ರಾಷ್ಟ್ರೀಯ ಯುವಜನೋತ್ಸವಕ್ಕೆ ಕ್ಷಣಗಣನೆ.

ಹುಬ್ಬಳ್ಳಿ: ನಗರದ ಕೇಶ್ವಾಪುರದ ರೈಲ್ವೆ ಮೈದಾನದಲ್ಲಿ ಗುರುವಾರ (ಜ.12) ಹಮ್ಮಿಕೊಂಡಿರುವ ʼರಾಷ್ಟ್ರೀಯ ಯುವಜನೋತ್ಸವʼಕ್ಕೆ (National Youth Festival) ಕ್ಷಣಗಣನೆ ಆರಂಭವಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸಂಜೆ 4 ಗಂಟೆಗೆ ಚಾಲನೆ ನೀಡಲಿದ್ದು, ಏರ್ಪೋರ್ಟ್‌ಗೆ ಎಸ್‌ಪಿಜಿ ಕಮಾಂಡೋ ವಾಹನಗಳು ಆಗಮಿಸಿವೆ. ಇನ್ನು ಎರಡು ದಿನಗಳಿಂದ ಹೊಸೂರ್ ಕ್ರಾಸ್‌ನಲ್ಲಿ ನಿಂತಿದ್ದ ಅಪರಿಚಿತ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಯುವಜನೋತ್ಸವಕ್ಕೆ ಆಗಮಿಸುತ್ತಿರುವ ಯುವಜನತೆಯ ಜೋಶ್‌ ಹೆಚ್ಚಾಗಿದೆ. ಬಿಜೆಪಿ ಕಾರ್ಯಕರ್ತರ ಉತ್ಸಾಹವೂ ಈ ವೇಳೆ ಇಮ್ಮಡಿಗೊಂಡಿದೆ. ಹುಬ್ಬಳ್ಳಿ ಏರ್ಪೋರ್ಟ್‌ಗೆ ಎರಡು ಗಂಟೆ ಮುಂಚಿತವಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆ ವಾಹನ ಆಗಮಿಸಿದೆ. ವಿಮಾನ ನಿಲ್ದಾಣದ ಸುತ್ತ ಪರಿಶೀಲನೆ ನಡೆಸಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೆ, ಮೋದಿ ಬರುವ ಮಾರ್ಗದುದ್ದಕ್ಕೂ ಪೊಲೀಸರು, ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ದೇಶದ ಯುವ ಶಕ್ತಿ ಮತ್ತು ವಿವಿಧ ರಾಜ್ಯದ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದ್ದು, 28 ರಾಜ್ಯಗಳ, 6 ಕೇಂದ್ರಾಡಳಿತ ಪ್ರದೇಶಗಳ ಯುವ ಪ್ರತಿನಿಧಿಗಳಿಂದ ವಾಕಥಾನ್ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಸ್ಥಳದತ್ತ ಕಲಾವಿದರು ಆಗಮಿಸುತ್ತಿದ್ದಾರೆ. ಕಲಾ ಪ್ರದರ್ಶನಕ್ಕೆ ಸಜ್ಜಾಗಿ ನಿಂತಿವೆ. ‌ ಇನ್ನು ಕಾರ್ಯಕ್ರಮಕ್ಕಾಗಿ ದೇಶದ ನಾನಾ ಭಾಗಗಳಿಂದ ಹಲವಾರು ಕಲಾವಿದರು ಆಗಮಿಸುತ್ತಿದ್ದು, ಧಾರವಾಡಕ್ಕೆ ಬಂದಿಳಿಯುವವರಿಗಾಗಿ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಅವರೆಲ್ಲರಿಗೂ ಮಧ್ಯಾಹ್ನ ೧೨ ಗಂಟೆಯಿಂದಲೇ ಹುಬ್ಬಳ್ಳಿಗೆ ರೈಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸುಮಾರು 7 ಸಾವಿರ ಯುವಕ-ಯುವತಿಯರು ಧಾರವಾಡದಿಂದ ಹುಬ್ಬಳ್ಳಿಗೆ ಪ್ರಯಾಣಿಸಿದ್ದಾರೆ. ಧಾರವಾಡದ ರೈಲ್ವೆ ನಿಲ್ದಾಣದ ಬಳಿ ದೇಶದ ನಾನಾ ಭಾಗಗಳಿಂದ ಅವರದೇ ಉಡುಗೆಗಳನ್ನು ಧರಿಸಿರುವ ಯುವಕರ ಗುಂಪುಗಳು ಮಿಂಚುತ್ತಿವೆ. ವಿವೇಕಾನಂದರ ಫೋಟೊಗಳೇ ಕಾಣುತ್ತಿಲ್ಲ ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಹಿನ್ನೆಲೆಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಬಿಂದುವನ್ನೇ ರಾಜ್ಯ ಸರ್ಕಾರ ಕೈಬಿಟ್ಟಿದೆ ಎಂಬ ಆರೋಪ ಕೇಳಿಬಂದಿದೆ. ರಸ್ತೆಯುದ್ದಕ್ಕೂ ರಾಜಕೀಯ ನಾಯಕರ ಫ್ಲೆಕ್ಸ್‌ಗಳನ್ನು ಹಾಕಲಾಗಿದ್ದು, ಎಲ್ಲಿಯೂ ಸಹ ಸ್ವಾಮಿ ವಿವೇಕಾನಂದರ‌ ಭಾವಚಿತ್ರವನ್ನು ಹಾಕಲಾಗಿಲ್ಲ ಎಂದು ಆರೋಪ ಮಾಡಲಾಗಿದೆ. ನರೇಂದ್ರ ಮೋದಿ ಸಂಚಾರ ಮಾಡಲಿರುವ ಮಾರ್ಗದಲ್ಲಿ ನೋಡಿದರೆ ರಾಜಕೀಯ ನಾಯಕರ ಫ್ಲೆಕ್ಸ್‌ ಬಿಟ್ಟರೆ ಸ್ವಾಮಿ ವಿವೇಕಾನಂದರ ಭಾವಚಿತ್ರವು ಒಂದೆರೆಡು ಕಡೆ ಮಾತ್ರವೇ ಕಾಣಸಿಗುತ್ತಿದೆ ಎಂಬುದು ಅಸಮಾಧಾನಕ್ಕೆ ಕಾರಣವಾಗಿದೆ. ರಸ್ತೆಯಲ್ಲಿ ರಂಗೋಲಿ ಚಿತ್ತಾರ ಏರ್ಪೋರ್ಟ್‌ ದ್ವಾರ ಬಾಗಿಲಿನಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರ ಸಂಭ್ರಮ ಮನೆ ಮಾಡಿದೆ. ಏರ್ಪೋರ್ಟ್‌ನ ದ್ವಾರವನ್ನು ಹೂವಿನಿಂದ ಅಲಂಕರಿಸಲಾಗಿದ್ದು, ದ್ವಾರದ ಮುಂಭಾಗದಲ್ಲಿ ಬಣ್ಣ ಬಣ್ಣದ ರಂಗೋಲಿಗಳಿಂದ ಚಿತ್ತರಿಸಲಾಗಿದೆ. ಮೋದಿ ಸಂಚರಿಸಲಿರುವ ರಸ್ತೆಯನ್ನು ಅಲಂಕರಿಸಲಾಗಿದೆ. ವಿಮಾನ ನಿಲ್ದಾಣ ರಸ್ತೆಯಿಂದ ಅಕ್ಷಯ ಪಾರ್ಕ್‌ವರೆಗೂ ಬಿಜೆಪಿ ಮಹಿಳಾ ಕಾರ್ಯಕರ್ತರು ರಂಗೋಲಿಗಳಿಂದ ರಸ್ತೆಯನ್ನು ಚಿತ್ತಾರಗೊಳಿಸಿದ್ದಾರೆ. ಕಲಾ ತಂಡಗಳಿಂದ ರಿಹರ್ಸಲ್ಹು ಬ್ಬಳ್ಳಿಯ ರೈಲ್ವೇ ಮೈದಾನದಲ್ಲಿ ಕಲಾ ತಂಡಗಳಿಂದ ರಿಹರ್ಸಲ್ ಆರಂಭವಾಗಿದೆ. ವೇದಿಕೆ ಮುಂಭಾಗದಲ್ಲಿ ಕಲಾ ತಂಡಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದೇ ವೇಳೆ ವೇದಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ‌, ಅನುರಾಗ್‌ ಸಿಂಗ್ ಠಾಕೂರ್ ಆಗಮಿಸಿ, ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಸಚಿವರಾ ಹಾಲಪ್ಪ ಆಚಾರ್, ನಾರಾಯಣಗೌಡ, ವಿಧಾನ ಪರಿಷತ್‌ ಸಭಾಪತಿ ಬಸವರಾಜ್ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ್ ಜತೆಗಿದ್ದರು . ಅಪರಿಚಿತ ವಾಹನ ವಶಕ್ಕೆ ಪ್ರಧಾನಿ‌ ಮೋದಿ ಸಂಚರಿಸುವ ಮಾರ್ಗವಾದ ಹೊಸೂರ್ ಕ್ರಾಸ್ ಬಳಿ ಮಹಾರಾಷ್ಟ್ರ ನೋಂದಣಿಯ ಅಪರಿಚಿತ ಕಾರೊಂದು ನಿಂತಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಇದನ್ನು ಪರಿಶೀಲನೆ ನಡೆಸಿ, ಅದರ ಮಾಲೀಕರ ವಿವರ ಸಂಗ್ರಹಣೆ ಮುಂದಾಗಿದ್ದರು. ಆದರೆ, ಪತ್ತೆಯಾಗದ ಹಿನ್ನೆಲೆಯಲ್ಲಿ ಆ ಕಾರನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ರಂಗೋಲಿಯಲ್ಲಿ ಮೂಡಿದ ಮೋದಿ ವೇದಿಕೆ ಮುಂಭಾಗದಲ್ಲಿ ಕಲಾವಿದನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ರಂಗೋಲಿಯನ್ನು ಬಿಡಿಸುತ್ತಿರುವುದು ಸಾಕಷ್ಟು ಗಮನ ಸೆಳೆದಿದೆ. ಬೆಂಗಳೂರು:ಪ್ರಯಾಣಿಕರ ಜತೆ ಉಡಾಫೆ ವರ್ತನೆ, ಮೀಟರ್‌ಗಿಂತ ಹೆಚ್ಚಿನ ಹಣ ವಸೂಲಿ, ಕರೆದ ಸ್ಥಳಕ್ಕೆ ಬರುವುದಿಲ್ಲ ಎಂಬುದು ಆಟೋ ಚಾಲಕರ ವಿರುದ್ಧ ಇರುವ ಸಾಮಾನ್ಯ ದೂರುಗಳು. ಇದೆಲ್ಲದರ ನಡುವೆ ಹಲವು ಆಟೋ ಚಾಲಕರು ಪ್ರಾಮಾಣಿಕತೆ (Honest Auto driver), ನ್ಯಾಯ, ನೀತಿ, ಆದರ್ಶಗಳನ್ನಿಟ್ಟುಕೊಂಡು ಬದುಕುತ್ತಿದ್ದಾರೆ. ಅನಿವಾಸಿ ಭಾರತೀಯ ವೈದ್ಯೆಯೊಬ್ಬರು ನಗರದ ಗಾಂಧಿ ಬಜಾರ್‌ನಲ್ಲಿ ಆಟೋದಲ್ಲಿ ಬಿಟ್ಟು ಹೋಗಿದ್ದ ಪರ್ಸ್ ಅನ್ನು ವಾಪಸ್ ಅವರಿಗೆ ಸೇರಿಸುವ ಮೂಲಕ ಆಟೋ ಚಾಲಕರೊಬ್ಬರು ತಮ್ಮ ಪ್ರಾಮಾಣಿಕತೆ ಮೆರೆದಿದ್ದಾರೆ. ಅಮೆರಿಕದಲ್ಲಿ ವೈದ್ಯೆಯಾಗಿರುವ ಡಾ. ಜ್ಯೋತಿ ಮೆಕೆಪಟ್ಟಿ ಎನ್ನುವವರು ಬೆಂಗಳೂರಿಗೆ ಬಂದಿದ್ದರು. ಜ್ಯೋತಿ ಗಾಂಧಿ ನಗರದಿಂದ ಸಂಬಂಧಿಕರ ಮನೆಗೆ ಆಟೋದಲ್ಲಿ ತೆರಳಿದ್ದರು. ಕಸ್ತೂರಿ ಬಾ ಬಡಾವಣೆಯಿಂದ ಕಿಶೋರ್ ಎಂಬುವವರ ಆಟೋ ಹತ್ತಿದ್ದರು. ಇಳಿಯುವಾಗ ತಮ್ಮ ಬ್ಯಾಗ್‌ ಮರೆತು ಹೋಗಿದ್ದರು. ಇದನ್ನು ಕಂಡ ಆಟೋ ಡ್ರೈವರ್‌ ಕಿಶೋರ್‌ ಆ ಬ್ಯಾಗನ್ನು ಗೋವಿಂದರಾಜ ನಗರ ಪೋಲಿಸ್‌ ಠಾಣೆಗೆ ಬಂದು ಮಾಹಿತಿ ತಿಳಿಸಿದ್ದಾರೆ. ಬ್ಯಾಗ್‌ ಪರಿಶೀಲಿಸಿದ ಪೊಲೀಸರು ಅದರಲ್ಲಿದ್ದ ಪಾಸ್‌ಫೋರ್ಟ್‌, ವೀಸಾ, ಡೆಬೀಟ್‌ ಕಾರ್ಡ್‌ ಹಾಗೂ 5000 ಹಣ ಮತ್ತು ಅಮೇರಿಕನ್‌ ಡಾಲರ್‌ ಇದ್ದದ್ದನ್ನು ಗಮನಿಸಿ, ವೈದ್ಯೆಯಾಗಿರುವ ಡಾ. ಜ್ಯೋತಿ ಮೆಕೆಪಟ್ಟಿ ಸಂಪರ್ಕಿಸಿ ಅವರ ವಸ್ತುಗಳನ್ನು ಹಿಂದಿರುಗಿಸಿದ್ದಾರೆ. ಪರ್ಸ್‌ನಲ್ಲಿ ಹಣ ಸ್ವಲ್ಪವೇ ಇದ್ದುದ್ದು, ಆದರೆ ಅದರಲ್ಲಿ, ಪಾಸ್‌ ಪೋರ್ಟ್‌, ಎಟಿಎಂ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್‌ಗಳಿದ್ದವು. ಆಟೋ ಚಾಲಕ ಕಿಶೋರ ಅವರಿಗೆ ಹೇಗೆ ಧನ್ಯವಾದ ತಿಳಿಸಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಮಹಿಳೆ ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ. ಆಟೋ ಡ್ರೈವರ್‌ಗೆ ಸನ್ಮಾನ ಈ ವೇಳೆ ಗೋವಿಂದರಾಜ ನಗರ ಪೊಲೀಸ್‌ ಠಾಣೆಯಲ್ಲಿ ಆಟೋ ಚಾಲಕ ಕಿಶೋರ್‌ ಅವರನ್ನು ವೈದ್ಯೆ ಜ್ಯೋತಿಯವರ ಸಮ್ಮುಖದಲ್ಲಿ ಡಿಸಿಪಿ ಪಿ ಕೃಷಕಾಂತ್‌, ಎಸಿಪಿ ನಾಗರಾಜ್‌ ಮತ್ತು ಇನ್ಸ್‌ಪೆಕ್ಟರ್ ಸಂದೀಪ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್ ಸುನಿಲ್‌ ಅವರು ಸನ್ಮಾನಿಸಿದರು. ಹುಬ್ಬಳ್ಳಿ:ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುವಜನೋತ್ಸವ (National Youth Festival) ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಹುಬ್ಬಳ್ಳಿಗೆ ಆಗಮಿಸಿದ್ದು, ಭವ್ಯ ಸ್ವಾಗತ ಕೋರಲಾಯಿತು. ಮೋದಿ ಅವರನ್ನು ನೋಡಲು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಅಕ್ಷಯ ಪಾರ್ಕ್‌ವರೆಗೆ ೮ ಕಿ.ಮೀ. ವರೆಗೆ ಜನಸ್ತೋಮವೇ ಸೇರಿದೆ. ಪ್ರಧಾನಿ ಸಹ ರೋಡ್‌ ಶೋ ನಡೆಸುತ್ತಿದ್ದು, ಇವರನ್ನು ನೋಡಲು ೮೦ ವರ್ಷದ ವೃದ್ಧರೊಬ್ಬರು ಮರವನ್ನೇ ಏರಿ ಕುಳಿತು ಗಮನ ಸೆಳೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಗೆ ಬರುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಜನರು ಆಗಮಿಸಿದ್ದು, ಬಾಗಲಕೋಟೆಯ ಫಕ್ಕೀರಪ್ಪ ಎಂಬ ೮೦ ವರ್ಷದ ವಯೋವೃದ್ಧರೊಬ್ಬರು ಮೋದಿ ನೋಡಲೆಂದು ಮರವನ್ನೇ ಏರಿ ಕುಳಿತಿದ್ದರು. ಅಕ್ಷಯ ಪಾರ್ಕ್‌ ವೃತ್ತದಲ್ಲಿ ಬ್ಯಾರಿಕೇಡ್‌ ಹಾಕಲಾಗಿತ್ತು. ಆಗಲೇ ಜನರೆಲ್ಲರೂ ಅಲ್ಲಿ ಸೇರಿದ್ದರು. ಈ ಹಿನ್ನೆಲೆಯಲ್ಲಿ ಫಕ್ಕೀರಪ್ಪ ಅವರಿಗೆ ಅಲ್ಲಿ ನಿಲ್ಲಲು ಸಾಧ್ಯವಾಗಿಲ್ಲ. ಇದರಿಂದ ಸುತ್ತಮುತ್ತ ನೋಡಿದವರಿಗೆ ಮರ ಕಂಡಿದೆ. ಅಕ್ಷಯ್ ಪಾರ್ಕ್‌ನ ವೃತ್ತದ ಪಕ್ಕದಲ್ಲಿಯೇ ಇದ್ದ ಮರವೇರಿದ ಫಕ್ಕೀರಪ್ಪ, ‘ನಾನು ಮೋದಿ ಅಭಿಮಾನಿ.. ನನ್ನ ಕಣ್ಣಾರೆ ಮೋದಿ‌ ನೋಡುವ ಆಸೆ ಇದೆ. ಹಾಗಾಗಿ ಬಂದಿದ್ದೇನೆ ಎಂದು ಚಕ ಚಕನೆ ಮರವನ್ನು ಏರಿ ಕುಳಿತಿದ್ದಾರೆ. ಹಳದಿ ರುಮಾಲು ಹಾಕಿರುವ ಫಕ್ಕೀರಪ್ಪ, ಗ್ಲಾಸ್‌ ಹಾಕಿಕೊಳ್ಳುವ ಮೂಲಕ ಮಿಂಚಿದ್ದಾರೆ. ಇದೇ ವೇಳೆ ಮೋದಿ ರೋಡ್‌ ಶೋವನ್ನು ನೋಡಲು ಲಕ್ಷಾಂತರ ಮಂದಿ ಸೇರಿದ್ದು, ದಾರಿಯುದ್ದಕ್ಕೂ ಪ್ರಧಾನಿಗೆ ಹೂಮಳೆಗೈದಿದ್ದಾರೆ. ಬೆಂಗಳೂರು: ರಸ್ತೆಯ ಮಧ್ಯ ಭಾಗದಲ್ಲಿ ಏಕಾಏಕಿ ರಸ್ತೆ ಕುಸಿದಿರುವ (Bengaluru Pothole) ಘಟನೆ ಜಾನ್ಸನ್‌ ಮಾರ್ಕೆಟ್ ರಸ್ತೆಯಲ್ಲಿ ನಡೆದಿದೆ.ಆಡುಗೋಡಿಯಿಂದ ಶಿವಾಜಿನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಕಂದಕಕ್ಕೆ ಸವಾರ ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಗಾಯಾಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸುಮಾರು ಎರಡು ಅಡಿಗಳಷ್ಟು ಅಗಲವಾಗಿ ಗುಂಡಿ ಕುಸಿದು ಭಾರಿ ಅನಾಹುತವೊಂದು ತಪ್ಪಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಶೋಕ್‌ ನಗರ ಪೊಲೀಸರು ಭೇಟಿ ನೀಡಿದ್ದು, ರಸ್ತೆ ಮಾರ್ಗವನ್ನು ಬದಲಾವಣೆ ಮಾಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ವಚ್ಛವಾಹಿನಿ ವಾಹನವನ್ನ ಗ್ರಾಮಪಂಚಾಯತಿಯವ್ರು ದುರ್ಬಳಕೆ ಮಾಡಿಕೊಂಡಿದ್ದಾರೆ

Thu Jan 12 , 2023
ಕೂತನೂರು ಗ್ರಾಮದಲ್ಲಿಸ್ವಚ್ಛವಾಹಿನಿ ಸರ್ಕಾರಿ ವಾಹನವನ್ನ ದುರ್ಬಳಕೆ ಮಾಡಿಕೊಂಡು ಮುಸುಕಿನ ಜೋಳವನ್ನ ಸಾಗಿಸುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.ಸರ್ಕಾರದಿಂದ ಗ್ರಾಮಪಂಚಾಯತಿಗೆ ನೀಡಲಾಗಿರುವ ಸ್ವಚ್ಛವಾಹಿನಿ ವಾಹನವನ್ನ ಗ್ರಾಮಪಂಚಾಯತಿಯವ್ರು ದುರ್ಬಳಕೆ ಮಾಡಿಕೊಂಡಿದ್ದಾರೆ ಈ ದೃಶ್ಯ ಕಂಡುಬಂದಿದ್ದು ಗುಂಡ್ಲುಪೇಟೆ ತಾಲೂಕಿನ ಕೂತನೂರು ಗ್ರಾಮದಲ್ಲಿ ಸ್ವಚ್ಚತಾ ಕೆಲ್ಸಕ್ಕೆ ಬಳಸಬೇಕಿದ್ದ ವಾಹನವನ್ನ ಜಮೀನಿನ ಕೆಲಸಕ್ಕೆ ಬಳಕೆ ಮಾಡಿಕೊಳ್ತಿರುವ ಕುರಿತು ಆರೋಪ ಕೇಳಿಬರ್ತಿವೆ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and […]

Advertisement

Wordpress Social Share Plugin powered by Ultimatelysocial