ಬೆಂಗಳೂರು : ಲಾಕ್ ಡೌನ್ ನಿಂದಾಗಿ ಅಗತ್ಯ ವಸ್ತುಗಳು ಸಿಗದೇ ಕಷ್ಟದಲ್ಲಿರುವ ನಗರದ ಜನತೆಗೆ ,ಮಹಾನಗರ ಪಾಲಿಕೆ ಸಿಹಿಸುದ್ದಿ ನೀಡಿದ್ದು, ಅಗತ್ಯ ವಸ್ತುಗಳನ್ನು ಪೂರೈಸುವ ಸಹಾಯವಾಣಿಯನ್ನು ಆರಂಭಿಸಿದೆ. ಜನರು ಹೋಂ ಡೆಲಿವರಿ ಸಹಾಯವಾಣಿ ೦೮೦-೬೧೯೧೪೯೬೦ ಸಂಖ್ಯೆಗೆ ಕರೆ ಮಾಡಿದರೆ ದಿನಸಿ, ತರಕಾರಿ,ಔಷಧಿ ಮುಂತಾದ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸಲಾಗುತ್ತದೆ. ಇದಕ್ಕೆ ಹೆಚ್ಚುವರಿಯಾಗಿ ೧೦ ರೂ. ಸೇವಾಶುಲ್ಕ ಪಡೆಯಲಾಗುತ್ತದೆ. ಖಾಸಗಿ ಏಜೆನ್ಸಿಯ ಸಹಯೋಗದಲ್ಲಿ ಅಗತ್ಯ ವಸ್ತುಗಳನ್ನು ನೀಡಲಾಗುತ್ತದೆ. ಇದಕ್ಕಾಗಿ ೫ ಸಾವಿರ […]

ವಾಷಿಂಗ್ಟನ್: ಕೊರೊನಾ ಸೊಂಕಿನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಅಮೆರಿಕ, ಜಗತ್ತಿನಲ್ಲಿಯೇ ಅತ್ಯಧಿಕ ಕೋವಿಡ್-೧೯ ಪ್ರಕರಣಗಳನ್ನು ಹೊಂದಿದೆ. ಕಳೆದ ೨೪ ಗಂಟೆಗಳಲ್ಲಿ ಸೊಂಕಿನಿಂದ ೨,೭೦೦ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಜಾನ್ಸ್ ಹಾಪ್‌ಕಿನ್ಸ್ ಯೂನಿವರ್ಸಿಟಿ ಮಾಹಿತಿ ಪ್ರಕಾರ ಒಂದೇ ದಿನದಲ್ಲಿ ೨,೭೫೧ ಮಂದಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದು, ೪೪,೮೫೪ ಜನ ಸಾವಿಗೀಡಾಗಿದ್ದಾರೆ. ಬಿಎನ್‌ಒ ನ್ಯೂಸ್ ವೆಬ್‌ಸೈಟ್ ಪ್ರಕಾರ, ಜಗತ್ತಿನಾದ್ಯಂತ ೨೪,೭೯,೪೯೮ ಪ್ರಕರಣಗಳು ದಾಖಲಾಗಿದ್ದು, ಸೊಂಕಿನಿಂದ ೧,೭೦,೩೨೨ ಮಂದಿ ಮೃತಪಟ್ಟಿದ್ದಾರೆ. ಹಾಗೂ ೬,೧೨,೬೮೧ ಜನ […]

ಶಾಸಕ ಜಮೀರ್ ಅಹ್ಮದ್ ಅವರನ್ನ ಹೋಮ್ ಕ್ವಾರಂಟೈನ್ ಮಾಡಬೇಕು ಅಂತ ಆರೋಗ್ಯ ಸಚಿವ ಶ್ರೀರಾಮುಲು ಬಳ್ಳಾರಿಯಲ್ಲಿ ಹೇಳಿದ್ದಾರೆ. ಅಲ್ಲದೆ ಪಾದರಾಯನ ಪುರಕ್ಕೆ ಭೇಟಿ ನೀಡಿದ್ದ ಗೃಹಸಚಿವ ಬಸವರಾಜ್ ಬೊಮ್ಮಯಿ ಅವರನ್ನ ಕೂಡಾ ತಪಾಸಣೆ ಮಾಡಬೇಕಿದೆ ಅಂತ ಹೇಳಿದ್ದಾರೆ. ಈ ಹಿಂದೆ ವೃದ್ಧೆಯೊಬ್ಬರ ಸಾವಿಗೆ ಜಮೀರ್ ಅಹ್ಮದ್ ತೆರಳಿದ್ರು. ಅಲ್ಲಿ ಸುಮಾರು ೨೫ ಜನ ಸೇರಿದ್ರು. ಹೀಗಾಗಿ ಶಾಸಕ ಜಮೀರ್ ಅವರನ್ನ ಹೋಮ್ ಕ್ವಾರಂಟೈನ್ ಮಾಡಬೇಕು ಅಂತ ಹೇಳಿದ್ದಾರೆ.

ರಾಮನಗರ: ಪಬ್ಲಿಕ್ ಟಿವಿ ವರದಿಗಾರ ಹನುಮಂತ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ರಾಮನಗರ ಜಿಲ್ಲಾ ಕಾರಾಗೃಹದ ಮುಂಭಾಗದಲ್ಲಿ ನಡೆದಿದೆ.  ಪಾದರಾಯನಪುರ ಗಲಭೆಯ ಆರೋಪಿಗಳನ್ನ ರಾಮನಗರದ ಕಾರಾಗೃಹಕ್ಕೆ ಕರೆತಂದಿದ್ದ ಸುದ್ದಿ ಮಾಡಿ ಬರುತ್ತಿದ್ದ ಸಂಧರ್ಭದಲ್ಲಿ ಹಿಂದಿನಿಂದ ಬಂದ ATM ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಪಬ್ಲಿಕ್ ವರದಿಗಾರ ಹನುಮಂತು ಕಳೆದ 6 ವರ್ಷಗಳಿಂದಲೂ ರಾಮನಗರ ವದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಹನುಮಂತು ನಿಧನಕ್ಕೆ ರಾಮನಗರ ಜಿಲ್ಲಾ ಪತ್ರಕರ್ತರು ಸಹೋದ್ಯೋಗಿಗಳು ಕಂಬನಿ‌ ಮಿಡಿದಿದ್ದಾರೆ.    

ನವದೆಹಲಿ: ೨೪ ಗಂಟೆಯಲ್ಲಿ ದೇಶದಲ್ಲಿ ೧೮,೬೦೧ ಕೋವಿಡ್ ಸೋಂಕು ಪ್ರಕರಣಗಳ ಪೈಕಿ ೩,೨೫೧ ಮಂದಿ ಗುಣಮುಖರಾಗಿದ್ದಾರೆ. ವಿವಿಧ ರಾಜ್ಯಗಳಲ್ಲಿ ೧೪,೭೫೯ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ೫೯೦ ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದ್ದು, ಒಟ್ಟು ೪,೬೬೬ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಹಾಗೆಯೇ ದೆಹಲಿಯಲ್ಲಿ ೨,೦೮೧ ಪ್ರಕರಣಗಳು, ೪೭ ಮಂದಿ ಸಾವನ್ನಪ್ಪಿದ್ದು, ತಮಿಳುನಾಡಿನಲ್ಲಿ ೧,೫೭೬ ಪ್ರಕರಣಗಳು, ೧೭ ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ […]

ನ್ಯೂಯಾರ್ಕ್‌: ಅಮೆರಿಕ ರಾಷ್ಟ್ರೀಯ ವಿಜ್ಞಾನ ಮಂಡಳಿಗೆ ಭಾರತೀಯ ಮೂಲದ ವಿಜ್ಞಾನಿ ಸುದರ್ಶನಂ ಬಾಬು ಅವರನ್ನು ನೇಮಕ ಮಾಡುವಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶ ಹೊರಡಿಸಿದ್ದಾರೆ. ಈ ಮೂಲಕ, ವಿಶ್ವವಿಖ್ಯಾತವಾಗಿರುವ ಈ ಮಂಡಳಿಗೆ ಆಯ್ಕೆ ಆಗಿರುವ ಮೂರನೆಯ ಭಾರತೀಯರು ಸುದರ್ಶನಂ ಎನಿಸಿಕೊಂಡಿದ್ದಾರೆ. ಪರಿಸರ ವ್ಯವಸ್ಥೆಯಲ್ಲಿ ಸಂಶೋಧನೆ ಕೈಗೊಳ್ಳುವುದು, ಕೈಗಾರಿಕೆಗಳ ಉತ್ಪಾದನೆಯ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವುದರ ಜತೆಗೆ, ಅದಕ್ಕೆ ಸಂಬಂಧಿಸಿದಂತೆ ಪರಿಹಾರಗಳನ್ನು ಒದಗಿಸುವುದು ಹಾಗೂ ಇಂಧನ ಇಲಾಖೆಯ ಉತ್ಪಾದನಾ ಸಾಮರ್ಥ್ಯದ ಹೆಚ್ಚಳ […]

ಪಾದರಾಯನಪುರದಲ್ಲಿ ಬಿ.ಬಿ.ಎಂ.ಪಿ.   ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಹಾಗೂ ಪೋಲಿಸರ ಮೇಲೆ ನಡೆದ ಹಲ್ಲೆಯ ಘಟನೆಯನ್ನು ಶಾಸಕ ಆರ್.ವಿ.ದೇಶಪಾಂಡೆ ಖಂಡಿಸಿದ್ದಾರೆ. ಇಂತಹ ಘಟನೆಗಳು ಪುನರಾ ಆಗದಂತೆ ತಡೆಯಬೇಕಾದರೆ ಹಲ್ಲೆ ಮಾಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

  ಬೆಂಗಳೂರು : ಪ್ರಸಕ್ತ  ಸಾಲಿನಲ್ಲಿ  ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಹಾಗೂ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ-ನೀಟ್) ಬರೆಯಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ತಂತ್ರಜ್ಞಾನ ಆಧರಿತ ‘ ಗೆಟ್‌ಸೆಟ್‌ ತರಬೇತಿ ನೀಡುವ  ಕಾರ್ಯಕ್ರಮಕ್ಕೆ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದಾರೆ.

  ಗುವಾಹಟಿ: ದೇಶದಾದ್ಯಂತ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಲಾಕ್‌ಡೌನ್ ಆದೇಶಿಸಿಸಲಾಗಿದೆ. ಆದ್ರೆ ಅರುಣಾಚಲ ಪ್ರದೇಶದಲ್ಲಿ ಬೇಟೆಗಾರರ ಗುಪೊಂದು ಹಬ್ಬದೂಟಕ್ಕಾಗಿ ೧೨ ಅಡಿ ಉದ್ದದ ಕಾಳಿಂಗ ಸರ್ಪವನ್ನು ಕೊಂದಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪುಟಾಣಿ ಮಕ್ಕಳಿಂದ ಹಿಡಿದು ವೃದ್ಧರು ಕೂಡ ತುಂಬ ಖುಷಿ ಖುಷಿಯಿಂದ ನೋಡುತ್ತಿದ್ದ ಟಾಮ್ ಅಂಡ್ ಜರ‍್ರಿ ಕಾಮಿಡಿ ಸಿರೀಸ್  ನಿರ್ದೇಶಕ ಜೆನಿ ಡಿಚ್,  ಅಮೆರಿಕಾದಲ್ಲಿ ಮೃತಪಟ್ಟಿದ್ದಾರೆ. ಇಬ್ಬರು ಪತ್ನಿಯರು, ಮೂರು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಇವರು ಆನಿಮೇಶನ್‌ನಲ್ಲಿ ಡಿಚ್ ಆಸ್ಕರ್ ಪ್ರಶಸ್ತಿ ಪಡೆದಿದ್ದರು.  

Advertisement

Wordpress Social Share Plugin powered by Ultimatelysocial