ಹಿಂದಿ ಬಿಗ್‌ಬಾಸ್‌ನ ಮತ್ತೊಂದು ಸೀಸನ್ ಅಂತ್ಯವಾಗಿದೆ ̧ ಗೆದ್ದ ಗಾಯಕನಿಗೆ ಸಿಕ್ಕ ಬಹುಮಾನವೆಷ್ಟು?

 

ಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್‌ಬಾಸ್‌ನ ಮತ್ತೊಂದು ಸೀಸನ್ ಅಂತ್ಯವಾಗಿದೆ. ಆ ಮೂಲಕ ಭಾರಿ ಜನಪ್ರಿಯ ಹೊಂದಿರುವ ಹಿಂದಿ ಬಿಗ್‌ಬಾಸ್‌ನ 16 ಸೀಸನ್‌ ಮುಗಿದಂತಾಗಿದೆ.

2022ರ ಅಕ್ಟೋಬರ್ ನಲ್ಲಿ ಪ್ರಾರಂಭವಾದ ಈ ಶೋ ಬರೋಬ್ಬರಿ 133 ದಿನಗಳ ಕಾಲ ನಡೆದಿದ್ದು ಭಾಗವಹಿಸಿದ್ದ 17 ಸ್ಪರ್ಧಿಗಳಲ್ಲಿ ರ್ಯಾಪರ್, ಗಾಯಕ ಎಂಸಿ ಸ್ಟಾನ್ ಗೆಲುವು ಸಾಧಿಸಿದ್ದಾರೆ.

ನಿನ್ನೆಯಷ್ಟೆ ಬರೋಬ್ಬರಿ ಐದು ಗಂಟೆಗಳ ಕಾಲ ನಡೆದ ಸುದೀರ್ಘ ಫಿನಾಲೆ ಕಾರ್ಯಕ್ರಮದಲ್ಲಿ ನಟ, ನಿರೂಪಕ ಸಲ್ಮಾನ್ ಖಾನ್ ಎಂಸಿ ಸ್ಟಾನ್ ಅವರನ್ನು ವಿಜೇತರನ್ನಾಗಿ ಘೋಷಣೆ ಮಾಡಿದರು.

ದೇಶದ ಇತರ ಭಾಷೆಗಳಲ್ಲಿ ನಡೆವ ಬಿಗ್‌ಬಾಸ್‌ ಶೋಗಳಿಗಿಂತಲೂ ಹೆಚ್ಚು ಬಜೆಟ್‌ನ ಬಿಗ್‌ಬಾಸ್‌ ಎಂದೇ ಹೆಸರಾಗಿರುವ ಹಿಂದಿ ಬಿಗ್‌ಬಾಸ್ ಗೆದ್ದ ಸ್ಟಾನ್‌ಗೆ ಮಾತ್ರ ಭಾರಿ ದೊಡ್ಡ ಮೊತ್ತವೇನೂ ಬಹುವಾಮವಾಗಿ ದೊರೆತಿಲ್ಲ. ಹಿಂದಿ ಬಿಗ್‌ಬಾಸ್ ಸೀಸನ್ 16 ಗೆದ್ದ ಎಂಸಿ ಸ್ಟಾನ್‌ಗೆ ದೊರೆತ ಬಹುಮಾನಗಳ ಕುರಿತ ಮಾಹಿತಿ ಇಲ್ಲಿದೆ.

ಎಂಸಿ ಸ್ಟಾನ್‌ಗೆ 31.80 ಲಕ್ಷ ಹಣವನ್ನು ಬಹುಮಾನದ ಮೊತ್ತವನ್ನಾಗಿ ನೀಡಲಾಗಿದೆ. ಇದರ ಜೊತೆಗೆ ಒಂದು ಕಾರನ್ನೂ ಸಹ ಸ್ಟಾನ್‌ಗೆ ನೀಡಲಾಗಿದೆ. ಆದರೆ ಅದಾವ ಕಾರು ಎಂಬುದು ತಿಳಿದು ಬಂದಿಲ್ಲ. ಆದರೆ 133 ದಿನಗಳ ಕಾಲ ಆಟವಾಡಿದ ಎಂಸಿ ಸ್ಟಾನ್‌ಗೆ ತುಸು ಕಡಿಮೆ ಮೊತ್ತವೇ ದೊರೆತಿದೆ ಎನ್ನಬಹುದು.

ಹಿಂದಿಗೆ ಹೋಲಿಸಿದರೆ ಕನ್ನಡ ಬಿಗ್‌ಬಾಸ್ ಗೆದ್ದವರಿಗೆ ಅದರ ದುಪ್ಪಟ್ಟು ಹಣ ಸಿಗುತ್ತದೆ. ಕೆಲ ತಿಂಗಳ ಹಿಂದಷ್ಟೆ ಮುಗಿದ ಕನ್ನಡ ಬಿಗ್ ಬಾಸ್ ಗೆದ್ದ ರೂಪೇಶ್ ಶೆಟ್ಟಿಗೆ 60 ಲಕ್ಷ ನಗದು ಬಹುಮಾನ ದೊರೆತಿತ್ತು. ರನ್ನರ್ ಅಪ್ ಆದ ರಾಕೇಶ್ ಅಡಿಗಗೆ 12 ಲಕ್ಷ ನಗದು ಬಹುಮಾನ ದೊರೆತಿದೆ. ಆದರೆ ಹಿಂದಿ ಬಿಗ್‌ಬಾಸ್‌ನಲ್ಲಿ ರನ್ನರ್‌ ಅಪ್‌ಗೆ ಯಾವುದೇ ಹಣ ದೊರೆತಿಲ್ಲ!

ಕೆಲ ಮಾಹಿತಿಗಳ ಪ್ರಕಾರ, ಹಿಂದಿ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಗಳಿಗೆ ವಾರವಹಿ ಸಂಭಾವನೆ ಬಹಳ ಹೆಚ್ಚಿಗೆ ಇರುತ್ತದೆಯಂತೆ ಹಾಗಾಗಿಯೇ ಅವರಿಗೆ ಪ್ರೈಜ್ ಮನಿಯಲ್ಲಿ ಕಡಿಮೆ ಕೊಡಲಾಗುತ್ತದೆ ಎಂಬ ಮಾತಿದೆ. ಅಲ್ಲದೆ, ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ಶೋ ನಿರೂಪಣೆ ಮಾಡಲು ನೂರಾರು ಕೋಟಿ ಹಣ ಸಂಭಾವನೆಯಾಗಿ ಪಡೆಯುತ್ತಾರಾದ್ದರಿಂದ ಗೆದ್ದವರಿಗೆ ತುಸು ಕಡಿಮೆ ಹಣವನ್ನೇ ಕೊಡುತ್ತಾರಂತೆ ಆಯೋಜಕರು!

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೆಹಲಿಯಲ್ಲಿರುವ ಬಿಬಿಸಿ ಕಚೇರಿಯ ಮೇಲೆ ಐಟಿ ದಾಳಿ ̤

Tue Feb 14 , 2023
  ದೆಹಲಿ: ದೆಹಲಿಯಲ್ಲಿರುವ ಬಿಬಿಸಿ ಕಚೇರಿಯ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದು, ಬಿಬಿಸಿ ಕಚೇರಿಯ ಸಿಬ್ಬಂದಿಯ ಫೋನ್‌ ಗಳನ್ನು ಜಪ್ತಿ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಗುಜರಾತ್‌ ಗಲಾಭೆ ಬಗ್ಗೆ ಸಾಕ್ಷ್ಯಚಿತ್ರ ಮಾಡಿದ್ದ ಬಿಬಿಸಿ ಕಚೇರಿ ಸಾಕ್ಷ್ಯಚಿತ್ರ ಪ್ರಸಾರ ಮಾಡದಂತೆ ನಿಷೇಧ ಕೇಂದ್ರ ಹೇರಲಾಗಿತ್ತು. ಟ್ವೀಟ್‌ ಮಾಡಿ ಕಾಂಗ್ರೆಸ್‌ ಕೇಂದ್ರ ವಿರುದ್ಧ ಕಿಡಿ ಕಾರಿದ್ದಾರೆ. ಈ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. 60ರಿಂದ 70 […]

Advertisement

Wordpress Social Share Plugin powered by Ultimatelysocial