ಮಂತ್ರಾಲಯದ ರಾಯರ ಮಠದ ಗೋ ಶಾಲೆಯಲ್ಲಿ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್  ರಾಯರ ಸನ್ನಿಧಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಾಬರ್ಟ್ ಯಶಸ್ಸಿನ ಖುಷಿಯಲ್ಲಿರುವ ದರ್ಶನ್ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿದ್ದಾರೆ. ದರ್ಶನ್ ತಮ್ಮ ಆಪ್ತರ ಜೊತೆ ರಾಯರ ಸನ್ನಿಧಾನಕ್ಕೆ ವರ್ಷಗಳ ಬಳಿಕ ಭೇಟಿ ನೀಡಿದ್ದಾರೆ. ರಾಯರ ಮಠದಲ್ಲಿ ನಡೆದ ವೈಭವೋತ್ಸವ ಸಂಭ್ರಮದಲ್ಲಿ ದರ್ಶನ್ ಭಾಗಿಯಾಗಿದ್ದರು. ಬಳಿಕ ಮಠದ ವತಿಯಿಂದ ದರ್ಶನ್ ಅವರಿಗೆ ಸನ್ಮಾನ ಸಹ ಮಾಡಲಾಗಿದೆ.

 

ಇದಾದ ಬಳಿಕ ದರ್ಶನ್ ಪ್ರೀತಿಯ ಗೋಶಾಲೆಗೆ ಭೇಟಿ ನೀಡಿದ್ದಾರೆ. ಗೋಶಾಲೆಯ ಹಸುಗಳ ಜೊತೆ ದರ್ಶನ್ ಸ್ವಲ್ಪ ಸಮಯ ಕಾಲ ಕಳೆದಿದ್ದಾರೆ. ಡಿ ಬಾಸ್ ಹಸುಗಳನ್ನು ವೀಕ್ಷಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Please follow and like us:

One thought on “ಮಂತ್ರಾಲಯದ ರಾಯರ ಮಠದ ಗೋ ಶಾಲೆಯಲ್ಲಿ ದರ್ಶನ್

Leave a Reply

Your email address will not be published. Required fields are marked *

Next Post

650 ಕೋಟಿ ಮೌಲ್ಯದ 24.33 ಎಕರೆ ಸರ್ಕಾರಿ ಜಮೀನು ಕಬಳಿಕೆಗೆ ಸಚಿವ ಅರವಿಂದ ಲಿಂಬಾವಳಿ ಹುನ್ನಾರ...?

Thu Mar 18 , 2021
ಮಹದೇವಪುರ ವಿಧಾನಸಭಾ ಕ್ಷೇತ್ರಕ್ಕೆ ಹತ್ತಿರದಲ್ಲಿ ಇರುವ ವರ್ತೂರು ಹೋಬಳಿಯ ಜುನ್ನಸಂದ್ರದ ಸುಮಾರು 24.33 ಎಕರೆ ಕೆರೆ ಜಮೀನನ್ನು ನುಂಗಲು ಸ್ಥಳೀಯ ಶಾಸಕ, ಸಚಿವ ಅರವಿಂದ ಲಿಂಬಾವಳಿ ಹುನ್ನಾರ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಆರೋಪಿಸಿದರು.   ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯರಾದ, ಜೋಡಿದಾರರಾಗಿದ್ದ ನಾರಾಯಣ ರೆಡ್ಡಿ ಕುಟುಂಬದವರೊಂದಿಗೆ ಸೇರಿಕೊಂಡು ಸುಮಾರು 650 ಕೋಟಿ ಮೌಲ್ಯದ ಕೆರೆ ಜಮೀನನ್ನು ನುಂಗಲು […]

Advertisement

Wordpress Social Share Plugin powered by Ultimatelysocial