454-2: ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆ ಅಸ್ತು, ಇಂದು ರಾಜ್ಯಸಭೆಯಲ್ಲಿ ಮಂಡನೆ

ನೂತನ ಸಂಸತ್ತು ಕಟ್ಟಡದ ಕೆಳಮನೆಯ ಲೋಕಸಭೆಯಲ್ಲಿ ಬುಧವಾರ ಮಹಿಳಾ ಮೀಸಲಾತಿ ಮಸೂದೆಯನ್ನು 454 ಮತಗಳ ಬಹುಮತದಿಂದ ಅಂಗೀಕರಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಸಂಸತ್ತಿನಲ್ಲಿ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಮಸೂದೆಯ ವಿರುದ್ಧ ಕೇವಲ ಇಬ್ಬರು ಸಂಸದರು ಮತ ಚಲಾಯಿಸಿದ್ದಾರೆ. ನವದೆಹಲಿ: ನೂತನ ಸಂಸತ್ತು ಕಟ್ಟಡದ ಕೆಳಮನೆಯ ಲೋಕಸಭೆಯಲ್ಲಿ ಬುಧವಾರ ಮಹಿಳಾ ಮೀಸಲಾತಿ ಮಸೂದೆಯನ್ನು 454 ಮತಗಳ ಬಹುಮತದಿಂದ ಅಂಗೀಕರಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಸಂಸತ್ತಿನಲ್ಲಿ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಮಸೂದೆಯ ವಿರುದ್ಧ ಕೇವಲ ಇಬ್ಬರು ಸಂಸದರು ಮತ ಚಲಾಯಿಸಿದ್ದಾರೆ.
ಮಸೂದೆಯನ್ನು ಬೆಂಬಲಿಸುವಾಗ, ಪ್ರತಿಪಕ್ಷಗಳು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಕೋಟಾವನ್ನು ವಿಸ್ತರಿಸಲು ಮತ್ತು ಮುಂಬರುವ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಮಸೂದೆಯನ್ನು ತಕ್ಷಣದ ಅನುಷ್ಠಾನಕ್ಕೆ ತೀವ್ರ ಒತ್ತಡವನ್ನು ಸರ್ಕಾರವನ್ನು ಮೇಲೆ ಹೇರಿದ್ದಾರೆ. ಮತದಾನದ ವೇಳೆ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದರು. ಸದನದಲ್ಲಿ ಹಾಜರಿದ್ದ ಮೂರನೇ ಎರಡರಷ್ಟು ಬಹುಮತದ ಸದಸ್ಯರೊಂದಿಗೆ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದೆ ಎಂದು ಮತದಾನದ ನಂತರ ಸ್ಪೀಕರ್ ಓಂ ಬಿರ್ಲಾ ಘೋಷಿಸಿದರು. ಈಗ ಮಸೂದೆ ರಾಜ್ಯಸಭೆಗೆ ಹೋಗಲಿದೆ.

ಅಲ್ಲದೆ, ಕಾನೂನಾಗಲು ಕನಿಷ್ಠ ಅರ್ಧದಷ್ಟು ರಾಜ್ಯ ಅಸೆಂಬ್ಲಿಗಳು ಅದನ್ನು ಅಂಗೀಕರಿಸಬೇಕು. ಜನಗಣತಿಗೆ ಒತ್ತಾಯ: ದಶಮಾನದ ಜನಗಣತಿಗೆ ಮುನ್ನ ನಡೆಯುವ ಡಿಲಿಮಿಟೇಶನ್(ಕ್ಷೇತ್ರ ಮರುವಿಂಗಡಣೆ) ಅಭಿಯಾನದ ನಂತರವೇ ಮಸೂದೆ ಜಾರಿಗೆ ಬರಲಿದೆ. ನಿನ್ನೆ ಲೋಕಸಭೆಯಲ್ಲಿ ಎಂಟು ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಹಲವಾರು ಮಹಿಳಾ ಸಂಸದರು ಭಾಗವಹಿಸಿದ್ದರು. ಚರ್ಚೆಯನ್ನು ಆರಂಭಿಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಜಾತಿ ಗಣತಿ ಮತ್ತು ಒಬಿಸಿ ಕೋಟಾ ಮಹಿಳೆಯರನ್ನು ಕಾನೂನಿನ ವ್ಯಾಪ್ತಿಗೆ ತರಲು ಒತ್ತಾಯಿಸಿದರು.

ಇದರ ಜಾರಿ ವಿಳಂಬ ಮಹಿಳೆಯರಿಗೆ ಮಾಡುವ ಘೋರ ಅನ್ಯಾಯ ಆಗುವುದರಿಂದ ತಕ್ಷಣವೇ ಕೋಟಾವನ್ನು ಜಾರಿಗೊಳಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಪಕ್ಷಗಳ ಕಳವಳವನ್ನು ದೂರ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಂದಿನ ಸರ್ಕಾರವು ಚುನಾವಣೆ ಮುಗಿದ ಕೂಡಲೇ ಜನಗಣತಿ ಮತ್ತು ಕ್ಷೇತ್ರಮರುವಿಂಗಡಣೆಯನ್ನು ನಡೆಸುತ್ತದೆ ಮತ್ತು ಮೀಸಲಾತಿ ಪ್ರಕ್ರಿಯೆಗೆ ಚಾಲನೆ ನೀಡಲಿದೆ ಎಂದು ಹೇಳಿದರು. 2029 ರ ನಂತರ ಮಸೂದೆಯು ವಾಸ್ತವ ರೂಪದಲ್ಲಿ ಜಾರಿಗೆ ಬರಲಿದೆ ಎಂದು ಸುಳಿವು ನೀಡಿದ ಶಾ, ಒಬಿಸಿಗಳ ಪರವಾಗಿ ಮಾತನಾಡುವವರಿಗಿಂತ ಬಿಜೆಪಿ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಿದೆ ಎಂದು ಪ್ರತಿಪಾದಿಸಿದರು. ಸುಮಾರು ಶೇಕಡಾ 29 ಅಥವಾ 85 ಬಿಜೆಪಿ ಸಂಸದರು, 29 ಕೇಂದ್ರ ಸಚಿವರು ಮತ್ತು ಅದರ 1,358 ಶಾಸಕರಲ್ಲಿ 365, ಅಂದರೆ ಶೇಕಡಾ 27ಕ್ಕಿಂತ ಹೆಚ್ಚು, ಒಬಿಸಿ ವರ್ಗದಿಂದ ಬಂದವರಾಗಿದ್ದಾರೆ ಎಂದು ಶಾ ಹೇಳಿದ್ದರು.

ಡಿಎಂಕೆಯ ಕನಿಮೊಳಿ, ಟಿಎಂಸಿಯ ಮಹುವಾ ಮೊಯಿತ್ರಾ ಎನ್ಸಿಪಿಯ ಸುಪ್ರಿಯಾ ಸುಳೆ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಕೋಟಾವನ್ನು ತಕ್ಷಣ ಜಾರಿಗೆ ತರಬೇಕೆಂದು ಒತ್ತಾಯಿಸಿದರು. ತಕ್ಷಣದ ಅನುಷ್ಠಾನ ಪಕ್ಷಪಾತದ ಆರೋಪಗಳಿಗೆ ಕಾರಣವಾಗಬಹುದು ಎಂದು ಶಾ ಹೇಳಿದರು. ಈ ವಿಷಯವನ್ನು ಡಿಲಿಮಿನೇಷನ್ ಆಯೋಗಕ್ಕೆ ಬಿಡುವುದು ಉತ್ತಮ ಎಂದು ಅವರು ಹೇಳಿದರು, ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಮಾತ್ರ ಮಸೂದೆಯನ್ನು ವಿರೋಧಿಸಿದರು. ಇದೊಂದು ಮಹತ್ವಪೂರ್ಣ ಹೆಜ್ಜೆ. ನನ್ನ ದೃಷ್ಟಿಯಲ್ಲಿ ಈ ಮಸೂದೆ ಅಪೂರ್ಣವಾಗುವುದಕ್ಕೆ ಒಂದು ವಿಷಯವಿದೆ. ಈ ಮಸೂದೆಯಲ್ಲಿ ಒಬಿಸಿ ಮೀಸಲಾತಿಯನ್ನು ಸೇರಿಸುವುದನ್ನು ನಾನು ನೋಡಲು ಬಯಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.

Please follow and like us:

tmadmin

Leave a Reply

Your email address will not be published. Required fields are marked *

Next Post

Manipal Hospitals: ಮಣಿಪಾಲ್‌ ಹಾಸ್ಪಿಟಲ್ಸ್ ಗ್ರೂಪ್‌ ಪಾಲಾದ ಎಎಂಆರ್‌ಐ ಆಸ್ಪತ್ರೆ ಚೈನ್‌; ಇಮಾಮಿ ಗ್ರೂಪ್‌ನಿಂದ ₹2,400 ಕೋಟಿಗೆ ಖರೀದಿ

Thu Sep 21 , 2023
ಬೆಂಗಳೂರು: ಕೋಲ್ಕತ್ತಾ ಮೂಲದ ಎಎಂಆರ್‌ಐ (ಅಡ್ವಾನ್ಸ್‌ಡ್ ಮೆಡಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್) ಆಸ್ಪತ್ರೆಗಳನ್ನು (AMRI hospitals) ಮಣಿಪಾಲ್‌ ಹಾಸ್ಪಿಟಲ್ಸ್‌ (Manipal Hospitals) ಸಂಸ್ಥೆ ಖರೀದಿಸಿದೆ. ಭಾರತದ ಎರಡನೇ ಅತಿದೊಡ್ಡ ಆರೋಗ್ಯ ಸಂಸ್ಥೆಯಾದ ಮಣಿಪಾಲ್ ಹಾಸ್ಪಿಟಲ್ಸ್, ಎಎಂಆರ್‌ಐ ಚೈನ್‌ನ ಶೇ. 84ರಷ್ಟು ಷೇರನ್ನು ಒಟ್ಟು 2,400 ಕೋಟಿ ರೂ.ಗೆ ಪಡೆದುಕೊಂಡಿದೆ. ಇದರೊಂದಿಗೆ ಮಣಿಪಾಲ್ ಹಾಸ್ಪಿಟಲ್ಸ್‌ ಪೂರ್ವ ಭಾರತದ ಅತಿದೊಡ್ಡ ಆಸ್ಪತ್ರೆ ಸರಪಳಿಯಾಗಿ ಬೆಳೆದಿದೆ. ಪೂರ್ವ ಭಾರತದಲ್ಲಿ ಜಟಿಲವಾದ, ಅತ್ಯಾಧುನಿಕವಾದ ಮೂರನೇ ಮತ್ತು ನಾಲ್ಕನೇ ಹಂತದ […]

Advertisement

Wordpress Social Share Plugin powered by Ultimatelysocial