ಪೊಲೀಸರಲ್ಲಿ ದೂರವಾದ ಸ್ವಲ್ಪ ಆತಂಕ-ಕೊರೊನಾ ಟೆಸ್ಟ್ ನೆಗೆಟಿವ್

ಪಾದರಾಯನಪುರ ಗಲಭೆ ಪ್ರಕರಣದ ಆರೋಪಿಗಳನ್ನು ರಾಮನಗರ ಆಸ್ಪತ್ರೆಯಲ್ಲಿ ನೋಡಿಕೊಂಡ ವಿವಿಧ ಇಲಾಖೆಗಳ ಸಿಬ್ಬಂದಿ ಸೇರಿ ಒಟ್ಟು 68 ಮಂದಿ ಕೊರೊನಾ ರಿಪೋರ್ಟ್  ನೆಗೆಟಿವ್ ಬಂದಿದೆ ಎಂದು ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಮನಗರ ಆಸ್ಪತ್ರೆಯಲ್ಲಿ ಪಾದರಾಯನಪುರ ಆರೋಪಿಗಳ ನೇರ ಸಂಪರ್ಕಕ್ಕೆ ಬಂದಿದ್ದ ಜೈಲು ಸಿಬ್ಬಂದಿ, ಪೊಲೀಸರು, ಅಧಿಕಾರಿಗಳು, ನಗರಸಭೆ ಸಿಬ್ಬಂದಿ, ಚಾಲಕರು ಸೇರಿದಂತೆ ಒಟ್ಟು 68 ಮಂದಿಗೆ, ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಎಲ್ಲರಿಗೆ ನೆಗೆಟಿವ್ ಫಲಿತಾಂಶ ಬಂದಿರುವುದು ನನಗೆ ತುಂಬಾ ಸಮಾಧಾನ ತಂದಿದೆ.ಅಷ್ಟೇ ಅಲ್ಲದೆ ಇವರ ಕುಟುಂಬ ಸದಸ್ಯರೂ ತಪಾಸಣೆಗೊಪಟ್ಟಿದ್ದು, ಅವರಿಗೂ ಯಾವುದೇ ಸೋಂಕು ತಗುಲಿಲ್ಲ. ಆರೋಪಿಗಳನ್ನು ಬೆಂಗಳೂರಿಗೆ ಶಿಫ್ಟ್ ಮಾಡಿದ ನಂತರ ಸರ್ಕಾರವೂ ಎಳ್ಳಷ್ಟ್ಟು ಎಚ್ಚರ ತಪ್ಪದೆ ಪ್ರತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಫಲಿತಾಂಶವೂ ನೆಗೆಟಿವ್ ಬಂದಿದೆ. ಆದರೂ ಅವರನ್ನು ಇನ್ನು 12 ದಿನ ರಾಮನಗರದ ಹಾಸ್ಟೆಲ್ ವೊಂದರಲ್ಲಿ  ಕ್ವಾರಂಟೈನ್​​ನಲ್ಲೇ ಇಡಲಾಗುವುದು. ಕ್ವಾರಂಟೈನ್ ಮುಗಿದ ಮೇಲೆ ಮತ್ತೊಮ್ಮೆ ಇವರೆಲ್ಲರನ್ನು ತಪಾಸಣೆಗೆ ಒಳಪಡಿಸಲಾಗುವುದು. ಆದರೂ ಜಿಲ್ಲೆಯಲ್ಲಿ ಸರ್ಕಾರ ಸೋಂಕು ಹರಡದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದೆ ಎಂದು ಹೇಳಿದರು.

 

 

Please follow and like us:

Leave a Reply

Your email address will not be published. Required fields are marked *

Next Post

ಭಾರತ ಕೋವಿಡ್ ಪರೀಕ್ಷಾ ಕಿಟ್ ತಿರಸ್ಕರಿಸಿದ್ದಕ್ಕೆ ಉರಿದು ಬಿದ್ದ ಚೀನಾ

Tue Apr 28 , 2020
ಬೀಜಿಂಗ್: ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಲು ಬಳಸುವ ಚೀನಾ ನಿರ್ಮಿತ ರ‍್ಯಾಪಿಡ್ ಆಯಂಟಿಬಾಡಿ ಟೆಸ್ಟ್ ಕಿಟ್‌ಗಳನ್ನು ಬಳಸದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದ್ದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಕೆಲವು ವ್ಯಕ್ತಿಗಳು ಚೀನಾ ಉತ್ಪನ್ನಗಳಿಗೆ ದೋಷಪೂರಿತ ಎಂದು ಹಣೆಪಟ್ಟಿ ಕಟ್ಟುವುದು ಮತ್ತು ಸಮಸ್ಯೆಗಳನ್ನು ಪೂರ್ವಾಗ್ರಹದಿಂದ ನೋಡುವುದು ಅನ್ಯಾಯ ಮತ್ತು ಬೇಜವಾಬ್ದಾರಿಯುತ ಎಂದು ದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರೆ ಜಿ ರೋಂಗ್ ಹೇಳಿದ್ದಾರೆ. ಚೀನಾದ […]

Advertisement

Wordpress Social Share Plugin powered by Ultimatelysocial