ಕೊರೊನಾ ವೈರಸ್ ಅಟ್ಟಹಾಸದಿಂದ ಸಾಕಷ್ಟು ದೇಶಗಳ ಆರ್ಥಿಕತೆ ಮೇಲೆ ಭಾರಿ ಹೊಡೆತ ಬಿದ್ದಿದೆ. ಭಾರತ ಕೂಡ ಇದಕ್ಕೆ ಹೊರತಾಗಿಲ್ಲ. ಕೊರೊನಾ ಸಂಕಷ್ಟದ ಆರ್ಥಿಕತೆ ಮೇಲೆತ್ತಲು ಕೇಂದ್ರ ಸರ್ಕಾರ ಈ ವರ್ಷ ೧೨ಲಕ್ಷ ಕೋಟಿ ರೂಪಾಯಿ ಸಾಲ ಪಡೆಯುವ ಅಗತ್ಯ ಬಿಳಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಲಾಕ್ಡೌನ್ನಿಂದ ವ್ಯಾಪಾರ, ವಹಿವಾಟು ಸ್ಥಗಿತಗೊಂಡಿದ್ದು, ತೆರಿಗೆ ಸಂಗ್ರಹ ಸೇರಿದಂತೆ ಎಲ್ಲ ಆದಾಯ ಮೂಲಕ್ಕೂ ಹೊಡೆತ ಬಿದ್ದಿದೆ. ಹೀಗಾಗಿ ಕೇಂದ್ರ ಸರ್ಕಾರ ಪ್ರಸ್ತುತ ಆರ್ಥಿಕ ವರ್ಷದ ಸಾಲದ ಗುರಿಯನ್ನು ೧೨ಲಕ್ಷ ಕೋಟಿಗೆ ಏರಿಕೆ ಮಾಡಿದೆ. ಕಡಿಮೆ ತೆರಿಗೆ ಸಂಗ್ರಹವಾಗಿರುವ ಕಾರಣ ಹಾಗೂ ಆರ್ಥಿಕತೆಗೆ ಪುನಶ್ಚೇತನ ನೀಡೊ ದೃಷ್ಟಿಯಿಂದ ಸಾಲದ ಗುರಿ ಹೆಚ್ಚಳ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
೧೨ ಲಕ್ಷ ಕೋಟಿ ಸಾಲ ಮಾಡಲಿದೆಯಾ ಭಾರತ..
Please follow and like us: