ವಾಷಿಂಗ್ಟನ್: ಕೊರೊನಾ ಸೊಂಕಿನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಅಮೆರಿಕ, ಜಗತ್ತಿನಲ್ಲಿಯೇ ಅತ್ಯಧಿಕ ಕೋವಿಡ್-೧೯ ಪ್ರಕರಣಗಳನ್ನು ಹೊಂದಿದೆ. ಕಳೆದ ೨೪ ಗಂಟೆಗಳಲ್ಲಿ ಸೊಂಕಿನಿಂದ ೨,೭೦೦ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.
ಜಾನ್ಸ್ ಹಾಪ್ಕಿನ್ಸ್ ಯೂನಿವರ್ಸಿಟಿ ಮಾಹಿತಿ ಪ್ರಕಾರ ಒಂದೇ ದಿನದಲ್ಲಿ ೨,೭೫೧ ಮಂದಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದು, ೪೪,೮೫೪ ಜನ ಸಾವಿಗೀಡಾಗಿದ್ದಾರೆ.
ಬಿಎನ್ಒ ನ್ಯೂಸ್ ವೆಬ್ಸೈಟ್ ಪ್ರಕಾರ, ಜಗತ್ತಿನಾದ್ಯಂತ ೨೪,೭೯,೪೯೮ ಪ್ರಕರಣಗಳು ದಾಖಲಾಗಿದ್ದು, ಸೊಂಕಿನಿಂದ ೧,೭೦,೩೨೨ ಮಂದಿ ಮೃತಪಟ್ಟಿದ್ದಾರೆ. ಹಾಗೂ ೬,೧೨,೬೮೧ ಜನ ಗುಣಮುಖರಾಗಿದ್ದಾರೆ.
ಅಮೆರಿಕದಲ್ಲಿ ಒಂದೇ ದಿನಕ್ಕೆ ೪೦ ಸಾವಿರ ಹೊಸ ಸೋಂಕು ಪ್ರಕರಣ
Please follow and like us: