ಲೋಕಸಭೆ ಚುನಾವಣೆಯನ್ನು ಮೋದಿ ಹೆಸರಿನಲ್ಲಿ ಗೆಲ್ಲುವುದು ಸುಲಭ.

 

. ಆದರೆ ರಾಜ್ಯದ ಚುನಾವಣೆ ಅಷ್ಟು ಸುಲಭವಲ್ಲ” ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿದ್ದ ಹೇಳಿಕೆ ಈ ಹಿಂದೆ ಭಾರಿ ಚರ್ಚೆಗೆ ಕಾರಣವಾಗಿತ್ತು.

ಬಿಜೆಪಿ ಕಾರ್ಯಕಾರಿಣಿಯಲ್ಲೂ ಅವರು ಇದೇ ಬಗೆಯ ಮಾತಾಡಿರುವುದು ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಬಿಜೆಪಿಯ ಆಂತರಿಕ ಮೂಲಗಳ ಪ್ರಕಾರ ಹೊಸಪೇಟೆಯಲ್ಲಿ ಎರಡು ದಿನಗಳ‌ ಕಾಲ ನಡೆದ ಕಾರ್ಯಕಾರಿಣಿಯ ಹೈಲೆಟ್ಸ್ ಎಂದರೆ ಅದು ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಹೈವೋಲ್ಟೇಜ್ ಭಾಷಣ. ಇಬ್ಬರೂ ಕೂಡಾ ಪಕ್ಷ ಸಂಘಟನೆ ದೃಷ್ಟಿಯಿಂದಲೇ ಹಲವು ವಿಚಾರಗಳನ್ನು ಮುಂದಿಟ್ಟಿದ್ದಾರೆ‌. ಆದರೆ ಯಡಿಯೂರಪ್ಪ ಉಲ್ಲೇಖಿಸಿರುವ “ಭ್ರಮೆಯ ಪೊರೆ ಕಳಚಿ” ಎಂಬ ಪದ ಪ್ರಯೋಗ ಮಾಡಿದ್ದೇಕೆ? ಎಂಬುದು ಹಲವರಲ್ಲಿ ಚರ್ಚೆ ಹುಟ್ಟು ಹಾಕಿದೆ.

ಯಡಿಯೂರಪ್ಪ ವರಿಷ್ಠರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಮಾತು ಹೇಳಿದರೆ? ರಾಜ್ಯದಲ್ಲಿರುವ ತಮ್ಮ ವಿರೋಧಿಗಳಿಗೆ ಬಿಸಿ ತಟ್ಟಿಸಲು ಹೇಳಿದರೆ? ಅಥವಾ ಮುಂದಿನ ಚುನಾವಣೆಯಲ್ಲಿ ನನ್ನ ಅನಿವಾರ್ಯತೆ‌ ಇದೆ ಎಂಬುದನ್ನು ಮರೆಯಬೇಡಿ ಎಂದು ಸೂಚ್ಯವಾಗಿ ಹೇಳಿದರೆ? ಎಂಬ ಪ್ರಶ್ನೆ ಉದ್ಭವವಾಗಿದೆ.

ಚುನಾವಣೆಯನ್ನು ಗೆದ್ದೇ ಬಿಟ್ಟೆವು ಎಂಬ ಭ್ರಮೆಯಿಂದ ಮೊದಲು ಈಚೆ ಬನ್ನಿ. ಭ್ರಮೆಯ ಪೊರೆ ಕಳಚಿ. ತಳಹಂದಲ್ಲಿ ಬೇರೆಯದೇ ಆದ ವಾತಾವರಣ ಇದೆ ಎಂಬುದನ್ನು ಮರೆಯಬೇಡಿ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಂಘಟನೆಗೆ ಒತ್ತು ಕೊಡಿ ಎಂದು ಅವರು ಪ್ರತಿಪಾದಿಸಿದ್ದು ಸರಕಾರದ ಯೋಜನೆಗಳು ಈ ವರ್ಗವನ್ನು ಇನ್ನಷ್ಟು ತಲುಪಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈಶ್ವರಪ್ಪ ರಾಜೀನಾಮೆಯಿಂದ ಬಿಜೆಪಿ ಸದ್ಯಕ್ಕೆ ಉಸ್ಸಪ್ಪಾ ಎನ್ನುವಂತಿಲ್ಲ.

Mon Apr 18 , 2022
ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ರಾಜೀನಾಮೆಯಿಂದ ಬಿಜೆಪಿ ಸದ್ಯಕ್ಕೆ ಉಸ್ಸಪ್ಪಾ ಎನ್ನುವಂತಿಲ್ಲ. ಕಮಿಷನ್ ಆರೋಪದಡಿಯಲಿ ಮತ್ತಿಬ್ಬರು ಸಚಿವರು ರಾಜೀನಾಮೆ ನೀಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆಯೇ? ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ನಲವತ್ತು ಪರ್ಸೆಂಟ್ ಕಮಿಷನ್ ಪಡೆಯಲಾಗುತ್ತಿದೆ ಎನ್ನುವ ಆರೋಪ ನೇರವಾಗಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೂ ಹೋಗಿತ್ತು. ಪ್ರಧಾನಿಗಳ ಭೇಟಿಗೆ ಅವಕಾಶ ಸಿಕ್ಕರೆ ದೆಹಲಿಯಲ್ಲಿ ಅವರನ್ನು ಭೇಟಿಯಾಗುವ ಯೋಜನೆಯನ್ನೂ ಹಾಕಿಕೊಳ್ಳಲಾಗಿತ್ತು. ಆದರೆ, ಪ್ರಧಾನಿ ಕಾರ್ಯಾಲಯದಿಂದ ಅಪಾಯಿಂಟ್ಮೆಂಟ್ ಸಿಗದ ಕಾರಣ, ಗುತ್ತಿಗೆದಾರರ ಸಂಘ ಮುಂದಕ್ಕೆ ಹೆಜ್ಜೆಯನ್ನು […]

Advertisement

Wordpress Social Share Plugin powered by Ultimatelysocial