ಸದಾ ಹೊಸ ರಾಗ, ಹೊಸ ಚಿಂತನೆಯಲ್ಲಿ ತೊಡಗಿರುವ ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಈಗ ಒಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ಕನ್ನಡದಲ್ಲಿ ‘ಫಸ್ಟ್ ರ್ಯಾಂಕ್ ರಾಜು’ ಸಿನಿಮಾದಲ್ಲಿ ಎಲ್ಲ ಹಾಡುಗಳಿಗೆ ಮಾಧುರ್ಯ ತುಂಬಿಕೊಟ್ಟಿದ್ದ ಕಿರಣ್ ರವೀಂದ್ರನಾಥ್ ಈಗ ಲಾಕ್ಡೌನ್ ಸಂದರ್ಭದಲ್ಲಿ ‘ಚಹಾ ಥಾ ಕ್ಯಾ ಹಮ್ ನೇ’ ಗೀತೆಯನ್ನು ಸ್ವತಃ ಹಾಡಿದ್ದಾರೆ ಹಾಗೂ ರಾಗ ಸಂಯೋಜನೆ ಸಹ ಮಾಡಿದ್ದಾರೆ.
ಇವರ ಸ್ನೇಹಿತ ಗಿಟಾರ್ ವಾದ್ಯಗಾರ ಹಾಗೂ ಸಿವಿಲ್ ಇಂಜಿನಿಯರ್ ಆಗಿರುವ ಹಮೀದ್ ಹಾಸನ್, ಈ ಹಿಂದಿ ಹಾಡನ್ನು ರಚಿಸಿದ್ದಾರೆ. 3 ನಿಮಿಷ 25 ಸೆಕಂಡ್ ಅವಧಿಯ ಈ ವಿಡಿಯೋ ಹಾಡನ್ನು ರೆಕಾರ್ಡ್ ಮಾಡಿ ಕಿಬೋರ್ಡ್, ರಿದಮ್ ಪ್ರೋಗ್ರಾಮ್ ಸಹ ಕಿರಣ್ ರವೀಂದ್ರನಾಥ್ ಮಾಡಿದ್ದಾರೆ. ವರುಣ್ ಪ್ರದೀಪ್ ಮಾಸ್ಟರಿಂಗ್ ಮಾಡಿ, ಗಣೇಶ್ ಈ ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ.