ಪಿಎಂ ಕೇರ್ಸ್ ಗೆ ದೇಣಿಗೆ ನೀಡಿ ಸುಮ್ಮನಾಗುವುದು ಸಾಮಾಜಿಕ ಜವಾಬ್ದಾರಿ ಅಲ್ಲ-ಯದುವೀರ ಕೃಷ್ಣದತ್ತ ಒಡೆಯರ್…

ಅರಮನೆ ಮೈದಾನದಲ್ಲಿ ನಡೆಯುತ್ತಿರುವ 49ನೇ ಕಂಪನಿ ಸೆಕ್ರೆಟರಿಗಳ ರಾಷ್ಟ್ರೀಯ ಸಮಾವೇಶದಲ್ಲಿ ಕಂಪನಿಗಳ ಸಾಮಾಜಿಕ ಜವಾಬ್ದಾರಿ ಮತ್ತು ಸೇವಾ ಆಡಳಿತ ಕುರಿತು ಮಾತನಾಡಿದ ಯದುವೀರ ಕೃಷ್ಣದತ್ತ ಒಡೆಯರ್,ಕಂಪನಿಗಳ ಸಾಮಾಜಿಕ ಜವಾಬ್ದಾರಿ ಅಂದ್ರೆ ಪಿಎಂ ಕೇರ್ಸ್ ನಂತಹ ನಿಧಿಗಳಿಗೆ ತನ್ನ ಪಾಲಿನ ದೇಣಿಗೆ ನೀಡಿ ಸುಮ್ಮನಾಗುವುದಲ್ಲ, ನಿಧಿಯನ್ನು ಅತ್ಯಂತ ರಚನಾತ್ಮಕವಾಗಿ ಅಭಿವೃದ್ಧಿ ಉದ್ದೇಶಗಳಿಗೆ ಬಳಸಿದರೆ ಮಾತ್ರ ಅದು ಸಾರ್ಥಕತೆ ಪಡೆಯುತ್ತದೆ .   ಸರ್ಕಾರದ ನಿಧಿಗಳಿಗೆ ಸಿಎಸ್ ಆರ್ ನಿಧಿಯನ್ನು ಸಮರ್ಪಿಸಿದರೆ ತನ್ನ ಸಾಮಾಜಿಕ ಜವಾಬ್ದಾರಿ ಕುರಿತ ತನ್ನ ಖುರ್ಚು ವೆಚ್ಚಗಳಿಗೆ ವಿನಾಯಿತಿ ದೊರೆಯುತ್ತದೆ. ಪಿಎಂ ಕೇರ್ಸ್ ನಿಂದಲೂ ಸಹ ಅತ್ಯುತ್ತಮ ಕೆಲಸಗಳಾಗುತ್ತಿವೆ. ಆದರೆ, ಕಂಪನಿಗಳು ಗಳಿಸುವ ತನ್ನ ಆದಾಯವನ್ನು ತಾವಿರುವ ಪರಿಸರದಲ್ಲಿ ಸದ್ಬಳಕೆ ಮಾಡಿಕೊಳ್ಳುವುದು ಸೂಕ್ತ ವಿಧಾನವಾಗುತ್ತದೆ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೇಕೆದಾಟು ಪಾದಯಾತ್ರೆ ವಿಚಾರ ಡಿಕೆಶಿ ಮನೆಯಲ್ಲಿ ಕಾಂಗ್ರೆಸ್ ಶಾಸಕರ ಸಭೆ...

Sat Jan 8 , 2022
ಕೊರೋನಾ ಹೆಚ್ಚಳಗೊಳ್ಳುತ್ತಿದ್ದರೂ ಕಾಂಗ್ರೆಸ್ ತನ್ನ ಮೇಕೆದಾಟು ಪಾದಯಾತ್ರೆಯನ್ನು ಮುಂದುವರಿಸಲು ನಿರ್ಧರಿಸಿದೆ. ಪಾದಯಾತ್ರೆಗೆ ವೇದಿಕೆ ಸಿದ್ಧಪಡಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕನಕಪುರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಈಗಾಗಲೇ ಸರ್ಕಾರ ವೀಕೆಂಡ್ ಕರ್ಫ್ಯೂ ವಿಧಿಸಿದ್ದು, ಭಾನುವಾರದಿಂದಲೇ ಪಾದಯಾತ್ರೆ ಕೂಡ ಆರಂಭವಾಗಲಿದೆ. ಸರ್ಕಾರದ ನಿರ್ಬಂಧಗಳ ಹೊರತಾಗಿಯೂ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್, ಈ ನಿರ್ಬಂಧಗಳನ್ನು ಯಾವ ರೀತಿ ಎದುರಿಸುವುದು ಎಂಬುದರ ಕುರಿತು […]

Advertisement

Wordpress Social Share Plugin powered by Ultimatelysocial