ಕೊರೊನಾ ಸೋಂಕು ಹರಡುವ ಭೀತಿ ಇರುವುದರಿಂದ ಸದ್ಯ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ಆದರೆ, ಉಳಿದ ತಾಂತ್ರಿಕ ಕೆಲಸಗಳನ್ನು ಮಾಡಿಕೊಳ್ಳಬಹುದು’ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,’ಚಿತ್ರೀಕರಣಕ್ಕೆ ಅವಕಾಶ ನೀಡಿದರೆ ಕೊರೊನಾ ಸೋಂಕು ನಿಯಂತ್ರಣ ನಿಯಮ ಪಾಲನೆ ಕಷ್ಟವಾಗಬಹುದು. ಆದರೆ, ಡಬ್ಬಿಂಗ್, ಎಡಿಟಿಂಗ್, ಗ್ರಾಫಿಕ್ಸ್, ರಿರೆಕಾರ್ಡಿಂಗ್ನಂತಹ ಚಟುವಟಿಕೆಯನ್ನು ನಡೆಸಬಹುದು. ಈ ವೇಳೆಯೂ, ಸರ್ಕಾರದ ಆದೇಶ ಮತ್ತು ನಿಯಮ ಪಾಲಿಸಬೇಕು’ ಎಂದು ಹೇಳಿದ್ದಾರೆ.
ವರದಿ:ಪೊಲಿಟಿಕಲ್ ಬ್ಯೂರೋ ಸ್ಪೀಡ್ ನ್ಯೂಸ್ ಕನ್ನಡ