೫೧೦೦ ಸಿಬ್ಬಂದಿ ನೇಮಕಕ್ಕೆ ಏರ್ ಇಂಡಿಯಾ ಸಿದ್ಧತೆ.

 

ಇತ್ತೀಚಿಗಷ್ಟೇ ೩೦೦ಕ್ಕೂ ಅಧಿಕ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಏರ್ ಇಂಡಿಯಾ ಇದೀಗಈ ವರ್ಷದೊಳಗೆ ಪೈಲಟ್ ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗಳ ಸೇರಿದಂತೆ ಒಟ್ಟು ೫೧೦೦ ಸಿಬ್ಬಂದಿ ನೇಮಕಕ್ಕೆ ಮುಂದಾಗಿದೆ.೯೦೦ ಪೈಲಟ್‌ಗಳು ಸೇರಿದಂತೆ ಒಟ್ಟು ೫,೧೦೦ ಮಂದಿಗೆ ಟಾಟಾ ಸಮೂಹದ ಏರ್ ಇಂಡಿಯಾದಲ್ಲಿ ಉದ್ಯೋಗಾವಕಾಶ ಸಿಗಲಿದೆ. ದೇಶದ ನಾನಾ ಸ್ಥಳಗಳಲ್ಲಿ ನೇಮಕಾತಿ ನಡೆಯಲಿದೆ. ಬಳಿಕ ೧೫ ದಿನಗಳ ತರಬೇತಿ ನೀಡಲಾಗುವುದು.೨೦೨೨ರ ಮೇ ಮತ್ತು ೨೦೨೩ರ ಫೆಬ್ರವರಿ ನಡುವೆ ಏರ್ ಇಂಡಿಯಾ ೧೯೦೦ ಕ್ಯಾಬಿನ್ ಸಿಬ್ಬಂದಿಯನ್ನು ನೇಮಿಸಿತ್ತು. ಏರ್ ಇಂಡಿಯಾ ಮುಂದಿನ ೧೦ ವರ್ಷಗಳಲ್ಲಿ ೪೭೦ ವಿಮಾನಗಳನ್ನು ಖರೀದಿಸಲು ಏರ್‌ಬಸ್ ಮತ್ತು ಬೋಯಿಂಗ್ ಜತೆ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿದೆ. ಈ ವಿಮಾನ ಖರೀದಿ ೮೪೦ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.ಏರ್‌ಬಸ್ ಫ್ರಾನ್ಸ್ ಮೂಲದ ಏರ್‌ಲೈನ್ ಆಗಿದ್ದರೆ, ಬೋಯಿಂಗ್ ಅಮೆರಿಕ ಮೂಲದ ಏರ್‌ಲೈನ್ ಕಂಪನಿಯಾಗಿದೆ. ಏರ್ ಇಂಡಿಯಾವು ಏರ್‌ಬಸ್‌ನಿಂದ ಕಳೆದ ೧೭ ವರ್ಷಗಳ ಬಳಿಕ ಮೊದಲ ಸಲ ವಿಮಾನವನ್ನು ಖರೀದಿಸುತ್ತಿದೆ. ಈ ಡೀಲ್ ಪರಿಣಾಮ ಅಮೆರಿಕದಲ್ಲಿ ೧೦ ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ.ಭಾರತಕ್ಕೆ ಮುಂದಿನ ೧೫ ವರ್ಷಗಳಲ್ಲಿ ೨,೦೦೦ ವಿಮಾನಗಳ ಅಗತ್ಯವಿದೆ. ಏರ್ ಇಂಡಿಯಾದ ಐತಿಹಾಸಿಕ ವಿಮಾನಗಳ ಖರೀದಿ ಡೀಲ್‌ನ ಮೌಲ್ಯ ೧೧೫ ಶತಕೋಟಿ ಡಾಲರ್. ಹೀಗಾಗಿ ಭಾರತದಲ್ಲೂ ಮುಂದಿನ ದಶಕದಲ್ಲಿ ಏರ್ ಇಂಡಿಯಾ ಒಂದರಲ್ಲಿಯೇ ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

5100 ಪೈಲೆಟ್, ಕ್ಯಾಬಿನ್ ಸಿಬ್ಬಂದಿ ನೇಮಕ ಏರ್ ಇಂಡಿಯಾ ಪ್ರಕಟ.

Sun Feb 26 , 2023
    ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ದಾಖಲೆಯ ವಿಮಾನ ಒಪ್ಪಂದದ ನಂತರ 5,100 ಕ್ಯಾಬಿನ್ ಸಿಬ್ಬಂದಿ ಮತ್ತು ಪೈಲಟ್‌ಗಳನ್ನು ನೇಮಿಸಿಕೊಳ್ಳುವುದಾಗಿ ಪ್ರಕಟಿಸಿದೆ.ಶತಕೋಟಿ ಡಾಲರ್ ಮೌಲ್ಯದ ಒಪ್ಪಂದಗಳ ಅಡಿಯಲ್ಲಿ ಬೋಯಿಂಗ್ ಮತ್ತು ಏರ್‌ಬಸ್‌ನಿಂದ 470 ವಿಮಾನ ಖರೀದಿಸಲು ವಾಹಕ ನೌಕೆಯು ಆರ್ಡರ್ ಮಾಡಿದ ಬೆನ್ನಲ್ಲೇ ಈ ಪ್ರಕಟಣೆ ಹತ್ತಿರದಲ್ಲಿದೆ.ಏರ್‌ಲೈನ್ಸ್ ತನ್ನ ದೇಶೀಯ ಮತ್ತು ಅಂತರಾಷ್ಟ್ರೀಯ ಕಾರ್ಯಾಚರಣೆಗಳನ್ನು ವಿಸ್ತರಿಸುತ್ತಿರುವುದರಿಂದ ಈ ವರ್ಷ 4,200 ಕ್ಯಾಬಿನ್ ಕ್ರೂ ಟ್ರೈನಿಗಳು ಮತ್ತು 900 ಪೈಲಟ್‌ಗಳನ್ನು […]

Advertisement

Wordpress Social Share Plugin powered by Ultimatelysocial