ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯ ನಾಥ್ ನಿಜವಾದ ಅರ್ಥದಲ್ಲಿ ಕಾನೂನು ಪರಿಪಾಲನೆ ಮಾಡುವ ಮೂಲಕ ಹೇಳಿದ್ದರು.

ಗೋರಖ್‌ಪುರ: ಉತ್ತರ ಪ್ರದೇಶದಲ್ಲಿ 25 ವರ್ಷಗಳ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿಜವಾದ ಅರ್ಥದಲ್ಲಿ ಕಾನೂನು ಪರಿಪಾಲನೆ ಮಾಡುವ ಮೂಲಕ ರಾಜ್ಯವನ್ನು ಮಾಫಿಯಾಗಳಿಂದ ಮುಕ್ತಗೊಳಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಶ್ಲಾಘಿಸಿದ್ದಾರೆ.ಕಳೆದ ಬಾರಿ ಸೋತಿರುವ ವಿರೋಧ ಪಕ್ಷಗಳ ಮೈತ್ರಿಕೂಟವು ಈ ಬಾರಿಯು ಸೋಲು ಅನುಭವಿಸಲಿದೆ ಎಂದವರು ಹೇಳಿದ್ದಾರೆ.ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೋರಖ್‌ಪುರ ನಗರ ಕ್ಷೇತ್ರದಿಂದ ಆದಿತ್ಯನಾಥ್ ಸ್ಪರ್ಧಿಸುತ್ತಿದ್ದಾರೆ. ನಾಮಪತ್ರ ಸಲ್ಲಿಸುವ ಮುನ್ನ ನಡೆದ ಚುನಾವಣಾ ಸಭೆಯನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಿದರು.ಉತ್ತರ ಪ್ರದೇಶದ ಅಭಿವೃದ್ಧಿಗೆ ವಿಶೇಷವಾಗಿ ಪೂರ್ವಾಂಚಲ ಪ್ರದೇಶದತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ ಎಂದು ಅಮಿತ್ ಶಾ ಅಭಿನಂದಿಸಿದರು.ಉತ್ತರ ಪ್ರದೇಶದಲ್ಲಿ ಫೆಬ್ರುವರಿ 10ರಂದು ಮತದಾನ ಆರಂಭವಾಗಲಿದ್ದು, ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಣರಾಜ್ಯೋತ್ಸವ ಪರೇಡ್ 2022: ಉತ್ತರ ಪ್ರದೇಶ ಅತ್ಯುತ್ತಮ ಟ್ಯಾಬ್ಲೋ ಪ್ರಶಸ್ತಿಯನ್ನು ಗೆದ್ದಿದೆ;

Fri Feb 4 , 2022
  ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಉತ್ತರಪ್ರದೇಶದ ಟ್ಯಾಬ್ಲೋ ಅತ್ಯುತ್ತಮವಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಉತ್ತರ ಪ್ರದೇಶದ ಟ್ಯಾಬ್ಲೋದ ಥೀಮ್ ODOP ಮತ್ತು ಕಾಶಿ ವಿಶ್ವನಾಥ ಧಾಮ್ ಆಗಿತ್ತು. ಮೂರು ಸೇವೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್)/ಇತರ ಸಹಾಯಕ ಪಡೆಗಳು ಮತ್ತು ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು (ಯುಟಿಗಳು) ಮತ್ತು ಕೇಂದ್ರ ಸಚಿವಾಲಯಗಳು/ಇಲಾಖೆಗಳಿಂದ ಕವಾಯತು ಅನಿಶ್ಚಿತರ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಮೂರು ನ್ಯಾಯಾಧೀಶರ ಸಮಿತಿಗಳನ್ನು ನೇಮಿಸಲಾಗಿದೆ. ಪ್ಯಾನೆಲ್‌ಗಳ ಮೌಲ್ಯಮಾಪನದ […]

Advertisement

Wordpress Social Share Plugin powered by Ultimatelysocial