ಬೆಂಗಳೂರು: ಕೊಟ್ಯಾಂತರ ಜೀವರಾಶಿಗಳಿಗೆ ಇರೋದು ಒಂದೇ ಭೂಮಿ. ಹೀಗಾಗಿ ಈ ಭೂಮಿಯ ರಕ್ಷಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ವಿಶ್ವ ಪರಿಸರ ದಿನಾಚರಣೆ, ವಿಶ್ವ ಆರೋಗ್ಯ ದಿನಾಚರಣೆಯಂತೆಯೇ ಇಂದು ವಿಶ್ವ ಭೂದಿನ. ವಿಶ್ವ ಭೂ ದಿನದಂದು ಪವರ್ ಸ್ಟಾರ್ ಪುನೀತ್ರಾಜ್ಕುಮಾರ ನಾವು ನಮ್ಮ ಭೂಮಿಯನ್ನು ಸಂರಕ್ಷಿಸೋಣ ಮುಂದೆ ಅದು ನಮ್ಮನ್ನು ರಕ್ಷಿಸುತ್ತದೆ ಅಂತ ಅಭಿಮಾನಿಗಳಿಗೆ ಭೂರಕ್ಷಣೆಗೆ ಕರೆ ನೀಡುವುದರ ಜೊತೆಗೆ ಪುನೀತ್ ರಾಜ್ಕುಮಾರ್ ಟ್ವೀಟ್ ಮಾಡಿದ್ದಾರೆ. ಮನೆಯಲ್ಲೇ ಇರಿ. ಸುರಕ್ಷಿತವಾಗಿರಿ ಅಂತ ಕಿವಿಮಾತು ಹೇಳೋ ಜೊತೆಗೆ ವರನಟ ಡಾ.ರಾಜ್ಕುಮಾರ್ ಅವರನ್ನು ಪ್ರಕೃತಿ (ಮರ)ಯಂತೆ ಬಿಂಬಿಸಿ ಡಾ.ಬಿ.ಕೆ.ಎಸ್.ವರ್ಮಾ ಚಿತ್ರಿಸಿರುವ ಚಿತ್ರವನ್ನು ಪುನೀತ್ರಾಜ್ಕುಮಾರ್ ಪೋಸ್ಟ್ ಮಾಡಿದ್ದಾರೆ.
ಪವರ್’ಫುಲ್ ಸಂದೇಶ..!
Please follow and like us: