ವಿಶ್ವಸಂಸ್ಥೆಗೆ ವಿದಾಯ ಹೇಳಿದ ಸಯ್ಯದ್ ಅಕ್ಬರುದ್ದೀನ್

ನ್ಯೂಯಾರ್ಕ್: ವಿಶ್ವ ಸಂಸ್ಥೆಯಲ್ಲಿ ಭಾರತದ ಗೌರವ ಹಾಗೂ ಪ್ರತಿಷ್ಠೆಯನ್ನು ಮತ್ತಷ್ಟು ಮತ್ತಷ್ಟು ಹೆಚ್ಚಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಿ ಜಗತ್ತಿನ ಗಮನ ಸೆಳೆದಿದ್ದ ಭಾರತದ ಖಾಯಂ ಪ್ರತಿನಿಧಿ ಸಯ್ಯದ್ ಅಕ್ಬರುದ್ದೀನ್ ಇಂದು ಸೇವೆಯಿಂದ ನಿವೃತ್ತಿಗೊಂಡರು. ಪ್ರಮುಖವಾಗಿ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ದ ಪಾಕಿಸ್ತಾನ ಸುಳ್ಳು ಆರೋಪ ಮಾಡಿದ ಪ್ರತಿಬಾರಿಯೂ ಪಾಕಿಸ್ತಾನ ಪ್ರತಿನಿಧಿಯ ಬಾಯಿ ಮುಚ್ಚಿಸುವ ರೀತಿ ಸಮರ್ಥ ಉತ್ತರವನ್ನು ಅಕ್ಬರುದ್ದೀನ್ ನೀಡುತ್ತಿದ್ದರು. ೧೯೮೫ ತಂಡಕ್ಕೆ ಸೇರಿದ ಐ ಎಫ್ ಎಸ್ (ಭಾರತೀಯ ವಿದೇಶಾಂಗ ಸೇವೆ) ಅಧಿಕಾರಿ ಯಾಗಿರುವ ಸಯ್ಯದ್ ಅಕ್ಬರುದ್ದೀನ್ ೨೦೧೬ ಜನವರಿಯಿಂದ ವಿಶ್ವ ಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೇವೆಯಿಂದ ನಿರ್ಗಮಿಸುವ ಸಮಯ ಸಮೀಪಿಸಿದೆ ನಮಸ್ಕರಿಸಲು ಸಮಯ ಸೂಕ್ತವಾಗಿದೆ ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಮಸ್ಕರಿಸುತ್ತಿರುವ ವಿಡಿಯೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಸಯ್ಯದ್ ಅಕ್ಬರುದ್ದೀನ್ ಪೋಸ್ಟ್ ಮಾಡಿದ್ದಾರೆ. ಸೇವೆಯಿಂದ ನಿರ್ಗಮಿಸುವ ಮುನ್ನ ಒಂದು ಪುಟ್ಟ ಭಿನ್ನಹ ಎಂದು ಗುಟೆರೆಸ್ ಅವರಿಗೆ ಮನವಿ ಮಾಡಿದ್ದಾರೆ. ಭಾರತೀಯ ಸಂಪ್ರದಾಯ ಪ್ರಕಾರ ಯಾರನ್ನಾದರೂ ಭೇಟಿಯಾದಾಗ, ಇಲ್ಲವೇ ಬೀಳ್ಕೊಡುಗೆ ನೀಡುವಾಗ ಹಲೋ, ಷೇಕ್ ಹ್ಯಾಂಡ್ ಬದಲಿಗೆ ‘ನಮಸ್ತೆ’ ಎಂದು ಹೇಳುತ್ತಾರೆ. ಹಾಗಾಗಿ ಈಗ ನಾನು ನಿಮಗೆ ನಮಸ್ತೆ ಎಂದು ಹೇಳಲು ಬಯಸುತ್ತೇನೆ ಎಂದು ಗುಟೆರಸ್ ಅವರಿಗೆ ಸಯ್ಯದ್ ಹೇಳಿದರು. ಇದಕ್ಕೆ ನಗು ಮೊಗದಿಂದಲೇ ಪ್ರತಿಯಾಗಿ ಗುಟೆರೆಸ್ ನಮಸ್ತೆ ಎಂದು ಹೇಳಿ ಶುಭ ಹಾರೈಸಿದರು.

Please follow and like us:

Leave a Reply

Your email address will not be published. Required fields are marked *

Next Post

ಪಂಚಭೂತಗಳಲ್ಲಿ ಲೀನರಾದ ಬಾಲಿವುಡ್ ಮೇರು ನಟ

Thu Apr 30 , 2020
ಇಂದು ಬೆಳಿಗ್ಗೆ ವಿಧಿವಶರಾಗಿದ್ದ ನಟ ರಿಷಿ ಕಪೂರ್ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಮುಂಬೈನ ಚಂದನ್ ವಾಡಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಿತು. ರಿಷಿ ಕಪೂರ್ ಅವರ ಮಗ ರಣಬೀರ್ ಕಪೂರ್, ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು. ಇನ್ನು ಅಂತ್ಯಕ್ರಿಯೆಯಲ್ಲಿ ರಿಷಿ ಕಪೂರ್ ಪತ್ನಿ ನೀತೂ ಸಿಂಗ್ ಕಪೂರ್, ಪುತ್ರ ರಣಬೀರ್ ಕಪೂರ್, ಸಹೋದರ ರಣಧೀರ್ ಕಪೂರ್, ಕರಿನಾ ಕಪೂರ್, ಸೈಫ್ ಅಲಿಖಾನ್, ಅನಿಲ್ ಅಂಬಾನಿ, ಅಯಾನ್ ಮುರ‍್ಜಿ, ಅಲಿಯಾ ಭಟ್, ಅಭಿಷೇಕ್ ಬಚ್ಚನ್ […]

Advertisement

Wordpress Social Share Plugin powered by Ultimatelysocial