ವಲಸೆ ಕಾರ್ಮಿಕ ಕುಟುಂಬಕ್ಕೆ 10 ಸಾವಿರ ರೂಪಾಯಿ ನೀಡಬೇಕು

ಹೈದರಾಬಾದ್ : ವಲಸೆ ಕಾರ್ಮಿಕರು ಈಗಾಗಲೇ ಹಣವಿಲ್ಲದೆ 2 ತಿಂಗಳು ಕಳೆದಿದ್ದಾರೆ. ಪ್ರಸ್ತುತ ಬಿಕ್ಕಟ್ಟನ್ನು ಎದುರಿಸಲು ಸರ್ಕಾರ ತುರ್ತಾಗಿ ಪ್ರತಿ ವಲಸೆ ಕಾರ್ಮಿಕ ಕುಟುಂಬಕ್ಕೆ 10 ಸಾವಿರ ರೂಪಾಯಿ ನೀಡಬೇಕು ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.ಈ ಬಗ್ಗೆ ಟ್ವಿಟರ್​ನಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಅವರು, ದೇಶದಲ್ಲಿ ಲಾಕ್​ಡೌನಿಂದಾಗಿ ವಲಸೆ ಕಾರ್ಮಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಾವು ಕೆಲಸ ಮಾಡುವ ಸ್ಥಳದಿಂದ ತಮ್ಮ ಊರಿಗೆ ಹೋಗಲು ಉಚಿತ ಸಾರಿಗೆ ವ್ಯವಸ್ಥೆ ಮಾಡಬೇಕು. ರೈಲ್ವೆ ಇಲಾಖೆ ಆದಷ್ಟು ಹೆಚ್ಚು ರೈಲುಗಳನ್ನು ಓಡಿಸಬೇಕು ಎಂದು ಒತ್ತಾಯಿಸಿದ್ದಾರೆ.ರಾಜ್ಯಕ್ಕೆ ಮರಳಿದ ನಂತರ ಪರೀಕ್ಷೆ ನಡೆಸಿ ಪ್ರತಿ ವಲಸೆ ಕಾರ್ಮಿಕ ಕುಟುಂಬಕ್ಕೆ ಪ್ರಸ್ತುತ ಬಿಕ್ಕಟ್ಟನ್ನು ಎದುರಿಸಲು 10 ಸಾವಿರ ರೂಪಾಯಿ ನೀಡಬೇಕು. ಈಗಾಗಲೇ ಹಣವಿಲ್ಲದೆ 2 ತಿಂಗಳು ಕಳೆದಿದ್ದಾರೆ. ಮುಂದಿನ ಎರಡು ತಿಂಗಳುಗಳ ಕಾಲ ಅವರು ಹಣ ಗಳಿಸಲು ಕಷ್ಟವಾಗಬಹುದು. ಹೀಗಾಗಿ ತುರ್ತಾಗಿ 10 ಸಾವಿರ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಪಾದರಕ್ಷೆಗಳೊಂದಿಗೆ ಸುಖಿಸುತ್ತಿದ್ದ  ವಿಕೃತ ಕಾಮಿ ಅರೆಸ್ಟ್

Thu May 28 , 2020
ಥಾಯ್ಲೆಂಡ್ : ಥಾಯ್ಲೆಂಡ್ ನ 24 ವರ್ಷದ ತ್ರೀರಾಪತ್ ಕ್ಲಾಯ್ ಎಂಬಾತನನ್ನು ಪೊಲೀಸರು ಚಪ್ಪಲಿ ಕಳ್ಳತನದ ಕಾರಣಕ್ಕೆ ಬಂಧಿಸಿದ್ದಾರೆ. ಆತ ಯಾವ ಕಾರಣಕ್ಕೆ ಚಪ್ಪಲಿ ಕದಿಯುತ್ತಾನೆಂದು ಕಾರಣ ಕೇಳಿ ಪೊಲೀಸರು  ದಂಗಾಗಿದ್ದಾರೆ. ಆತನ ಮನೆಯನ್ನು ನೋಡಿದ ಪೊಲೀಸರಿಗೆ ಆಶ್ಚರ್ಯ ಒಂದು  ಕಾದಿತ್ತು.  ಆತ ಕಳೆದ ಎರಡು ವರ್ಷಗಳಿಂದ ನೆರೆಹೊರೆಯವರ ಮನೆಗಳಿಂದ ಕದ್ದಿದ್ದ ಚಪ್ಪಲಿಗಳನ್ನು ಕೂಡಿಟ್ಟಿದ್ದ. ಅಲ್ಲಿ ವಿಭಿನ್ನ ಬಣ್ಣದ, ವಿಭಿನ್ನ ಬ್ರಾಂಡ್ ಗಳ ಪಾದರಕ್ಷೆ ಇದ್ದವು. ಆಘಾತಕಾರಿ ಎಂದರೆ ಲೈಂಗಿಕ […]

Advertisement

Wordpress Social Share Plugin powered by Ultimatelysocial