ಸರ್ಪ ದೋಷ ಮತ್ತು ಕಾಳ ಸರ್ಪಗಳ ದೋಷವು ಕೇವಲ ಈ ಜನ್ಮಕ್ಕೆ ಮಾತ್ರ

ಸೀಮಿತವಾಗಿರುವುದಿಲ್ಲ. ಅದು ನಮ್ಮ ಪೂರ್ವ ಜನ್ಮದಿಂದ ಬರುವುದು. ಜೊತೆಗೆ ಮುಂದಿನ ಜನ್ಮಕ್ಕೂ ಮುಂದುವರಿಯುವುದು ಎಂದು ಹೇಳಲಾಗುವುದು. ಲಗ್ನಾಧಿಪತಿ ಯಿಂದ ರಾಹು 7 ನೇ ಭಾವ ದಲ್ಲಿ ಇದ್ದರೆ 45 ರ ಮೇಲೆ ವಿವಾಹ ಅಂತೆ?! ಲಗ್ನಾಧಿಪತಿ ಯಿಂದ 7 ನೇ ಭಾವ ಮನೆ ಯಲ್ಲಿ ಶನಿ ಇದ್ದರೆ 35 ರ ಮೇಲೆ. ವಿವಾಹ. ಅಂತೆ,,,! ಅವರವರ ಪೂರ್ಣ ಪುಣ್ಯ ಸ್ಮರಣೆ ಫಲ ಇದ್ದರೆ ಬೇಗ ಸಹ ಆಗಬಹುದು…

ಒಮ್ಮೆ ಸರ್ಪ ದೋಷವನ್ನು ಹೊಂದಿದ್ದರೆ 12 ವರ್ಷಗಳ ವರೆಗೂ ಕಾಯುವುದು. ದೀರ್ಘ ಸಮಯದ ನಂತರವಾದರೂ ಅಂದುಕೊಂಡ ಶಿಕ್ಷೆಯನ್ನು ನೀಡುವುದು ಎಂದು ನಂಬಲಾಗಿದೆ.
ವಿವಿಧ ಬಗೆಯ ಕಾಳಸರ್ಪ ಯೋಗ
ಅನಂತ, ವಾಸುಕಿ, ಪದ್ಮನಾಭ, ಕುಳಿಕ, ಶಂಕಪಾಲ, ಮಹಾ ಪದ್ಮ, ತಕ್ಷಕ, ಶೇಷ,. ಘಟಕ ಎನ್ನುವ ಹೆಸರುಗಳನ್ನು ಹೊಂದಿರುವ 12 ಬಗೆಯ ಸರ್ಪಗಳಿವೆ.
ರಾಹು ಕೇತುಗಳು ಇರುವ ಮನೆಗಳಿಗೆ ಅನುಗುಣವಾಗಿ ಯಾವ ಸರ್ಪ ದೋಷ ಎಂದು ಗುರುತಿಸಲಾಗುವುದು.

ಅನಂತ ಕಾಳ ಸರ್ಪ ಯೋಗ:

ಅನಂತ ಕಾಳ ಸರ್ಪ ಯೋಗವು ಅತ್ಯಂತ ದೀರ್ಘಾವಧಿಯ ಕಾಳ ಸರ್ಪ ಯೋಗ. ಇದು ಸುಮಾರು 27 ವರ್ಷಗಳ ಕಾಲ ಬಾಧಿಸುವುದು ಎಂದು ಹೇಳಲಾಗುತ್ತದೆ.

ರಾಹು ಒಂದನೇ ಮನೆಯಲ್ಲಿ ಹಾಗೂ ಕೇತು ಏಳನೇ ಮನೆಯಲ್ಲಿ ಇದ್ದರೆ ಅದನ್ನು ಅನಂತ ಕಾಳ ಸರ್ಪಯೋಗ ಎಂದು ಪರಿಗಣಿಸಲಾಗುವುದು. ಈ ದೋಷ ಹೊಂದಿದವರು ದೀರ್ಘ ಆರೋಗ್ಯ ಸಮಸ್ಯೆ, ಸಂಸಾರದಲ್ಲಿ ಕಲಹ, ಉದ್ಯೋಗದಲ್ಲಿ ತೊಂದರೆಯನ್ನು ಅನುಭವಿಸುವರು. ಇವರು ಅತ್ಯಂತ ಕೀಳು ಮನೋಭಾವವನ್ನು ಹೊಂದಿರುತ್ತಾರೆ.

ವಾಸುಕಿ ಕಾಳ ಸರ್ಪ ಯೋಗ:

ನಮ್ಮ ಕುಂಡಲಿಯ 3ನೇ ಮನೆಯಲ್ಲಿ ರಾಹುವಿನ ವಾಸ ವಿದ್ದು, 9ನೇ ಮನೆಯಲ್ಲಿ ಕೇತು ಕುಳಿತುಕೊಂಡಿದ್ದರೆ ಆಗ ವ್ಯಕ್ತಿಯು ವಾಸುಕಿ ಸರ್ಪ ದೋಷವನ್ನು ಅನುಭವಿಸುವನು. ಅದರಿಂದ ವ್ಯಕ್ತಿ ಅಕಾಲಿಕ ಮರಣ, ಹಣದ ಸಮಸ್ಯೆ, ಸಂಬಂಧಗಳಲ್ಲಿ ತೊಂದರೆಯನ್ನು ಅನುಭವಿಸುವನು.

ಪದ್ಮನಾಭ ಕಾಳ ಸರ್ಪ ಯೋಗ:

ಈ ಯೋಗವು ವ್ಯಕ್ತಿಗೆ 48 ವರ್ಷ ಕಾಡುವುದು. ಜನ್ಮ ಕುಂಡಲಿಯ 5ನೇ ಮನೆಯಲ್ಲಿ ರಾಹು ಮತ್ತು 11ನೇ ಮನೆಯಲ್ಲಿ ಕೇತುವಿನ ಆಡಳಿತ ಇದ್ದರೆ ಅದು ಪದ್ಮನಾಭ ಕಾಳ ಸರ್ಪ ಯೋಗ ಎನಿಸಿಕೊಳ್ಳುವುದು. ಈ ಸಮಸ್ಯೆ ಇದ್ದವರಿಗೆ ಸಂತಾನ ಹೀನತೆ ಉಂಟಾಗುವುದು. ಇಲ್ಲವೇ ಮಕ್ಕಳ ಬಗ್ಗೆಯೇ ಅಧಿಕ ಚಿಂತನೆ ನಡೆಸಿ ಮಾನಸಿಕ ತೊಂದರೆಯನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಕುಳಿಕ ಕಾಳ ಸರ್ಪ ಯೋಗ:

ಆಗಾಗ ಅಪಘಾತಗಳು, ಆರ್ಥಿಕ ನಷ್ಟ ಅನ್ಯರಿಂದ ತೊಂದರೆ ಉಂಟಾಗುತ್ತಿದ್ದರೆ ಅದನ್ನು ಕುಳಿಕ ಕಾಳ ಸರ್ಪ ಯೋಗ ಎಂದು ಹೇಳಲಾಗುವುದು. 2ನೇ ಮನೆಯಲ್ಲಿ ರಾಹು ಮತ್ತು 8ನೇ ಮನೆಯಲ್ಲಿ ಕೇತು ಇದ್ದರೆ ಅದು ಕುಳಿಕ ಕಾಳ ಸರ್ಪದ ಯೋಗವಾಗಿರುತ್ತದೆ.

ಶಂಕಪಾಲ ಕಾಳ ಸರ್ಪಯೋಗ:

ಶಂಕಪಾಲ ಕಾಳ ಸರ್ಪ ಯೋಗವು ಸಾಮಾನ್ಯವಾಗಿ 42 ವರ್ಷಗಳ ಕಾಲ ಕಾಡುವುದು. ರಾಹು 4ನೇ ಮನೆಯಲ್ಲಿ ಹಾಗೂ ಕೇತು 10ನೇ ಮನೆಯಲ್ಲಿ ಇರುವಾಗ ಈ ಸಮಸ್ಯೆ ಉಂಟಾಗುವುದು ಎಂದು ಹೇಳಲಾಗುವುದು. ಈ ದೋಷದಿಂದ ವ್ಯಕ್ತಿ ಸಾಕಷ್ಟು ಆತಂಕ ಹಾಗೂ ಒತ್ತಡದಿಂದ ಜೀವನವನ್ನು ನಡೆಸುವನು.

ಮಹಾಪದ್ಮ ಕಾಳ ಸರ್ಪ ಯೋಗ:

ಈ ದೋಷವನ್ನು ವ್ಯಕ್ತಿ 54 ವರ್ಷಗಳ ಕಾಲ ಅನುಭವಿಸಬೇಕಾಗುವುದು. ಕುಂಡಲಿಯ 6ನೇ ಮನೆಯಲ್ಲಿ ರಾಹು ಮತ್ತು 12ನೇ ಮನೆಯಲ್ಲಿ ಕೇತುವಿನ ವಾಸ್ತವ್ಯ ಇರುತ್ತದೆ. ಈ ದೋಷದಿಂದಾಗಿ ವ್ಯಕ್ತಿಯ ಜೀವನದಲ್ಲಿ ಅಧಿಕ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಅನೇಕ ಖಾಯಿಲೆಯಿಂದ ಬಳಲುತ್ತಾರೆ.

ತಕ್ಷಕ ಕಾಳ ಸರ್ಪ ಯೋಗ:

ಈ ಯೋಗದಲ್ಲಿ ವ್ಯಕ್ತಿ ಎಲ್ಲಾ ಬಗೆಯ ವ್ಯಸನಗಳಿಗೂ ಬಲಿಯಾಗುತ್ತಾನೆ. ಇವರ ವ್ಯಸನದಿಂದಾಗಿಯೇ ಸಾಕಷ್ಟು ತೊಂದರೆಗಳು ಉಂಟಾಗುವುದು. ಕುಟುಂಬ ಜೀವನದಲ್ಲಿ ಅಧಿಕ ಸಮಸ್ಯೆಯನ್ನು ಅನುಭವಿಸಬೇಕಾಗುವುದು. ಕುಂಡಲಿಯ 7ನೇ ಮನೆಯಲ್ಲಿ ರಾಹು ಮತ್ತು 1ನೇ ಮನೆಯಲ್ಲಿ ಕೇತು ಇದ್ದರೆ ತಕ್ಷಕ ಕಾಳಸರ್ಪ ಯೋಗ ಎಂದು ಪರಿಗಣಿಸಲಾಗುವುದು.

ಶೇಷ ಕಾಳ ಸರ್ಪಯೋಗ:

ಕುಂಡಲಿಯ 12ನೇ ಮನೆಯಲ್ಲಿ ರಾಹು, 6ನೇ ಮನೆಯಲ್ಲಿ ಕೇತು ಇದ್ದರೆ ಶೇಷ ಕಾಳಸರ್ಪ ಯೋಗ ಎನ್ನಲಾಗುತ್ತದೆ. ಈ ಸಮಸ್ಯೆಯ ಪ್ರಭಾವದಿಂದ ವ್ಯಕ್ತಿ ಜೀವನದಲ್ಲಿ ಸಾಕಷ್ಟು ದೌರ್ಭಾಗ್ಯವನ್ನು, ಅನಾರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುವುದು.

ಘಟಕ ಕಾಳ ಸರ್ಪಯೋಗ:

ಘಟಕ ಕಾಳ ಸರ್ಪಯೋಗವು ಇದ್ದರೆ ವ್ಯಕ್ತಿ ಜೀವನದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಶಿಕ್ಷೆಯನ್ನು ಅನುಭವಿಸುವನು. ಕುಂಡಲಿಯ 10ನೇ ಮನೆಯಲ್ಲಿ ರಾಹು ಮತ್ತು 4ನೇ ಮನೆಯಲ್ಲಿ ಕೇತು ಇದ್ದರೆ ಘಟಕ ಕಾಳ ಸರ್ಪಯೋಗವು ಕಾಡುವುದು.

ಕಾಳ ಸರ್ಪ ಯೋಗಕ್ಕೆ ಪರಿಹಾರ ಕ್ರಮಗಳು:

ಈ ಯೋಗಗಳು ಅತ್ಯಂತ ಹಾನಿಕಾರಕ ಹಾಗೂ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಇಂತಹ ಸಮಸ್ಯೆಗಳಿಂದ ಮುಕ್ತಿ ಹೊಂದಲು ಕೆಲವು ಧಾರ್ಮಿಕ ವಿಧಿ ವಿಧಾನಗಳನ್ನು ಕೈಗೊಳ್ಳಬೇಕು.

ನಿತ್ಯವೂ ಪಂಚಾಕ್ಷರಿ ಮಂತ್ರ, ಮಹಾ ಮೃತ್ಯುಂಜಯ ಜಪವನ್ನು 108 ಬಾರಿ ಮಾಡಬೇಕು. ಅವು ಕುಂಡಲಿಯಲಿರುವ ದೋಷಗಳನ್ನು ನಿಯಂತ್ರಿಸುತ್ತವೆ.

ನಿತ್ಯವೂ 108 ಬಾರಿ ರಾಹುವಿನ ಬೀಜ ಮಂತ್ರವನ್ನು ಜಪಿಸಿ. ಕೇತು ವಿನ ಬೀಜ ಮಂತ್ರ ಗಳು 108 ಬಾರಿ ಹೇಳುವುದು… ಕಪ್ಪು ಇದ್ದಿಲು ನೀರಿನಲ್ಲಿ ಬಿಡುವುದು.

ಪ್ರತಿ ಶನಿವಾರ ಅಶ್ವತ್ಥ ಮರಕ್ಕೆ ಪೂಜೆ ಹಾಗೂ ನೀರನ್ನು ಎರೆಯಬೇಕು. ಇದು ಅತ್ಯಂತ ಫಲಪ್ರದವಾದ ಪರಿಣಾಮವನ್ನು ನೀಡುವುದು

ತೆಂಗಿನ ಕಾಯನ್ನು ನೀರಿನಲ್ಲಿ ಬಿಡಬೇಕು.
ಸೋಮವಾರ ರುದ್ರಾಭಿಷೇಕ ಮಾಡಿಸಿ.

ನಿತ್ಯವೂ ಕಾಳಸರ್ಪ ಗಾಯತ್ರಿ ಮಂತ್ರವನ್ನು ಜಪಿಸುವುದು ಅತ್ಯಂತ ಫಲಪ್ರದ ವಿಧಾನ. ಇವುಗಳಿಂದ ನಮಗೆ ಅಂಟಿರುವ ದೋಷವನ್ನು ನಿಯಂತ್ರಿಸಬಹುದು ಎಂದು ಹೇಳಲಾಗುವುದು.

🌹 ರಾಹು ಮತ್ತು ಕೇತು ಕ್ಷೇತ್ರ ಎಂದರೆ ಶ್ರೀ ಕಾಳ ಹಸ್ತಿಯ ದರ್ಶನ ಮತ್ತು ಆ ಸ್ಥಾನದಲ್ಲಿ ರಾಹು ಕೇತು ಶಾಂತಿಯಿಂದ ಶುಭವಾಗುತ್ತದೆ…

ಕುಕ್ಕೆ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಆಶ್ಲೇಷಬಲಿ.ಬ್ರಹ್ಮಚಾರಿಗಳ ಆರಾಧನೆ..ಗೋಪೂಜೆ…ಗುರುಹಿರಿಯರ ಸೇವೆ ಮಾಡುವುದರಿಂದ ಮೇಲ್ಕಂಡ ದೋಷಗಳು ಪರಿಹಾರವಾಗುವುದರಲ್ಲಿ ಸಂದೇಹವಿಲ್ಲಾ..

ಶಿವಂಭೂಯಾತ್..

Please follow and like us:

Leave a Reply

Your email address will not be published. Required fields are marked *

Next Post

ಸಿಡಿ ಲೇಡಿಯಿಂದ ಡಿಕೆಶಿ, ಸಿದ್ದು ಹೆಸರು ಉಲ್ಲೇಖ..! |ಸಿಡಿ‌ ಲೇಡಿಯಿಂದ ಮತ್ತೊಂದು ವೀಡಿಯೋ ರಿಲೀಸ್

Thu Mar 25 , 2021
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದಲ್ಲಿ ಜಾರಕಿಹೊಳಿ ದೂರು ಕೊಟ್ಟ ಬೆನ್ನಲ್ಲೆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಸಿಡಿ ಲೇಡಿ ಇದೀಗ ಮತ್ತೆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಎಸ್ ಐಟಿ ಮೇಲೆನೇ ಗಂಭೀರ ಆರೋಪ ಮಾಡಿದ್ದಾಳೆ. ಮಾರ್ಚ್ 12 ರಂದೇ ತಾನು ಎಸ್ ಐಟಿ ಗೆ ದೂರು ನೀಡಿದ್ದೇ. ಆದರೆ ರಮೇಶ್ ಜಾರಕಿಹೊಳಿ ದೂರು ನೀಡಿದ ಬಳಿಕ ಅರ್ಧ ಗಂಟೆಯಲ್ಲೇ ತಮ್ಮ ದೂರಿನ ವಿಡಿಯೋ ಬಿಡುಗಡೆ ಮಾಡಲಾಗಿದೆ ಎಂದು ಯುವತಿ […]

Advertisement

Wordpress Social Share Plugin powered by Ultimatelysocial