ಯಶವಂತಪುರ-ಶಿವಮೊಗ್ಗ ರೈಲಿಗೆ ವಿಸ್ಟಾಡಾಮ್ ಬೋಗಿ ಜೋಡಣೆ

ಯಶವಂತಪುರ-ಶಿವಮೊಗ್ಗ ರೈಲಿಗೆ ವಿಸ್ಟಾಡಾಮ್ ಬೋಗಿ ಜೋಡಣೆ

ಶಿವಮೊಗ್ಗ, ಡಿಸೆಂಬರ್ 24; ನೈಋತ್ಯ ರೈಲ್ವೆ ಮೊದಲ ಬಾರಿಗೆ ಬೆಂಗಳೂರು-ಶಿವಮೊಗ್ಗ ನಡುವಿನ ರೈಲಿಗೆ ಪ್ರಾಯೋಗಿಕವಾಗಿ ವಿಸ್ಟಾಡಾಮ್ ಕೋಚ್ ಅಳವಡಿಕೆ ಮಾಡಲಿದೆ. ಗಾಜಿನ ಛಾವಣಿಯನ್ನು ಹೊಂದಿರುವ ವಿಸ್ಟಾಡಾಮ್ ಕೋಚ್ ಮೂಲಕ ಪ್ರಯಾಣಿಕರು ನಿಸರ್ಗದ ಸೌಂದರ್ಯ ಸವಿಯಬಹುದು.

ಈ ಕುರಿತು ನೈಋತ್ಯ ರೈಲ್ವೆಯು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲು ಸಂಖ್ಯೆ 16579/ 16580 ಯಶವಂತಪುರ ಟೌನ್ – ಯಶವಂತಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ವಿಸ್ಟಾಡಾಮ್ ಕೋಚ್ ಆಳವಡಿಕೆ ಮಾಡಲಾಗುತ್ತದೆ.

ಪ್ರತಿದಿನ ಸಂಚಾರ ನಡೆಸುವ ಈ ರೈಲಿಗೆ ಒಂದು ಹವಾನಿಯಂತ್ರಿತ ವಿಸ್ಟಾಡಾಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಶಿವಮೊಗ್ಗ-ಬೆಂಗಳೂರು ನಡುವೆ ಸಂಚಾರ ನಡೆಸುವ ಜನರು ವಿಸ್ಟಡಾಮ್ ಕೋಚ್ ಮೂಲಕ ನಿಸರ್ಗ ಸೌಂದರ್ಯ ಸವಿಯಬಹುದಾಗಿದೆ.

ಕರ್ನಾಟಕದ ಮೊದಲ ವಿಸ್ಟಾಡಾಮ್ ಕೋಚ್‌ ರೈಲು ಜುಲೈ 11ರಂದು ಸಂಚಾರ ಆರಂಭಿಸಿತ್ತು. ಮಂಗಳೂರು-ಬೆಂಗಳೂರು ರೈಲಿಗೆ ಕೋಚ್ ಅಳವಡಿಕೆ ಮಾಡಲಾಗಿತ್ತು. ಪ್ರವಾಸೋದ್ಯಮವನ್ನು ಆಕರ್ಷಕವಾಗಿಸಲು ಈ ವಿನೂತನ ಯೋಜನೆ ಆರಂಭಿಸಲಾಗಿದೆ.

ಡಿಸೆಂಬರ್ 25ರಿಂದ 31/3/2022 ರವರೆಗೆ ರೈಲು ಸಂಖ್ಯೆ ಯಶವಂತಪುರ-ಶಿವಮೊಗ್ಗ ಟೌನ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ಒಂದು ಹವಾನಿಯಂತ್ರಿತ ವಿಸ್ಟಾಡಾಮ್ ಕೋಚ್ ಅನ್ನು ತಾತ್ಕಾಲಿಕವಾಗಿ ಅಳವಡಿಸಲಾಗುತ್ತದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಅದನ್ನು ಮುಂದುವರೆಸುವ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.

* ದಿನಾಂಕ 25/12/2021 ರಿಂದ 31/3/2022 ರವರೆಗೆ ರೈಲು ಸಂಖ್ಯೆ 16579 ಯಶವಂತಪುರ-ಶಿವಮೊಗ್ಗ ಟೌನ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಒಂದು ಹವಾನಿಯಂತ್ರಿತ ವಿಸ್ಟಾಡಾಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗುತ್ತದೆ.

* ದಿನಾಂಕ 25/12/2021 ರಿಂದ 31/3/2022 ರವರೆಗೆ ರೈಲು ಸಂಖ್ಯೆ 16580 ಶಿವಮೊಗ್ಗ ಟೌನ್ – ಯಶವಂತಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಒಂದು ಹವಾನಿಯಂತ್ರಿತ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು-ಮಂಗಳೂರು ನಡುವೆ ಮೊದಲ ವಿಸ್ಟಾಡಾಮ್ ಕೋಚ್ ರೈಲು ಸಂಚಾರ ಆರಂಭಿಸಿತ್ತು. ಪಶ್ಚಿಮ ಘಟ್ಟದಲ್ಲಿ ಈ ಮಾರ್ಗ ಹಾದು ಹೋಗಿದ್ದು ಕೋಚ್ ಮೂಲಕ ಪ್ರಯಾಣಿಕರು. ದಟ್ಟವಾದ ಅರಣ್ಯ, ಅಲ್ಲಲ್ಲಿ ಕಾಣುವ ಜಲಪಾತ, ರೈಲು ಸುರಂಗ ಮಾರ್ಗ, ಶಿರಾಡಿ ಘಾಟ್‌ನ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದರು. ಮಳೆಗಾಲದಲ್ಲಿ ಪಶ್ಚಿಮ ಘಟ್ಟದ ಸೌಂದರ್ಯ ಇಮ್ಮಡಿಯಾಗಿರುತ್ತದೆ. ಆಗ ರೈಲಿನಲ್ಲಿ ಕೂತು ಅದರ ಸೌಂದರ್ಯ ಆಸ್ವಾದಿಸುವುದು ಒಂದು ಚೆಂದದ ಅನುಭವಾಗಿದೆ.

ಶಿವಮೊಗ್ಗ-ಯಶವಂತಪುರ ರೈಲಿಗೆ ಒಂದು ವಿಸ್ಟಾಡಾಮ್ ಬೋಗಿ ಅಳವಿಡಿಕೆ ಮಾಡಲಾಗುತ್ತದೆ. ಇದು ಹವಾನಿಯಂತ್ರಿತ ಬೋಗಿ. ಬೋಗಿಯಲ್ಲಿ 44 ಆಸನ ಸಾಮರ್ಥ್ಯವಿರುತ್ತದೆ. ಈ ಬೋಗಿಯಲ್ಲಿ ಗಾಜಿನ ಮೇಲ್ಛಾವಣಿ ಇದ್ದು, ದೊಡ್ಡ ದೊಡ್ಡ ಗಾಜಿನ ಕಿಟಕಿ ಇರುತ್ತದೆ. ಸೀಟುಗಳು 180 ಡಿಗ್ರಿ ತಿರುಗಲಿವೆ. ಇದರಿಂದಾಗಿ ರೈಲಿನಲ್ಲಿಯೇ ಕುಳಿತು ಜನರು ಪ್ರಕೃತಿ ಸೌಂದರ್ಯ ಸವಿಯಬಹುದಾಗಿದೆ. ಸಾಮಾನ್ಯ ಬೋಗಿಗಿಂತ ವಿಸ್ಟಾಡಾಮ್ ಕೋಚ್‌ನ ಸೀಟಿನ ಬೆಲೆ ಹೆಚ್ಚಾಗಿರುತ್ತದೆ.

ವಿಸ್ಟಾಡಾಮ್ ಕೋಚ್ ಅಗಲವಾದ ದೊಡ್ಡ ಕಿಟಕಿಗಳು, ಗಾಜಿನ ಮೇಲ್ಛಾವಣಿ ಹೊಂದಿದೆ. ಕೋಚ್‌ನಲ್ಲಿರುವ ಪ್ರಯಾಣಿಕರಿಗೆ ಪ್ರಕೃತಿ ಸೌಂದರ್ಯದ ಸ್ಪಷ್ಟವಾದ ನೋಟವನ್ನು ನೀಡುತ್ತದೆ. ವಿಸ್ಟಾಡಾಮ್‌ ಕೋಚ್ ಬೋಗಿಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಎಲ್‌ಎಚ್‌ಬಿಯಲ್ಲಿ ತಯಾರು ಮಾಡಲಾಗಿದೆ. ಕೋಚ್‌ನಲ್ಲಿ ಸಿಸಿಟಿವಿ ಕಣ್ಗಾವಲು, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು, ಎಲ್‌ಇಡಿ, ಓವನ್ ಮತ್ತು ರೆಫ್ರಿಜರೇಟರ್, ಮಿನಿ ಪ್ಯಾಂಟ್ರಿ ಮುಂತಾದ ಸೌಲಭ್ಯಗಳಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

ತಮಿಳುನಾಡಿನಲ್ಲಿ ಕದ್ದುಮುಚ್ಚಿ ಬೂಸ್ಟರ್ ಡೋಸ್ ಪಡೆದರಾ ವೈದ್ಯರು?

Sun Dec 26 , 2021
ಚೆನ್ನೈ, ಡಿಸೆಂಬರ್ 24: ಭಾರತದಲ್ಲಿ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಮೂರನೇ ಅಲೆಯ ಭೀತಿಯನ್ನು ಸೃಷ್ಟಿಸುತ್ತಿದೆ. ಈಗಾಗಲೇ ನೀಡಿರುವ ಎರಡು ಡೋಸ್ ಲಸಿಕೆ ಸಾಮರ್ಥ್ಯವನ್ನು ಮೀರಿ ಸೋಂಕು ಹರಡುತ್ತದೆ ಎಂದು ಸೂಕ್ಷ್ಮಾಣುರೋಗಶಾಸ್ತ್ರಜ್ಞರು ಹಾಗೂ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಓಮಿಕ್ರಾನ್ ಹರಡುವಿಕೆ ಭೀತಿ ನಡುವೆ ತಮಿಳುನಾಡಿನಲ್ಲಿ ಈಗಾಗಲೇ ಹಲವು ವೈದ್ಯರು ಗೌಪ್ಯವಾಗಿ ಬೂಸ್ಟರ್ ಡೋಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಸರ್ಕಾರದ ಇನ್ನೂ ಅಧಿಕೃತವಾಗಿ ಘೋಷಿಸುವುದಕ್ಕೂ ಮೊದಲೇ ಗೌಪ್ಯವಾಗಿ […]

Advertisement

Wordpress Social Share Plugin powered by Ultimatelysocial