ಬೆಳಗಾವಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ.

ಬೆಳಗಾವಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ.

ಮೂರು ತಿಂಗಳಲ್ಲಿ ಚುನಾವಣೆ ಎದುರಿಸಲಿದ್ದೇವೆ.

ಅಮಿತ್ ಶಾ ನಮಗೆ ಮಾರ್ಗದರ್ಶನ ಮಾಡಿದ್ದಾರೆ.

ಬರುವ ಚುನಾವಣೆಯಲ್ಲಿ ನಾವು ನೂರಕ್ಕೆ ನೂರರಷ್ಟು 140 ಸ್ಥಾನ ಪಡೆಯುತ್ತೇವೆ.

ಯಾರೋ ನಾನೇ ಮುಂದಿನ ಮುಖ್ಯಮಂತ್ರಿ ಎಂದು ತಿರುಕನ ಕನಸು ಕಾಣುತ್ತಿದ್ದಾರೆ, ಅದು ನನಸಾಗಲ್ಲ.

ಸೂರ್ಯಚಂದ್ರ ಇರುವುದು ಎಷ್ಟು ಸತ್ಯವೋ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ.

ಬಿಜೆಪಿ ಟಿಕೆಟ್‌ಗಾಗಿ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಪೈಪೋಟಿ ವಿಚಾರ.

ಗೆಲ್ಲುವ ಪಕ್ಷದ, ಅಧಿಕಾರ ರಚಿಸುವ ಪಕ್ಷಕ್ಕೆ ಆಕಾಂಕ್ಷೆಗಳ ಸಂಖ್ಯೆಯೂ ಬಹಳಷ್ಟು ಇರುತ್ತದೆ.

ನಾವೆಲ್ಲರೂ ಕುಳಿತು ಚರ್ಚೆ ಮಾಡಿ ನಂತರವೇ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ.

ಒಂದಲ್ಲ, ಎರಡು ಸರ್ವೆ ಮಾಡಿಸಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುತ್ತೇವೆ.

ಇದರಲ್ಲಿ ನಾವು ಯಾವುದೇ ಕಾಂಪ್ರಮೈಸ್ ಮಾಡಲ್ಲ.

ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕ್ತಿವಿ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ವೈ ಸ್ಪರ್ಧೆ ಮಾಡ್ತಾರಾ ಎಂಬ ಪ್ರಶ್ನೆ.

ಈಗಾಗಲೇ ನಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ.

ಬರುವ ಚುನಾವಣೆಯಲ್ಲಿ ಸ್ಪರ್ಧಿಸಲ್ಲ.

ಈಗಾಗಲೇ ನನಗೆ 80 ವರ್ಷ ಆಗ್ತಿದೆ, ಪಕ್ಷ ಕಟ್ಟಲು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ.

ಈಗಾಗಲೇ ರಾಘವೇಂದ್ರ ಎಂಪಿ ಇದ್ದಾರೆ.

ವಿಜಯೇಂದ್ರ ಕೂಡ ರಾಜ್ಯದ ಪ್ರವಾಸ ಮಾಡ್ತಿದ್ದಾರೆ.

ವಿಜಯೇಂದ್ರ ಯುವಕರಿದ್ದು ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಾರೆ.

ವಿಜಯೇಂದ್ರ ಜೊತೆಗೆ ನಾನೂ ಓಡಾಡುತ್ತಿದ್ದೇನೆ.

ನಾನೇನು ಇನ್ನೂ ರಿಟೈರ್ ಆಗಿಲ್ಲ.

ಈ ಚುನಾವಣೆಯಲ್ಲಿ ಓಡಾಡುತ್ತೇನೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಪ್ರಯತ್ನಿಸುವೆ.

ನಾನೇನು ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ.

ವಾಜಪೇಯಿ ಪಿಎಂ ಆಗಿದ್ದಾಗ ನನ್ನನ್ನು ಆಹ್ವಾನಿಸಿದ್ದರು.

ಪಕ್ಷ ಈಗ ರಾಜ್ಯದಲ್ಲಿ ನನಗೆ ಎಲ್ಲ ಸ್ಥಾನಮಾನ, ಅಧಿಕಾರ, ಗೌರವ ನೀಡಿದೆ.

ಅದರ ಋಣ ತೀರಿಸುವ ಜವಾದ್ಬಾರಿ ನನ್ನದು, ರಾಜ್ಯಾದ್ಯಂತ ಸಂಚರಿಸುತ್ತೇನೆ.

ತಾವು ಸ್ಪರ್ಧಿಸಿದ್ರೆ ಪ್ರಭಾವ ಹೆಚ್ಚಿರುತ್ತೇ ಎಂಬ ಪ್ರಶ್ನೆಗೆ.

ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದು ಎಂದು ನಾನು ಈಗಾಗಲೇ ತೀರ್ಮಾನ ಮಾಡಿದ್ದೇನೆ.

ಬೆಳಗಾವಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕಾರ್ಯಕ್ರಮದ ವೇದಿಕೆಯಲ್ಲಿಯೇ ಹೊನ್ನಾಳಿ ಶಾಸಕ ರೇಣುಕಾಚಾರ್ಯಗೆ ಯುವಕರ ತರಾಟೆ.

Sun Jan 29 , 2023
ಭಾಷಣ ನಿಲ್ಲಿಸಿ ರೇಣುಕಾಚಾರ್ಯರನ್ನ ವೇದಿಕೆಯಿಂದ ಕೆಳಗಿಳಿಸಿದ ಜನರು. ಬೊಟ್ಟು ತೋರಿಸಿ ಮಾತನಾಡಬೇಡಿ ಅಂತ ಆವಾಜ್. ಇದು ಶಾಲಾ ಕಾರ್ಯಕ್ರಮ ರಾಜಕೀಯ ಬೇಡ ಅಂತ ಎಚ್ಚರಿಕೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಚೀಲೂರ ಗ್ರಾಮದಲ್ಲಿ ಘಟನೆ. ಚೀಲೂರ ಸರ್ಕಾರಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಕಿ ಘಟನೆ. ಶಾಲಾ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡುತ್ತಿದ್ಧ ರೇಣುಕಾಚಾರ್ಯ ಕಾಂಗ್ರೆಸ್ ಮಾಜಿ ಶಾಸಕ ಶಾಂತನಗೌಡರನ್ನ ಟೀಕೆ ಮಾಡಿದ್ದಕ್ಕೆ ಯುವಕರಿಂದ ತರಾಟೆ. ಈ ವೇಳೆ ಶಾಲಾ ಮಕ್ಕಳು ಎದಿರು ರಾಜಕೀಯ […]

Advertisement

Wordpress Social Share Plugin powered by Ultimatelysocial