ಪಕ್ಷಾಂತರ ವಿಷಯದಲ್ಲಿ ಸ್ಪೀಕರ್ ನಿರ್ಣಯವೇ ಅಂತಿಮವಾಗಬೇಕು. ಈ ವಿಷಯದಲ್ಲಿ ಸ್ಪೀಕರಿಗೆ ಸಂಪೂರ್ಣ ಅಧಿಕಾರ ಕೊಡಬೇಕು. ಜೊತೆಗೆ ಇಂತಹ ಕೇಸ್ಗಳು ಮೂರು ತಿಂಗಳ ಒಳಗೆ ಇತ್ಯರ್ಥ ಆಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಸಂವಿಧಾನದ ಪರಿಚ್ಚೇದ ೧೦ಕ್ಕೆ ತಿದ್ದುಪಡಿ ತರುವ ವಿಚಾರವಾಗಿ ವಿಧಾನಸೌಧದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ವಿಶೇಷ ಚರ್ಚಾ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿ ನಮ್ಮ ಅಭಿಪ್ರಾಯವನ್ನ ಸ್ಪೀಕರ್ಗೆ ಹೇಳಿದ್ದೇವೆ. ಯಾರೇ ಪಕ್ಷಾಂತರಿಗಳು ಆದರೂ ಎರಡೂ ಬಾರಿ ಎಲೆಕ್ಷನ್ಗೆ ನಿಲ್ಲಬಾರದು ಎಂದರು.
ಪಕ್ಷಾಂತರ ವಿಷಯದಲ್ಲಿ ಸ್ಪೀಕರ್ ನಿರ್ಣಯ ಅಂತಿಮ
Please follow and like us: