ನಾಸಾದಿಂದ ತಯಾರಾಯ್ತು ‘ವಿಟಲ್’

ವಾಷಿಂಗ್ಟನ್: ಕರೊನಾ ಸೋಂಕಿತರಿಗೆ ವಿಶೇಷ ಹಾಗೂ ಪರಿಣಾಮಕಾರಿ ರೀತಿಯಲ್ಲಿ ಚಿಕಿತ್ಸೆ ನೀಡುವಂಥ ವೆಂಟಿಲೇಟರ್ ಅನ್ನ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಅಭಿವೃದ್ಧಿ ಪಡಿಸಿದೆ. ಇದು ಕರೊನಾ ಸೋಂಕಿತರಿಗೆ ಅಗತ್ಯವಾಗಿ ಬೇಕಾಗಿರುವಂಥ ಅಧಿಕ ಒತ್ತಡದ ವೆಂಟಿಲೇಟರ್ ಆಗಿದ್ದು ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಇದರಿಂದ ಸಾಧ್ಯ ಎಂದು ನಾಸಾ ಹೇಳಿದೆ. ಇದಕ್ಕೆ ‘ವಿಟಲ್ (ವೆಂಟಿಲೇಟರ್ ಇಂಟರ್ವೆನ್ಷನ್ ಟೆಕ್ನಾಲಜಿ) ಎಂದು ಹೆಸರಿಸಲಾಗಿದೆ. ಇದನ್ನು ಈಗಾಗಲೇ ನ್ಯೂಯಾರ್ಕ್ನ ಇಕಾನ್ ಸ್ಕೂಲ್ ಆಫ್ ಮೆಡಿಸಿನ್ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅಲ್ಲಿ ಪಾಸಾಗಿ ಬಂದಿದೆ.
ಆರಂಭಿಕ ಹಂತದಲ್ಲಿ ಸೋಂಕಿತರಾದವರ ಪತ್ತೆಗೆ ಹಾಗೂ ಚಿಕಿತ್ಸೆಗೆ ಇದರ ಬಳಕೆ ಸಾಧ್ಯವಾಗಿದೆ. ಕರೊನಾ ಅಂತಿಮ ಹಂತದ ಪರೀಕ್ಷೆಗೆ ಅಗತ್ಯವಾಗಿರುವ ವೆಂಟಿಲೇಟರ್ಗಳು ಈಗ ಲಭ್ಯ ಇವೆ. ಆದರೆ ಆರಂಭಿಕ ಹಂತದ ಬಾಧಿತರಿಗೆ ಇದರ ಅಗತ್ಯತೆ ಇರುವುದನ್ನು ಕಂಡು ಅದರಂತೆ ವಿನ್ಯಾಸಗೊಳಿಸಲಾಗಿದೆ ಎಂದು ನಾಸಾ ಹೇಳಿದೆ.

Please follow and like us:

Leave a Reply

Your email address will not be published. Required fields are marked *

Next Post

ಗ್ರೀನ್ ಜೋನ್ ಅನ್ನು ರೆಡ್ ಝೋನ್ ಮಾಡುತ್ತಿದ್ದಾರೆ: ಡಿ.ಕೆ‌.ಸುರೇಶ್

Fri Apr 24 , 2020
ಬೆಂಗಳೂರು: ಪಾದರಾಯನಪುರ ಕೊರೊನಾ‌ ಸೋಂಕಿತ ಆರೋಪಿಗಳನ್ನು ರಾಮನಗರಕ್ಕೆ ಸ್ಥಳಾಂತರ ಮಾಡಿದ್ದು ಸರಿಯಲ್ಲ ಎಂದು ಸಂಸದ ಡಿ.ಕೆ‌.ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಜೈಲಿನಲ್ಲಿ 177 ಖೈದಿಗಳಿದ್ದರು. ಪಾದರಾಯನಪುರ ಸೋಂಕಿತರಿಗಾಗಿ ಖೈದಿಗಳನ್ನು ಜೈಲಿನಿಂದ ಸ್ಥಳಾಂತರ ಮಾಡಿಸಿದ್ದಾರೆ. ಪಾದರಾಯನಪುರ ಬಂಧಿತರನ್ನು ರಾಮನಗರದಲ್ಲಿ ಕ್ವಾರಂಟೈನ್ ಮಾಡಿದ್ದೇಕೆ?. ರಾಮನಗರ ಗ್ರೀನ್ ಝೋನ್ ನಲ್ಲಿದೆ. ಆದ್ದರಿಂದ ಇಲ್ಲಿಗೆ ಸ್ಥಳಾಂತರ ಬೇಡ ಎಂದು ಹೇಳಿದ್ದೆವು. ಆದರೂ ಸಹ ಬಿಜೆಪಿಯವರು ಉದ್ದೇಶಪೂರ್ವಕವಾಗಿ ರಾಮನಗರ ಜಿಲ್ಲೆಗೆ ಸೋಂಕು ಅಂಟಿಸುವ ಕೆಲಸ […]

Advertisement

Wordpress Social Share Plugin powered by Ultimatelysocial