ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಿಯಿಸಿರೋ ರಾಬರ್ಟ್ ಚಿತ್ರ ಈಗಾಗಲೇ ಸದ್ದು ಮಾಡ್ತಿದೆ. ರಾಬರ್ಟ್ ಚಿತ್ರತಂಡ ಇಂದು ವಿಶ್ವ ಕಾರ್ಮಿಕರ ದಿನಾಚರಣೆ ಹಿನ್ನೆಲೆ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಮಾಡೋ ಮೂಲಕ ದುಡಿಮೆಯೇ ದೇವರು ಅಂತ ನಂಬಿರೋ ಕಾರ್ಮಿಕರಿಗೆ ಅರ್ಪಿಸಿದ್ದಾರೆ.. ರಾಬರ್ಟ್ ಫಿಲ್ಮನ ಮೇಕಿಂಗ್ ವಿಡಿಯೋದಲ್ಲಿ ಸಿನಿಮಾ ಶೂಟಿಂಗನಲ್ಲಿ ಕ್ಯಾಮೆರಾ ಹಿಂದೆ ಕೆಲಸ ಮಾಡಿದ ಕಾರ್ಮಿಕರ ಶ್ರಮ ಹೇಗಿರುತ್ತೆ ಅಂತ ತಿಳಿಸಿಕೊಟ್ಟಿದ್ದಾರೆ… ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಸಿನಿಮಾ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಲಿಂಕ್ ಷೇರ್ ಮಾಡಿ, ಎಲ್ಲಾ ಕಾರ್ಮಿಕರಿಗೂ, ಕಾರ್ಮಿಕ ದಿನಾಚರಣೆಯ ಶುಭಾಶಯಗಳನ್ನ ತಿಳಿಸಿದ್ದಾರೆ. ಅಲ್ಲದೇ ಕ್ಯಾಮೆರಾ ಹಿಂದೆ ಕೆಲಸ ಮಾಡುವ ಕಾಣದ ಕೈಗಳಿಗೆ ರಾಬರ್ಟ್ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡೋ ಮೂಲಕ ಅರ್ಪಣೆ ಮಾಡಿದ್ದಾರೆ.