ದೇಶಾದಾದ್ಯಂತ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಪ್ರಕರಣಗಳನ್ನುದ್ದೇಶಿಸಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಪ್ರಮಾಣ ಮಾಡಿದಂತೆಯೇ ದೇಶದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದಾಗಿ ಹೇಳಿದ್ದಾರೆ.
ಟ್ರಂಪ್ ಅವರು ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಶ್ವೇತ ಭವನದ ಹತ್ತಿರ ರಕ್ಷಣಾ ಪಡೆಗಳು ಹಾಗೂ ಪ್ರತಿಭಟನಾ ನಿರತರ ನಡುವೆ ಘರ್ಷಣೆ ನಡೆಯಿತು. ಇದನ್ನು ತಡೆಯಲು ಸಾವಿರಾರು ಸೈನಿಕರನ್ನು ನಿಯೋಜಿಸುವುದಾಗಿ ಎಚ್ಚರಿಕೆ ನೀಡಿದ್ರು.
ಅಮೆರಿಕನ್ನರೇ, ಅಧ್ಯಕ್ಷನಾಗಿ ನನ್ನ ಅತ್ಯುನ್ನತ ಕರ್ತವ್ಯವೆಂದರೆ, ನಮ್ಮ ಮಹಾನ್ ದೇಶ ಮತ್ತು ಅಮೇರಿಕನ್ನರನ್ನು ರಕ್ಷಿಸುವುದು ಹಾಗೂ ನಮ್ಮ ರಾಷ್ಟçದ ಕಾನೂನನ್ನು ಎತ್ತಿ ಹಿಡಿಯುವುದಾಗಿ ಪ್ರಮಾಣ ಮಾಡಿದ್ದೇನೆ ಅದನ್ನೇ ಪಾಲಿಸುತ್ತೇನೆ ಎಂದಿದ್ದಾರೆ.
ದೇಶದ ರಕ್ಷಣೆ ನನ್ನ ಹೊಣೆ / ಟ್ರಂಪ್ ವಿಶ್ವಾಸ
Please follow and like us: