಅಥವಾ ಮನಸ್ಸಿನಲ್ಲಿ ಹರಕೆ ಕಟ್ಟಿಕೊಂಡು ದೇವರ ರಥದ ಮೇಲೆ ಬಾಳೆಹಣ್ಣು ಎಸೆದರೆ ಬರುವ ಜಾತ್ರೆಯ ಹೊತ್ತಿಗೆ ಹರಕೆ ಫಲಿಸುತ್ತೆ ಅನ್ನೋ ನಂಬಿಕೆ ನಡೆದುಕೊಂಡು ಬಂದಿದೆ.ಈಗಾಗಿ ಇದೆ ದಿನಕ್ಕಾಗಿ ಕಾಯುವ ಸುತ್ತಮುತ್ತಲಿನ ಗ್ರಾಮದವರು ಹಾಗೂ ರಾಜ್ಯದ ಬೇರೆ ಬೇರೆ ಭಾಗಗದ ಜನರು ಜಾತ್ರೆಗೆ ಭೇಟಿ ಕೊಟ್ಟು ಬಸವಣ್ಣ ದೇವರ ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಬೇಡಿಕೆ ಈಡೇರಿಸಿಕೊಳ್ಳುತ್ತಾರೆ. ಇನ್ನು ವಿಷಯ ತಿಳಿದು ಜಾತ್ರೆಗೆ ಬಂದ ಹೂಡಿ ವಿಜಯ್ ಕುಮಾರ್ ಅವರ ಪತ್ನಿ ಶ್ವೇತಾ ಅವರು ಮೊದಲು ರಾಸುಗಳಿಗೆ ಮೇವಿನ ವ್ಯವಸ್ಥೆ ಮಾಡಿ, ಬಸವಣ್ಣನ ಆಶೀರ್ವಾದ ಪಡೆದು ಬಳಿಕ ನನ್ನ ಪತಿ ವಿಜಯ್ ಕುಮಾರ್‌ರನ್ನು ಈ ಬಾರಿ ಶಾಸಕರನ್ನಾಗಿ ಮಾಡು ಎಂದು ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದು ಹರಕೆ ಕಟ್ಟಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿ ಜಿಲ್ಲಾ ನಾಯಕರ ಜೊತೆ ಅಮಿತ್ ಷಾ ಹೈವೋಲ್ಟೇಜ್ ಸಭೆ ವಿಚಾರ.

Sun Jan 29 , 2023
ಬೆಳಗಾವಿ ಜಿಲ್ಲಾ ನಾಯಕರ ಜೊತೆ ಅಮಿತ್ ಷಾ ಹೈವೋಲ್ಟೇಜ್ ಸಭೆ ವಿಚಾರ. ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ. ಯಡಿಯೂರಪ್ಪ ಹೇಳಿದ ಪ್ರತಿ ಶಬ್ದವೇ ನಮ್ಮ ಮಾತು. ಅಮಿತ್ ಷಾ 15 ಕ್ಷೇತ್ರ ಗೆಲ್ಲಲು ಸಲಹೆ ಕೊಟ್ಟಿದ್ದಾರೆ. ಅವರು ಹೇಳಿದ ಸಲಹೆಯಂತೆ ನಾವು ಕೆಲಸ ಮಾಡ್ತೇವೆ. ಭಿನ್ನಮತ ಮರೆತು ಬೆಳಗಾವಿಯ ಎಲ್ಲರೂ ಸಭೆಗೆ ಹಾಜರು ವಿಚಾರ. ನಮ್ಮ ಬಾಸ್ ಬಂದಾಗ ಆ್ಯಬ್ಸೆಂಟ್ ಆಗಲು ಯಾರಿಗಾದರೂ ಧೈರ್ಯ ಐತಾ?. ಅಮಿತ್ […]

Advertisement

Wordpress Social Share Plugin powered by Ultimatelysocial