ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ನಗರದ ಹಲವೆಡೆ ಇಂದು ವರುಣನ ಆರ್ಭಟ ಶುರುವಾಗಿದೆ. ಶಾಂತಿನಗರ, ರಾಜಾಜಿನಗರ, ಬಸವೇಶ್ವರನಗರ, ಸುಧಾಮನಗರ, ಚಾಮರಾಜಪೇಟೆ, ರಾಜಾರಾಜೇಶ್ವರಿನಗರ, ಯಲಹಂಕ, ಕತ್ರಿಗುಪ್ಪೆ ಸೇರಿದಂತೆ ಬಹುತೇಕ ಕಡೆ ಬಿರುಗಾಳಿ ಸಹಿತ ಭಾರಿ ಸುರಿಯುತ್ತಿದೆ. ಮಳೆಗೆ, ಲಾಕ್‌ಡೌನ್ ಹಿನ್ನಲೆ ರಸ್ತೆಗಳಲ್ಲಿ ಹಾಕಿದ್ದ ಬ್ಯಾರಿಕೆಡ್‌ಗಳು ದ್ವಂಸವಾಗಿದ್ದು, ನಗರ ಕತ್ತಲಮಯವಾಗಿದೆ. ಮಳೆಯ ಅಬ್ಬರಕ್ಕೆ ಮರಗಳು ಸಹ ಧರೆಗುರುಳಿದ್ದು, ಸಂಜೆ ಹೊತ್ತಿಗೆ ಇನ್ನು ಜೋರು ಮಳೆಯಾಗುವ ಸಂಭವವಿದೆ.
ರಾಜಧಾನಿಯಲ್ಲಿ ವರುಣನ ಆರ್ಭಟ

Please follow and like us: