ಹೈದ್ರಾಬಾದ್ ಮಾರ್ಗದಲ್ಲಿ ಪ್ರಯಾಣಿಸುವ ಬಸ್​ನಲ್ಲಿ ಸಿಕ್ಕ ಗೋಲ್ಡ್​ ಚೈನ್​ನ್ನು ವಾರಸುದಾರರಿಗೆ ಹಿಂತಿರುಗಿಸಿ ಕೆಎಸ್​ಆರ್​ಟಿಸಿ ಸಿಬ್ಬಂದಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ವಿಜಯಪುರ ನಗರ ಕೆಎಸ್​ಆರ್​ಟಿಸಿ ಘಟಕದ ನಿರ್ವಾಹಕ ಎಸ್.ಜೆ.ಬೊಮ್ಮಣಗಿ ತಮ್ಮ ಪ್ರಾಮಾಣಿಕತೆ ತೋರಿದ್ದಾರೆ. ಇಂದು ಬೆಳಗಿನ ಜಾವ ಹೈದ್ರಾಬಾದ್​ನಿಂದ ವಿಜಯಪುರಕ್ಕೆ ಬಂದ ಬಸ್​ನಲ್ಲಿ ಪತ್ರಕರ್ತ ಚಂದ್ರಕಾಂತ್​ ಮಾವೂರ ಚೈನ್ ಕಳೆದುಕೊಂಡಿದ್ರು. ಆ ಚೈನ್ ನಿರ್ವಾಹಕರಿಗೆ ದೊರಕಿತ್ತು.  ಈ ವೇಳೆ ಆ ಬಸ್​ ನಿರ್ವಾಹಕ ಎಸ್.ಜೆ.ಬೊಮ್ಮಣಗಿ ಪ್ರಯಾಣಿಕರ ರಿಸರ್ವೇಶನ್ ಟಿಕೆಟ್​ನಲ್ಲಿನ ನಂಬರ್​ಗೆ ಕರೆ ಮಾಡಿ […]

ದೆಹಲಿಯಲ್ಲಿ ನಿನ್ನೆ ರೈತರ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 200 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಬಳಿಕ ಅವರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ರೈತರ ಟ್ರ್ಯಾಕ್ಟರ್ ಪೆರೇಡ್ ವೇಳೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಇದುವರೆಗೆ 22 ಎಫ್‌ಐಆರ್ ದಾಖಲಾಗಿದ್ದು, ಘಟನೆಯಲ್ಲಿ 300ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಇದನ್ನೂ ಓದಿ: ಕ್ಯಾಷಿಯರ್‌ನಿಂದ 7 ಲಕ್ಷ ಎಗರಿಸಿದ್ದ ಖದೀಮರು Please follow and like us:

ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಸಿದ್ದರಾಮಯ್ಯ ಇಂದು ಭೇಟಿ ನೀಡಿ ಸ್ಫೋಟ ಸಂಭವಿಸಿದ ಸ್ಥಳ ವೀಕ್ಷಿಸಿದರು. ಹುಣಸೋಡು ಗ್ರಾಮಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು ಗ್ರಾಮಸ್ಥರ ಅಹವಾಲು ಆಲಿಸಿದರು. ಅಕ್ರಮ ಗಣಿಗಾರಿಕೆಯಿಂದ ಆಗುತ್ತಿರುವ ಹಾನಿ ಕುರಿತು ಗ್ರಾಮಸ್ಥರು ಸಿದ್ದರಾಮಯ್ಯ ಅವರಿಗೆ ದೂರು ಸಲ್ಲಿಸಿದರು. ಈ ವೇಳೆ ಶಾಸಕರಾದ ಸಂಗಮೇಶ್, ಮಾಜಿ ಶಾಸಕರಾದ ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸುಂದರೇಶ್ ಮತ್ತಿತರರು ಹಾಜರಿದ್ದರು. ಇದನ್ನೂ ಓದಿ: […]

‘ಖಾತೆ ಹಂಚಿಕೆಯ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಅವರು ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ’ ಎಂದು ನೂತನ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.ರಾಮನಗರದಲ್ಲಿ  ಮಾತನಾಡಿದ ಅವರು, ಇಂತಹದ್ದೇ ಖಾತೆ ಕೊಡಿ ಎಂದು ನಾನು ಅವರಿಗೆ ಮನವಿ ಮಾಡಿಲ್ಲ. ನೀಡುವ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸುತ್ತೇನೆ. ಪಕ್ಷ ನೀಡಿರುವ ಸಚಿವ ಸ್ಥಾನವನ್ನು ಬಳಸಿಕೊಂಡು ತಾಲೂಕನ್ನು ಇನ್ನಷ್ಟು ಅಭಿವೃದ್ಧಿಪಡಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ:ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ರಾಬಿನ್ ನಿಧನ- ಜಾಕ್ಮನ್ ಗೌರವ ಸೂಚಿಸಿ […]

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನೂತನ ಸದಸ್ಯನೊಬ್ಬ ಮಹಿಳಾ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಹಾಗೂ ಓರ್ವ ಕಾನ್ಸ್​ಟೇಬಲ್​ಗೆ ಸನ್ಮಾನ ಮಾಡಿರುವ ಘಟನೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ವಿಜಯಪುರ ಜಿಲ್ಲೆಯ ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಸದಸ್ಯನ ಸನ್ಮಾನಕ್ಕೆ ಪ್ರತಿಯಾಗಿ ಪಿಎಸ್​ಐ ಸಹ ಸಿಹಿ ತಿನ್ನಿಸಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಚುನಾವಣೆಯಲ್ಲಿ ಸಹಕರಿಸಿದ್ದಕ್ಕೆ ಋಣ ತೀರಿಸಿದ್ದಾರೆ ಜನರು ಇದನ್ನೂ ಓದಿ: ಶಾಲಾ-ಕಾಲೇಜು ಆರಂಭದ ಹಿನ್ನೆಲೆ-ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ನಿಂದ […]

ಕೊರೊನಾ ಭೀತಿಯಿಂದ ಕಳೆದ 10 ತಿಂಗಳ ನಂತರ ಶಾಲೆ ಆರಂಭವಾಗಿದ್ದು ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಶಾಲೆಗೆ ವಿಧ್ಯಾರ್ಥಿಗಳು ಬಂದಿದ್ದಾರೆ. ಶಿಕ್ಷಕರು ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ಮೂಲಕ ಆರೋಗ್ಯ ತಪಾಸಣೆ ಮಾಡಿ ಮಾಸ್ಕ್, ಸ್ಯಾನಿಟೈಸ್ ನೀಡಿ ಸಾಮಾಜಿಕ ಅಂತರ ಕಾಪಾಡಿಕೊಂಡು ಶಾಲೆಯ ಪಾಠಗಳು ಆರಂಭಿಸಿದ್ದಾರೆ. ಸರ್ಕಾರಿ ಶಾಲೆಗೆ  ಗ್ರಾಮ ಪಂಚಾಯತಿ ಸದಸ್ಯೆ  ದೇವಕ್ಕ ಲಮಾಣಿ ಮತ್ತು ಮಲ್ಲೇಶಪ್ಪ ಲಮಾಣಿ ಅವರು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಹೂ ನೀಡಿ, ಸಿಹಿ ಹಂಚಿ, […]

ಲಾರಿ ಮತ್ತು ಬೈಕ್ ನಡುವೆ ಅಪಘಾತವಾದ  ಘಟನೆಯು ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗ ಬಳಿ ನಡೆದಿದೆ. ಸ್ಥಳದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯ ತಲೆ ನುಜ್ಜು ಗುಜ್ಜುಗಿದ್ದು, ಮೃತ ವ್ಯಕ್ತಿ ಯಾರೆಂದು ತಿಳಿದಿಲ್ಲ. ಮುಸ್ಲಿಂ ಸಮುದಾಯದಕ್ಕೆ ಸೇರಿದ್ದೂ ಹೆಸರು ತಿಳಿದುಬಂದಿಲ್ಲ. ಈ ಪ್ರಕರಣವು ಅರಸೀಕೆರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಾನು ಯಾವ ಬಣಕ್ಕೂ ಸೇರಿಲ್ಲ -ಜೆ.ಸಿ ಪುರ ಗ್ರಾ.ಪ ಸದಸ್ಯ ಸತೀಶ್ ಸ್ಪಷ್ಟನೆ Please […]

ಚಿಕ್ಕನಾಯಕನಹಳ್ಳಿಯ ತಾಲ್ಲೂಕಿನ ಜೆ ಸಿ ಪುರದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವ ಪಡೆದ ಅಭ್ಯರ್ಥಿಗಳು ಬಿಜೆಪಿ ಮುಖಂಡ ಕಿರಣ್ ಕುಮಾರ್ ಬಣ ಎಂದು ಊಹಾಪೋಹ ಸೃಷ್ಟಿಯಾಗಿತ್ತು .ಇದಕ್ಕೆ ಅಭ್ಯರ್ಥಿಗಳೇ ಸ್ವತಃ ಸ್ಪಷ್ಟನೆ ನೀಡಿದ್ದು ನಾವು ಯಾವ ಪಕ್ಷದ ಮತ್ತು ಯಾವ ಮುಖಂಡರ ಬಣವು ಅಲ್ಲ ಎಂದು ಸ್ಪೀಡ್ ನ್ಯೂಸ್ ಸ್ಪಷ್ಟನೆ ನೀಡಿದ್ದಾರೆ ..ಹೌದು ಜೆ ಸಿ ಪುರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸತೀಶ್ ನಾನು ಯಾವ ಬಣಕ್ಕೂ […]

ಇಂಗ್ಲೆಂಡ್ ನ  ಮಾಜಿ ಕ್ರಿಕೆಟಿಗ ರಾಬಿನ್ ಜಾಕ್ ಮ್ಯಾನ್ ನಿಧನರಾಗಿದ್ದಾರೆ. ಇಂಗ್ಲೆಂಡ್  ಪರ 15 ಏಕದಿನ ಪಂದ್ಯ 4 ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದ ಅವರು ತಮ್ಮ 75 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ನಿವೃತ್ತಿಯ ನಂತರ ಜಾಕ್ಮನ್ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಯಿಸುತ್ತಿದ್ದು ಸಾಕಷ್ಟು ಖ್ಯಾತಿಯನ್ನು ಪಡೆದಿದ್ದರು. ಜಾಕ್ ಮ್ಯಾನ್ ನಿಧನದ ಬಗ್ಗೆ ಅನೇಕ ಹಿರಿಯ ಕ್ರಿಕೆಟಿಗರು ಟ್ವೀಟ್ ಮೂಲಕ  ಸಂತಪ ಸೂಚಿಸಿದ್ದಾರೆ. ಇದನ್ನೂ ಓದಿ: ಸಾಹಸ ಸಿಂಹನ ಪ್ರತಿಮೆ […]

ಕನ್ನಡ ಚಿತ್ರರಂಗದ ಮೇರು ನಟ, ಸಾಹಸ ಸಿಂಹ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಮಾಗಡಿ ರಸ್ತೆಯಲ್ಲಿರುವ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ತಡರಾತ್ರಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದು ವಿಷ್ಣು ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ. ಮತ್ತು ದುಷ್ಕರ್ಮಿಗಳ ಪತ್ತೆಗೆ ವಿಷ್ಣು ಅಭಿಮಾನಿಗಳು ಆಗ್ರಹಿಸಿದ್ದಾರೆ. ಮಾಗಡಿ ರಸ್ತೆ ಪೊಲೀಸರು ಘಟನಾ ಸ್ಥಳ ಪರಿಶೀಲಿಸಿದ್ದು ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ  ಓದಿ: ಜಾಗ್ವಾರ್ ಡಿಕ್ಕಿ- ಸರಣಿ ಅಪಘಾತ […]

Advertisement

Wordpress Social Share Plugin powered by Ultimatelysocial