ನ್ಯೂಯಾರ್ಕ್ ಕೋರ್ಟ್ಗೆ ಭಾರತೀಯ ಮೂಲದ ಸರಿತಾ ಜಡ್ಜ್

ಅಮೆರಿಕನ್ ವಕೀಲರಾಗಿರುವ ಭಾರತೀಯ ಮೂಲದ ಸರಿತಾ ಕೋಮಟಿ ರೆಡ್ಡಿ ನ್ಯೂಯಾರ್ಕ್ ಫೆಡರಲ್ ಕೋರ್ಟ್ನ ಜಡ್ಜ್ ಸ್ಥಾನಕ್ಕೆ ನಾಮ ನಿರ್ದೇಶನಗೊಂಡಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸರಿತಾರನ್ನ ನಾಮ ನಿರ್ದೇಶನ ಮಾಡಿದ್ದು, ಯುಎಸ್ ಸೆನೆಟ್‌ಗೆ ಕಳಿಸಿಕೊಟ್ಟಿದ್ದಾರೆ. ಸದ್ಯ ಸರಿತಾ, ನ್ಯೂಯಾರ್ಕ್ನ ಈಸ್ಟರ್ನ್ ಡಿಸ್ಟಿçಕ್ಟ್ನ ಯುಎಸ್ ಅಟರ್ನಿ ಕಚೇರಿಯ ಜನರಲ್ ಕ್ರೆöÊಮ್ಸ್ ಉಪಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಕೊಲಂಬಿಯಾ ಲಾ ಸ್ಕೂಲ್‌ನಲ್ಲಿ ಉಪನ್ಯಾಸಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಹಿಂದೆ ಸರಿತಾ ಅವರು ಅಂತರಾಷ್ಟಿçÃಯ ನಾರ್ಕೊಟಿಕ್ಸ್ ಮತ್ತು ಮನಿ ಲಾಂಡರಿAಗ್ ವಿಭಾಗದ ಆ್ಯಕ್ಟಿಂಗ್ ಡೆಪ್ಯೂಟಿ ಚೀಫ್ ಆಗಿದ್ದರು. ಅಲ್ಲದೆ, ಕಂಪ್ಯೂಟರ್ ಹ್ಯಾಕಿಂಗ್ ಮತ್ತು ಬೌದ್ಧಿಯ ಆಸ್ತಿ ಸಂಯೋಜಕರಾಗಿ ಕಾರ್ಯನಿರ್ವಹಿಸಿದ ಅನುಭವವೂ ಇದೆ.
ಪ್ರತಿಷ್ಟಿತ ಹಾರ್ವರ್ಡ್ ಲಾ ಸ್ಕೂಲ್‌ನಲ್ಲಿ ಕಾನೂನು ಪದವಿ ಪಡೆದ ಸರಿತಾ ಕೋಮಟಿರೆಡ್ಡಿ , ಈ ಹಿಂದೆ ನ್ಯೂಯಾರ್ಕ್ ಫೆಡರಲ್ ಜಡ್ಜ್ ಆಗಿದ್ದ ಜಡ್ಜ್ ಆಗಿದ್ದ ಬ್ರೆಟ್ ಕವನ್ಹಾ ಅವರ ಜೊತೆ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸಿದ್ದರು. ಬಿಪಿ ಡೀಪ್‌ವಾಟರ್ ಹಾರೈಜಾನ್ ಆಯಿಲ್ ಸ್ಟಿಲ್ ಆ್ಯಂಡ್ ಆಫ್‌ಶೋರ್ ಡ್ರಿಲ್ಲಿಂಗ್ ರಾಷ್ಟಿçÃಯ ಸಮಿತಿಯ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಫೆ.೧೨ರಂದೇ ಸರಿತಾರನ್ನ ನ್ಯೂಯಾರ್ಕ್ನ ಈಸ್ಟರ್ನ್ ಡಿಸ್ಟಿçಕ್ಟ್ಗೆ ಯುಎಸ್ ಡಿಸ್ಟಿçಕ್ ಜಡ್ಜ್ ಸ್ಥಾನಕ್ಕೆ ನಾಮ ನಿರ್ದೇಶನ ಕಳಿಸಿಕೊಟ್ಟಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರಕ್ಕೆ ಕಣ್ಣೂ ಇಲ್ಲ, ಕಿವಿಯೂ ಇಲ್ಲ: ಡಿಕೆಶಿ

Tue May 5 , 2020
ಬೆಂಗಳೂರು: ರಾಜ್ಯದ ಕಾರ್ಮಿಕರ ಬಳಿ ಶ್ರೀಮಂತಿಕೆ ಇಲ್ಲದಿರಬಹುದು. ಹಾಗಂತ ಅವರನ್ನು ಕೀಳಾಗಿ ನೋಡಬೇಡಿ. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಿ, ರಾಜ್ಯದ ಅಭಿವೃದ್ಧಿಯಲ್ಲಿ ಅವರ ಪಾತ್ರವೂ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ  ಮಾತನಾಡಿದ ಅವರು, ಈ ಸರ್ಕಾರಕ್ಕೆ ಕಣ್ಣೂ ಇಲ್ಲ, ಕಿವಿಯೂ ಇಲ್ಲ. ವಲಸೆ ಕಾರ್ಮಿಕರನ್ನು ಕೀಳಾಗಿ ನೋಡಬೇಡಿ. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಿ. ಅವರನ್ನು ಹಗಲಿರಳು ರಸ್ತೆಯಲ್ಲಿ ನಿಲ್ಲಿಸಿದಿರಲ್ಲಾ ನಿಮಗೆ ಅದಕ್ಕಿಂತ ನಾಚಿಕೆಗೇಡಿನ ವಿಚಾರ ಬೇರೆ ಬೇಕೆ..?. ನಮ್ಮ […]

Advertisement

Wordpress Social Share Plugin powered by Ultimatelysocial