ಅಂಡರ್‌-19 ಟಿ-20 ವಿಶ್ವಕಪ್‌.

ಇದೇ ಮೊದಲ ಬಾರಿಗೆ ನಡೆದ ಉದ್ಘಾಟನಾ ಅಂಡರ್‌-೧೯ ಮಹಿಳಾ ಟಿ-ಟ್ವೆಂಟಿ ವಿಶ್ವಕಪ್‌ ಟೂರ್ನಿಯನ್ನು ಭಾರತ ಗೆದ್ದುಕೊಂಡಿದೆ. ಬೌಲರ್ಸ್‌ಗಳು ಪ್ರದರ್ಶಿಸಿದ ಅತ್ಯದ್ಬುತ ನಿರ್ವಹಣೆಯ ನೆರವಿನಿಂದ ಇಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಟೂರ್ನಿಯ ಫೈನಲ್‌ ಪಂದ್ಯವನ್ನು ಭಾರತ ಏಳು ವಿಕೆಟ್‌ಗಳಿಂದ ಗೆದ್ದುಕೊಂಡು, ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಇದೇ ಮೊದಲ ಬಾರಿಗೆ ನಡೆದ ಟೂರ್ನಿಯ ಆರಂಭದಿಂದಲೂ ಭಾರತೀಯ ತಂಡ ಅಮೋಘ ನಿರ್ವಹಣೆ ನೀಡಿತ್ತು. ಅಲ್ಲದೆ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಗೆದ್ದುಕೊಂಡು ಪ್ರಶಸ್ತಿ ಸುತ್ತಿಗೆ ಎಂಟ್ರಿ ಕೊಟ್ಟದ್ದರೆ ಅತ್ತ ಆಸ್ಟ್ರೇಲಿಯಾಗೆ ಸೋಲುಣಿಸುವ ಮೂಲಕ ಇಂಗ್ಲೆಂಡ್‌ ಫೈನಲ್‌ಗೇರಿತ್ತು. ಇನ್ನು ಫೈನಲ್‌ ಹಣಾಹಣಿಯಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ ಪಡೆ ಸಂಪೂರ್ಣ ವೈಫಲ್ಯ ಕಂಡಿತು. ಮುಖ್ಯವಾಗಿ ಭಾರತೀಯ ಬೌಲರ್‌ಗಳ ಸೂಕ್ತ ದಾಳಿಗೆ ಉತ್ತರ ನೀಡುವಲ್ಲಿ ಆಂಗ್ಲಪಡೆ ತಡಕಾಡಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ನಿಯಾಮ್‌ ಹಾಲೆಂಡ್‌ (೧೦) ಹಾಗೂ ರಾಯ್ನಾ ಮೆಕ್‌ಡೊನಾಲ್ಡ್‌ (೧೯) ಕೆಲಹೊತ್ತು ಕ್ರೀಸ್‌ನಲ್ಲಿದ್ದು, ತಂಡಕ್ಕೆ ಆಸರೆಯಾಗಿದ್ದರು. ಅಂತಿಮವಾಗಿ ೧೭.೧ ಓವರ್‌ಗಳಲ್ಲಿ ೬೮ ರನ್‌ಗಳ ಅತ್ಯಲ್ಪ ರನ್‌ಗೆ ಸರ್ವಪತನ ಕಂಡಿತು. ಭಾರತ ಪರ ಅಮೋಘ ದಾಳಿ ಸಂಘಟಿಸಿದ್ದ ತಿತಾಸ್‌ ಸಧು, ಅರ್ಚನಾ ದೇವಿ ಹಾಗೂ ಪರ್ಶ್ವಿ ಛೋಪ್ರಾ ತಲಾ ಎರಡು ವಿಕೆಟ್‌ ಪಡೆದು ಮಿಂಚಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಶ್ಮೀರದ ಶ್ರೀನಗರದಲ್ಲಿ ಭಾರೀ ಹಿಮಪಾತವು ಇಂದು ನಡೆಯಲಿರುವ ಕಾಂಗ್ರೆಸ್‌ನ ಪ್ಯಾನ್-ಇಂಡಿಯಾ ಪಾದಯಾತ್ರೆ.

Mon Jan 30 , 2023
ಹೊಸದಿಲ್ಲಿ: ಕಾಶ್ಮೀರದ ಶ್ರೀನಗರದಲ್ಲಿ ಭಾರೀ ಹಿಮಪಾತವು ಇಂದು ನಡೆಯಲಿರುವ ಕಾಂಗ್ರೆಸ್‌ನ ಪ್ಯಾನ್-ಇಂಡಿಯಾ ಪಾದಯಾತ್ರೆ ‘ಭಾರತ್ ಜೋಡೊ ಯಾತ್ರೆ’ಯ ಸಮಾರೋಪ ಸಮಾರಂಭದ ಸಂಭ್ರಮಾಚರಣೆಯ ಉತ್ಸಾಹವನ್ನು ಕುಗ್ಗಿಸಬಹುದು. 135 ದಿನಗಳ ಸುದೀರ್ಘ ಕನ್ಯಾಕುಮಾರಿ-ಕಾಶ್ಮೀರ ಯಾತ್ರೆಯ ಸಮಾರೋಪದ ಅಂಗವಾಗಿ ಕಾಂಗ್ರೆಸ್ ಪಕ್ಷವು ಶೇರ್-ಐ-ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೆಗಾ ರ್ಯಾಲಿಯನ್ನು ಆಯೋಜಿಸುತ್ತಿದೆ. ಇಡೀ ಕಾಂಗ್ರೆಸ್ ನಾಯಕತ್ವವಲ್ಲದೆ , ವಿರೋಧ ಪಕ್ಷಗಳ ಹನ್ನೆರಡು ನಾಯಕರು ರ್ಯಾಲಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದಾಗ್ಯೂ, ಹಿಮಪಾತವು ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚುವಂತೆ […]

Advertisement

Wordpress Social Share Plugin powered by Ultimatelysocial