ಬೆಂಗಳೂರು: ಕೊರೊನಾ ಸೋಂಕು ಭಯದ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಅನುಮಾನಾಸ್ಪದ ವಸ್ತು ಕಂಡು ಬಂದಿದೆ, ಕೆಲ ಸಮಯ ಭಯ ಪಡುವ ವಾತಾವಾರಣ ನಿರ್ಮಾಣವಾಗಿತ್ತು. ಪಟಾಕಿ ಮಾದರಿಯ ವಸ್ತು ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕತ್ರಿಗುಪ್ಪೆ-ಅಶೋಕನಗರ ಜಂಕ್ಷನ್ ಬಳಿ ಪತ್ತೆಯಾಗಿದೆ. ಅದನ್ನು ಕಂಡು ಭಯಭೀತರಾದ ಜನ ಸ್ಫೋಟಕ ವಸ್ತು ಎಂದು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಹನುಮಂತನಗರ ಠಾಣಾ ಪೊಲೀಸರು ಹಾಗೂ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪಟಾಕಿ ಮಾದರಿ ವಸ್ತು ಇರುವುದು ಕಂಡು ಬಂದಿದೆ, ತಕ್ಷಣ ಎಫ್ಎಸ್ಎಲ್ ಕಚೇರಿಗೆ ರವಾನೆ ಮಾಡಿದ್ದಾರೆ. ಇದು ಮೇಲ್ನೋಟಕ್ಕೆ ಪಟಾಕಿ ಎಂದು ಕಂಡು ಬಂದಿದೆ.
ಸಿಲಿಕಾನ್ ಸಿಟಿಯಲ್ಲಿ ಅನುಮಾನಾಸ್ಪದ ವಸ್ತು ಪತ್ತೆ
Please follow and like us: