ಯಥರ್ವ್ ಗೆ ಮೊದಲ ಹುಟ್ಟುಹಬ್ಬದ ಸಂಭ್ರಮ

ಯಥರ್ವ್ ಯಶ್ ಮೊದಲ ಬರ್ತ್ ಡೇ

ಸ್ಯಾಂಡಲ್ ವುಡ್ ನ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕ ಪಂಡಿತ್.. ಈ ಜೋಡಿ ತಮ್ಮ ನಿಶ್ಚಿತಾರ್ಥದಿಂದ ಹಿಡಿದು ಈ ಘಳಿಗೆಯವರೆಗೂ ತಮ್ಮ ಕುಟುಂಬದ ಎಲ್ಲಾ ಸ್ಪೆಷಲ್ ಮೂವ್ ಮೆಂಟ್ಸ್ ನ್ನೂ ವಿಶೇಷವಾಗಿ, ಬಹಳ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡುತ್ತಲೇ ಬರ್ತಿದ್ದಾರೆ.. ಅದನ್ನ ಸೋಷಿಯಲ್ ಮೀಡಿಯಾಗಳಲ್ಲಿಯೂ ಶೇರ್ ಮಾಡುವ ಮೂಲಕ ತಮ್ಮ ಸಂತಸವನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ತಿರ್ತಾರೆ.. ಅಂದಹಾಗೆ ಇದೀಗ ರಾಕಿಂಗ್ ಪೇರ್ ತಮ್ಮ ಮುದ್ದಿನ ಮಗ ಯಥರ್ವ್ ಮೊದಲ ವರ್ಷದ ಹುಟ್ಟು ಹಬ್ಬದ ಖುಷಿಯಲ್ಲಿದ್ದಾರೆ..

ಸದ್ಯ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ಸ್ಯಾಂಡಲ್ ವುಡ್ ನ ಮುದ್ದಾದ ಜೋಡಿ ಅಂದ್ರೆ ಅದು ರಾಧಿಕಾ ಪಂಡಿತ್ ಹಾಗೂ ಯಶ್ ಅವರದ್ದು.. ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಯಾವುದಾದ್ರೂ ಪೆÇೀಸ್ಟ್ ಮಾಡಿದ್ರೆ ಸಾಕು ಲಕ್ಷ ಲಕ್ಷ ಜನರು ಮೆಚ್ಚುಗೆ ಸೂಚಿಸಿ, ಖುಷಿಯಿಂದ ಕಮೆಂಟ್ಸ್ ಮಾಡ್ತಿರ್ತಾರೆ.. ಅದ್ರಲ್ಲೂ ಈಗ ಈ ರಾಕಿಂಗ್ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.. ತಮ್ಮ ಮುದ್ದು ಮಕ್ಕಳ ಬಗ್ಗೆ ಈ ಜೋಡಿ ಆಗಾಗ ಒಂದಿಲ್ಲೊಂದು ಫೋಟೋ ಅಥವಾ ವೀಡಿಯೋಗಳನ್ನ ಫೋಟೋ ಮಾಡ್ತನೇ ಇರ್ತಾರೆ.. ಅವರು ಮಾಡುವ ಪೋಸ್ಟ್ ಗಾಗಿ ಇತ್ತ ಅಭಿಮಾನಿಗಳೂ ಕೂಡ ಅಷ್ಟೇ ಕುತೂಹಲದಿಂದ ಕಾಯ್ತಿರ್ತಾರೆ.. ಅಂದಹಾಗೆ ಸದ್ಯ ಯಶ್ ಹಾಗೂ ರಾಧಿಕಾ ದಂಪತಿಗಳ ಎರಡನೇ ಮಗು ಯಥರ್ವ್ ಹುಟ್ಟಿ ಆಗ್ಲೇ ಒಂದು ವರ್ಷವಾಗಿದೆ.. ತಮ್ಮ ಮುದ್ದು ಮಗನ ಫಸ್ಟ್ ಬರ್ತ್ ಡೇಗಾಗಿ ಇಬ್ಬರೂ ಸಹ ಯಥರ್ವ್ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ವಿಶ್ ಮಾಡಿದ್ದಾರೆ..

ರಾಕಿಂಗ್ ಜೋಡಿಯ  ಸುಪುತ್ರ ಯಥರ್ವ್ ಗೆ ಸದ್ಯ ಮೊದಲ ಹುಟ್ಟುಹಬ್ಬದ ಸಂಭ್ರಮ.. ಮಗನ ಹುಟ್ಟುಹಬ್ಬದ ವಿಶೇಷತೆಯಲ್ಲಿ ನಟಿ ರಾಧಿಕಾ ಪಂಡಿತ್ ತಾವು ಪ್ರೆಗ್ನೆಂಟ್ ಆದಾಗಿನಿಂದ ಯಥರ್ವ್ ಗೆ ಒಂದು ವರ್ಷ ತುಂಬುವವರೆಗಿನ ಎಲ್ಲಾ ಫೋಟೋಗಳನ್ನೂ ಸೇರಿಸಿ ಕೊಲ್ಯಾಜ್ ಮಾಡಿ, ಅದನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.. ಅದ್ರಲ್ಲೂ ಯಥರರ್ವ್ ಜನಿಸಿದಾಗ ಯಶ್ ರಾಧಿಕಾಗೆ ಮದುವನ್ನ ತೋರಿಸುತ್ತಿರುವ ಫೋಟೋಗಳನ್ನೂ ಎಲ್ಲರ ಗಮನ ಸೆಳೆಯುತ್ತಿದೆ.. ಫೋಟೋ  ಹುಟ್ಟುಹಬ್ಬದ ಶುಭಾಷಯಗಳು ನನ್ನ ಪ್ರೀತಿಯ ಮಗನೆ, ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇನೆ ಎಂದು ಪ್ರೀತಿಯಿಂದ ವಿಶ್ ಮಾಡಿದ್ದಾರೆ.. ಜೊತೆಗೆ ಯಶ್ ಕೂಡ ತಮ್ಮ ಮಗನ ಒಂದು ಕ್ಯೂಟ್ ಫೋಟೋ ಶೇರ್ ಮಾಡಿ, ಅದ್ರ ಜೊತೆಗೆ ಹುಟ್ಟುಹಬ್ಬದ ಶುಭಾಷಯಗಳು ನನ್ನ ಮುದ್ದು ಮರಿ ಅಂತ ಶುಭಾಷಯ ತಿಳಿಸಿದ್ದಾರೆ.. ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಈ ಪೋಸ್ಟ್ ಗಳಿಗೆ ಸಾಕಷ್ಟು ಜನ ಅಭಿಮಾನಿಗಳು ಲೈಕ್ ಮಾಡಿ, ಬರ್ತ್ ಡೇ ವಿಶಸ್ ಹೇಳಿದ್ದಾರೆ..

ಕೋವಿಡ್ ಕಾರಣದಿಂದಾಗಿ ಗ್ರ್ಯಾಂಡ್ ಸೆಲೆಬ್ರೇಶನ್ ಗೆ ಬ್ರೇಕ್ ಬಿದ್ದಿದೆ.. ಕಳೆದ ಬಾರಿ ತಮ್ಮ ಮಗಳು ಐರಾ ಮೊದಲ ಹುಟ್ಟುಹಬ್ಬವನ್ನ ಯಶ್ ಹಾಗೂ ರಾಧಿಕಾ ಬಹಳ ಅದ್ಧೂರಿಯಾಘಿ ಆಚರಿಸಿದ್ರು.. ಇಬ್ಬರ ಕುಟುಂಬದ ಸದಸ್ಯರ ಜೊತೆಗೆ ಸ್ಯಾಂಡಲ್ ವುಡ್ ಬಹುತೇಕ ಎಲ್ಲಾ ಸ್ಟಾರ್ ಸೆಲೆಬ್ರೆಟಿಗಳು ಐರಾ ಬರ್ತ್ ಡೇಗೆ ಬಂದು ಶೂಭ ಕೋರಿದ್ರು.. ಅದೇ ರೀತಿ ಈಗ ತಮ್ಮ ಮಗನ ಹುಟ್ಟುಹಬ್ಬವನ್ನೂ ಅಷ್ಏ ಭರ್ಜರಿಯಾಗಿ ಆಚರಿಸಬೇಕು ಅನ್ನೋದು ರಾಕಿಂಗ್ ಜೋಡಿಯ ಆಸೆಯಾಗಿತ್ತು.. ಆದ್ರೆ ಕೊರೋನಾ ಹರಡುವಿಕೆ ಇನ್ನೂ ಕಡಿಮೆಯಾಗಿಲ್ಲ.. ಹೀಗಾಗಿ ಅದ್ಧೂರಿ ಹುಟ್ಟುಹಬ್ಬದ ಆಚರಣೆಯನ್ನ ಕೈಬಿಟ್ಟಿರುವ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಕುಟುಂಬದವರೊಂದಿಗೆ ಮಾತ್ರ ಸಿಂಪಲ್ ಆಗಿ ಯಥರ್ವ್ ಬರ್ತ್ ಡೇ ಆಚರಿಸಲು ನಿರ್ಧರಿಸಿದ್ದಾರೆ..

Please follow and like us:

Leave a Reply

Your email address will not be published. Required fields are marked *

Next Post

ಪೊಲೀಸ್ ಠಾಣೆ ಎದುರು ನೌಕರರು ಧರಣಿ

Sun Nov 1 , 2020
ಬೀದರ್ ಸಂಸದ ಭಗವಂತ ಖೂಬಾ ಸಹೋದರ ಅಶೋಕ ಖೂಬಾ ವಿರುದ್ಧ ಬ್ರಿಮ್ಸ್ ಡಿ ಗ್ರುಪ್ ನೌಕರರು ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ… ನೌಕರರಿಗೆ ನೀಡಬೇಕಾದ ಸುಮಾರು 16 ಸಾವಿರ ರೂ. ಸಂಬಳ ಬದಲಾಗಿ ಕೇವಲ 5 ಸಾವಿರ ರೂ.ನೀಡಿ ವಂಚನೆ ಮಾಡುತ್ತಿದ್ದಾರೆ ಹಾಗೂ ಮಹಿಳಾ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ನೌಕರಿಯಿಂದ ತೆಗೆದಿದ್ದಾರೆ ಎಂದು ಆರೋಪಿಸಿ ಬೀದರ ನಗರದ ನ್ಯೂ ಟೌನ್ ಪೊಲೀಸ್ ಠಾಣೆ ಎದುರು ನೌಕರರು ಧರಣಿ ಮಾಡಿದ್ದಾರೆ… […]

Advertisement

Wordpress Social Share Plugin powered by Ultimatelysocial