ರಾಷ್ಟ್ರೀಯ ವಿಜ್ಞಾನ ಮಂಡಳಿಗೆ ಭಾರತೀಯ

ನ್ಯೂಯಾರ್ಕ್‌: ಅಮೆರಿಕ ರಾಷ್ಟ್ರೀಯ ವಿಜ್ಞಾನ ಮಂಡಳಿಗೆ ಭಾರತೀಯ ಮೂಲದ ವಿಜ್ಞಾನಿ ಸುದರ್ಶನಂ ಬಾಬು ಅವರನ್ನು ನೇಮಕ ಮಾಡುವಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶ ಹೊರಡಿಸಿದ್ದಾರೆ. ಈ ಮೂಲಕ, ವಿಶ್ವವಿಖ್ಯಾತವಾಗಿರುವ ಈ ಮಂಡಳಿಗೆ ಆಯ್ಕೆ ಆಗಿರುವ ಮೂರನೆಯ ಭಾರತೀಯರು ಸುದರ್ಶನಂ ಎನಿಸಿಕೊಂಡಿದ್ದಾರೆ. ಪರಿಸರ ವ್ಯವಸ್ಥೆಯಲ್ಲಿ ಸಂಶೋಧನೆ ಕೈಗೊಳ್ಳುವುದು, ಕೈಗಾರಿಕೆಗಳ ಉತ್ಪಾದನೆಯ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವುದರ ಜತೆಗೆ, ಅದಕ್ಕೆ ಸಂಬಂಧಿಸಿದಂತೆ ಪರಿಹಾರಗಳನ್ನು ಒದಗಿಸುವುದು ಹಾಗೂ ಇಂಧನ ಇಲಾಖೆಯ ಉತ್ಪಾದನಾ ಸಾಮರ್ಥ್ಯದ ಹೆಚ್ಚಳ ಕುರಿತಂತೆ ಇವರು ಇನ್ನು ಮುಂದೆ ಕಾರ್ಯ ನಿರ್ವಹಿಸಲಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ದೆಹಲಿಯಲ್ಲಿ ಏರಿಕೆ ಕಂಡ ಕೊರೊನಾ ಸಂಖ್ಯೆ

Tue Apr 21 , 2020
ನವದೆಹಲಿ: ೨೪ ಗಂಟೆಯಲ್ಲಿ ದೇಶದಲ್ಲಿ ೧೮,೬೦೧ ಕೋವಿಡ್ ಸೋಂಕು ಪ್ರಕರಣಗಳ ಪೈಕಿ ೩,೨೫೧ ಮಂದಿ ಗುಣಮುಖರಾಗಿದ್ದಾರೆ. ವಿವಿಧ ರಾಜ್ಯಗಳಲ್ಲಿ ೧೪,೭೫೯ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ೫೯೦ ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದ್ದು, ಒಟ್ಟು ೪,೬೬೬ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಹಾಗೆಯೇ ದೆಹಲಿಯಲ್ಲಿ ೨,೦೮೧ ಪ್ರಕರಣಗಳು, ೪೭ ಮಂದಿ ಸಾವನ್ನಪ್ಪಿದ್ದು, ತಮಿಳುನಾಡಿನಲ್ಲಿ ೧,೫೭೬ ಪ್ರಕರಣಗಳು, ೧೭ ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ […]

Advertisement

Wordpress Social Share Plugin powered by Ultimatelysocial