ಕೂದಲ ಬೆಳವಣಿಗೆಗೆ ಸಹಕಾರಿ ಈ ಯೋಗ

ಕೂದಲ ಬೆಳವಣಿಗೆಗೆ ಸಹಕಾರಿ ಈ ಯೋಗ

ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಅದಕ್ಕೆ ಸರಿಯಾದ ಚಿಕಿತ್ಸೆ ನೀಡಿ. ಇಲ್ಲವಾದರೆ ಇದರಿಂದ ಬೊಕ್ಕ ತಲೆಯ ಸಮಸ್ಯೆ ಕಾಡುತ್ತದೆ. ಹಾಗಾಗಿ ನಿಮ್ಮ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಪ್ರತಿದಿನ ಬಲಯಂ ಯೋಗವನ್ನು ಮಾಡಿ. ಅದನ್ನು ಮಾಡುವ ವಿಧಾನ ಇಲ್ಲಿದೆ.

ಬಲಯಂ ಯೋಗವು ಕೂದಲು ಉದುರುವಿಕೆಯನ್ನು ನಿಲ್ಲಿಸಲು ಮತ್ತು ಬೋಳು ತಲೆಯ ಸಮಸ್ಯೆಯನ್ನು ತಪ್ಪಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಈ ಯೋಗ ಮಾಡಲು ಮೊದಲಿಗೆ ಸೊಂಟವನ್ನು ನೇರವಾಗಿ ಇರಿಸಿ ನಂತರ ಎರಡೂ ಕೈಗಳನ್ನೂ ಎದೆಯ ಮುಂದೆ ಇರಿಸಿ. ಈಗ ನೀವು 2 ಕೈಗಳ ಬೆರಳುಗಳ ಉಗುರುಗಳನ್ನು ಒಟ್ಟಿಗೆ ಉಜ್ಜಬೇಕು. ನಮ್ಮ ಉಗುರುಗಳ ಅಡಿಯಲ್ಲಿ ಕೆಲವು ನರಗಳ ತುದಿಗಳಿವೆ. ಇದು ತಲೆಯ ಚರ್ಮದ ಮೇಲೆ ಒತ್ತಡವನ್ನು ಹೆಚ್ಚಿಸಿ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಕೂದಲು ಬೆಳವಣಿಗೆ ಹೊಂದುತ್ತದೆ.

ಈ ಯೋಗ ಮಾಡುವುದರಿಂದ 3 ತಿಂಗಳಿನ ನಂತರ ಕೂದಲು ತ್ವರಿತವಾಗಿ ಬೆಳವಣಿಗೆ ಹೊಂದುತ್ತದೆ. ಮತ್ತು ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದಿಲ್ಲ, ತಲೆಹೊಟ್ಟು ಮತ್ತು ಒಣ ನೆತ್ತಿಯ ಸಮಸ್ಯೆ ದೂರವಾಗುತ್ತದೆ. ಆದರೆ ಈ ಯೋಗವನ್ನು ಅಧಿಕ ರಕ್ತದೊತ್ತಡ ರೋಗಿಗಳು ಮತ್ತು ಗರ್ಭಿಣಿಯರು ಮಾಡಬಾರದು. ಹಾಗೇ ಎರಡೂ ಹೆಬ್ಬೆರಳುಗಳ ಉಗುರುಗಳನ್ನು ಒಟ್ಟಿಗೆ ಉಜ್ಜಬೇಡಿ. ಇದು ಮುಖದ ಮೇಲೆ ಕೂದಲು ಬೆಳೆಯಲು ಕಾರಣವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ʼಒಣ ದ್ರಾಕ್ಷಿʼ ತಿನ್ನಿ.. ದೇಹ ತೂಕ ಇಳಿಸಿ..!

Thu Dec 23 , 2021
ಒಣ ದ್ರಾಕ್ಷಿಯಿಂದ ಹಲವಾರು ಉಪಯೋಗಗಳಿವೆ. ಇವು ದೇಹದ ತೂಕ ಇಳಿಸಲೂ ಕೂಡ ನೆರವಾಗುತ್ತವೆ ಎಂಬುದನ್ನು ನೀವು ಕೇಳಿದ್ದೀರಾ..? ಒಣ ದ್ರಾಕ್ಷಿಯಲ್ಲಿ ಗ್ಲುಕೋಸ್ ಮತ್ತು ಫ್ರಕ್ಟೋಸ್ ಹೆಚ್ಚಿನ ಪ್ರಮಾಣದಲ್ಲಿದ್ದು ಇದು ದೇಹಕ್ಕೆ ಶಕ್ತಿ ಒದಗಿಸುತ್ತದೆ. ಒಣ ದ್ರಾಕ್ಷಿಯಲ್ಲಿ ವಿಟಮಿನ್ ಮತ್ತು ಖನಿಜಾಂಶವಿದ್ದು, ಇದು ದೇಹದ ಅಂಗಾಂಶ ಮತ್ತು ಮಾಂಸ ಖಂಡಗಳಿಗೆ ಶಕ್ತಿ ಒದಗಿಸುತ್ತದೆ. ದೇಹದಲ್ಲಿ ಜೀರ್ಣ ಕ್ರಿಯೆ ನಿಧಾನವಾದಾಗ ಕೊಬ್ಬು ಬೆಳೆಯುತ್ತದೆ. ಜೀರ್ಣವಾಗದೆ ಉಳಿದ ಆಹಾರ ಶಕ್ತಿಯಾಗಿ ಪರಿವರ್ತನೆಯಾಗುವ ಬದಲು ಕೊಬ್ಬು […]

Advertisement

Wordpress Social Share Plugin powered by Ultimatelysocial