ವಿರೋಧ ಪಕ್ಷದ ನಾಯಕರಿಗೂ ಹೃದಯ ಚುರುಕ್ ಅಂದಿತ್ತು.

 

 

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜೀನಾಮೆ ನೀಡಿದ ನಂತರವೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಅರ್ಧಕರ್ಧ ಬಿಜೆಪಿ ಮುಖಂಡರು ಅವರ ನೆರಳಿನಲ್ಲೇ ಇದ್ದಾರೆ. ಬಿಎಸ್‌ವೈ ಮಾತಿಗೆ ಹೈಕಮಾಂಡ್ ಮಟ್ಟದಲ್ಲಿ ಬೆಲೆಯಿದೆಯೋ ಇಲ್ಲವೋ ಒಟ್ಟಿನಲ್ಲಿ ರಾಜ್ಯ ಬಿಜೆಪಿಗಂತೂ ಅವರು ಪ್ರಶ್ನಾತೀತ ನಾಯಕ.ಮುಖ್ಯಮಂತ್ರಿ ಹುದ್ದೆಗೆ ಕಣ್ಣೀರಿಟ್ಟು ರಾಜೀನಾಮೆ ನೀಡಿದಾಗ, ವಿರೋಧ ಪಕ್ಷದ ನಾಯಕರಿಗೂ ಹೃದಯ ಚುರುಕ್ ಅಂದಿತ್ತು. ಕಾಂಗ್ರೆಸ್ಸಿನವರು ವಾಜಪೇಯಿ, ಆಡ್ವಾಣಿ, ಜೋಶಿಯವರನ್ನು ಮೋದಿ ಮತ್ತು ಅಮಿತ್ ಶಾ ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಸಾರುತ್ತಿದ್ದರು. ಆ ಸಾಲಿಗೆ, ಯಡಿಯೂರಪ್ಪನವರನ್ನೂ ಸೇರಿಸಿದ್ದರು.ಇಟ್ಟ ಗುರಿಯನ್ನು ಮುಟ್ಟದೇ ಯಡಿಯೂರಪ್ಪನವರಿಗೆ ಸಮಾಧಾನವಿಲ್ಲ ಎನ್ನುವುದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಇದಕ್ಕೆ ಹೌದು ಎನ್ನುವಂತೆ, ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ರಾಜ್ಯ ಪರ್ಯಟನೆಯ ಮಾತನ್ನು ಬಿಎಸ್‌ವೈ ಆಡಿದ್ದರು.ಆದರೆ, ರಾಷ್ಟ್ರೀಯ ಪಕ್ಷಗಳ ನಾಯಕರಿಗೆ ಇರುವ ದೊಡ್ಡ ರೋಗವಾದ ವರಿಷ್ಠರ ಅನುಮತಿ ಸಿಗದೆ ಇದ್ದಿದ್ದರಿಂದ, ಯಡಿಯೂರಪ್ಪನವರು ಮನೆಯಲ್ಲೆ ಕಾಲ ಕಳೆದಿದ್ದರು. ಈಗ, ಮತ್ತೆ ಬಿಎಸ್‌ವೈ ರಾಜ್ಯ ಸುತ್ತುವ ಮಾತನ್ನು ಬಹಿರಂಗ ಸಭೆಯಲ್ಲೇ ಆಡಿದ್ದಾರೆ.ಯಡಿಯೂರಪ್ಪ ರಾಜ್ಯ ಪ್ರವಾಸದ ಬಗ್ಗೆ ಮಾತನಾಡಿದ್ದಾರೆತಮ್ಮ ರಾಜಕೀಯ ಕರ್ಮಭೂಮಿ ಶಿವಮೊಗ್ಗದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ರಾಜ್ಯ ಪ್ರವಾಸದ ಬಗ್ಗೆ ಮಾತನಾಡಿದ್ದಾರೆ. ಯಡಿಯೂರಪ್ಪನವರು ಈ ಹಿಂದೆ ಎರಡು ಬಾರಿ ರಾಜ್ಯ ಪ್ರವಾಸಕ್ಕೆ ಹೊರಟಾಗಲೂ ಹೈಕಮಾಂಡ್ ಬ್ರೇಕ್ ಹಾಕಿತ್ತು. ಮೊದಲನೇ ಬಾರಿ ನೇರವಾಗಿ ವರಿಷ್ಠರು ತಡೆಯೊಡ್ಡಿದರೆ, ಎರಡನೇ ಬಾರಿ, ರಾಜ್ಯ ಪ್ರವಾಸಕ್ಕೆ ಅನುಮತಿ ನೀಡಿ, ಯಡಿಯೂರಪ್ಪ ಸೇರಿ ಬೇರೆ ಮುಖಂಡರಿಗೆ ವಲಯಾಧಾರಿತವಾಗಿ ಯಾತ್ರೆ (ಜನ ಸ್ವರಾಜ್ ಯಾತ್ರೆ) ನೀಡಲು ಅನುಮತಿ ನೀಡಿತ್ತು. ಆದರೆ, ಬಿಎಸ್‌ವೈಗೆ ಶಿವಮೊಗ್ಗದ ಪ್ರವಾಸದ ಜವಾಬ್ದಾರಿಯನ್ನು ನೀಡಿರಲಿಲ್ಲ.ಬಿಎಸ್‌ವೈ ಬಯಸಿದ್ದ ಯಾತ್ರೆ ಆಗಿರಲಿಲ್ಲಯಡಿಯೂರಪ್ಪನವರು ಬಯಸದೇ ಇದ್ದರೂ, ಪಕ್ಷ ಮತ್ತು ಮಾತೃ ಸಂಘಟನೆ ಆರ್ ಎಸ್ ಎಸ್ ಮುಖಂಡರ ಫರ್ಮಾನಿನಂತೆ ಬಿಎಸ್‌ವೈ, ಉತ್ತರ ಕನ್ನಡ, ಹಾವೇರಿ, ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಮತ್ತು ಬೆಳಗಾವಿಯಲ್ಲಿ ಸಾಗಿದ ಯಾತ್ರೆಯಲ್ಲಿ ಸಂಚರಿಸಿದ್ದರು. ಶೆಟ್ಟರ್ ಅವರ ತಂಡ ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಸಂಚರಿಸಿ ಪಕ್ಷಕ್ಕೆ ಬಲ ನೀಡಿದ್ದರು. ಕಳೆದ ವರ್ಷದ ನವೆಂಬರ್ 19ರಿಂದ 21ರವರೆಗೆ ಈ ಯಾತ್ರೆ ರಾಜ್ಯ ಸುತ್ತಿತ್ತು. ಆದರೆ, ಬಿಎಸ್‌ವೈ ಬಯಸಿದ್ದ ಯಾತ್ರೆ ಇದಾಗಿರಲಿಲ್ಲ.ಹಾಲೀ ಬಜೆಟ್ ಅಧಿವೇಶನದ ನಂತರ ರಾಜ್ಯ ಪ್ರವಾಸಈಗ ಮತ್ತೆ ಶಿವಮೊಗ್ಗದಲ್ಲಿ ಯಡಿಯೂರಪ್ಪನವರು ರಾಜ್ಯ ಪ್ರವಾಸದ ಬಗ್ಗೆ ಘಂಟಾಘೋಷವಾಗಿ ಹೇಳಿಕೆಯನ್ನು ನೀಡಿದ್ದಾರೆ. “ಹಾಲೀ ಬಜೆಟ್ ಅಧಿವೇಶನದ ನಂತರ ರಾಜ್ಯ ಪ್ರವಾಸ ಮಾಡಲು ನಿರ್ಧರಿಸಿದ್ದೇನೆ. ಬೊಮ್ಮಾಯಿಯವರ ಜನಪರ ಬಜೆಟ್ ಅನ್ನು ಮುಂದಿಟ್ಟುಕೊಂಡೇ ಮತದಾರ ದೇವರ ಮುಂದೆ ಹೋಗುತ್ತೇನೆ. ಸಂಘಟಿತವಾಗಿ ಚುನಾವಣೆಯನ್ನು ಎದುರಿಸುತ್ತೇವೆ, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಏಕಮೇವ ಉದ್ದೇಶ”ಎಂದು ಶಿವಮೊಗ್ಗದ ರೈತಾಭಿಮಾನ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಹೇಳಿದ್ದಾರೆ.ಪಂಚ ರಾಜ್ಯಗಳ ಚುನಾವಣೆ ಮಾರ್ಚ್ ಏಳಕ್ಕೆ ಮುಕ್ತಾಯಗೊಳ್ಳಲಿದೆಪಂಚ ರಾಜ್ಯಗಳ ಚುನಾವಣೆ ಮಾರ್ಚ್ ಏಳಕ್ಕೆ ಮುಕ್ತಾಯಗೊಳ್ಳಲಿದೆ. ಬಿಜೆಪಿ ಪಾಲಿಗೆ ಅತೀ ಪ್ರಮುಖವಾಗಿರುವ ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಾರದು ಎನ್ನುವ ಕಾರಣಕ್ಕಾಗಿ, ಸಂಪುಟ ವಿಸ್ತರಣೆಯನ್ನೂ ರಾಜ್ಯದಲ್ಲಿ ಮುಂದೂಡಲಾಗಿತ್ತು. ಹಾಗಾಗಿ, ಈ ಚುನಾವಣಾ ಪ್ರಕ್ರಿಯೆ ಮುಕ್ತಾಯದ ಎರಡು ದಿನದ ಹಿಂದೆ ಬಿಎಸ್‌ವೈನೀಡಿರುವ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ. ಯಾಕೆಂದರೆ, ಇನ್ನೊಂದು ವರ್ಷದಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯುವುದರಿಂದ ಯಡಿಯೂರಪ್ಪನವರ ಸಹಕಾರ ಬಿಜೆಪಿಗೆ ಬೇಕೇ ಬೇಕು. ಹಾಗಾಗಿ, ವರಿಷ್ಠರು ಈ ಬಾರಿ ಬಿಎಸ್‌ವೈ ಯಾತ್ರೆಗೆ ಅನುಮತಿ ನೀಡಿದರೂ ನೀಡಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಂಚ ರಾಜ್ಯಗಳ ಚುನಾವಣಾ ಪ್ರಕ್ರಿಯೆ ಮಾರ್ಚ್ ಏಳರಂದು ಮುಕ್ತಾಯಗೊಳ್ಳಲಿದೆ,

Mon Mar 7 , 2022
  ಪಂಚ ರಾಜ್ಯಗಳ ಚುನಾವಣಾ ಪ್ರಕ್ರಿಯೆ ಮಾರ್ಚ್ ಏಳರಂದು ಮುಕ್ತಾಯಗೊಳ್ಳಲಿದೆ, ಮಾರ್ಚ್ ಹತ್ತರಂದು ಫಲಿತಾಂಶ ಪ್ರಕಟವಾಗಲಿದೆ. ಮಾರ್ಚ್ ಏಳರ ಸಂಜೆಯಿಂದ ಫಲಿತಾಂಶದ ವರೆಗೆ ಮತಗಟ್ಟೆ (ಎಕ್ಸಿಟ್ ಪೋಲ್) ಸಮೀಕ್ಷೆಗಳ ಅಬ್ಬರ.ಉತ್ತರ ಪ್ರದೇಶ ಎನ್ನುವುದು ಎಲ್ಲಾ ರಾಜಕೀಯ ಪಕ್ಷಗಳಿಗೆ ಪ್ರಮುಖವಾದದಂತದ್ದು.ಈ ಬಾರಿಯ ಚುನಾವಣೆಯಲ್ಲಿ ನಾನೋ, ನೀನೋ ಎನ್ನುವ ಹಾಗೇ ಎರಡು ಪಕ್ಷಗಳಾದ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಬಹುತೇಕ ನೇರ ಪೈಪೋಟಿ.ಕೇಂದ್ರದಲ್ಲಿ ಸರಕಾರ ರಚಿಸಲು ಭಾಷ್ಯ ಬರೆಯುವ ಉತ್ತರ ಪ್ರದೇಶದಲ್ಲಿ […]

Advertisement

Wordpress Social Share Plugin powered by Ultimatelysocial